More

    ಕನ್ವರ್ ಯಾತ್ರೆ : ಕೇಂದ್ರ ಮತ್ತು ಯುಪಿ ಸರ್ಕಾರಕ್ಕೆ ಸುಪ್ರೀಂ ನೋಟೀಸು

    ನವದೆಹಲಿ : ಕರೊನಾ ಮೂರನೇ ಅಲೆಯ ಆತಂಕ ಇರುವಾಗ, ಕೋಟ್ಯಂತರ ಜನರು ಭಾಗವಹಿಸುವ ಕನ್ವರ್ ಯಾತ್ರೆಯನ್ನು ನಡೆಸಲು ಉತ್ತರಪ್ರದೇಶ(ಯುಪಿ) ಸರ್ಕಾರ ಅನುಮತಿ ನೀಡಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ. ಇದೀಗ, ಸುಪ್ರೀಂ ಕೋರ್ಟ್, ಈ ಬಗ್ಗೆ ವಿಚಾರಣೆ ಕೈಗೆತ್ತಿಕೊಂಡಿದೆ.

    ಕನ್ವರ್ ಯಾತ್ರೆಯಲ್ಲಿ ಕನ್ವರಿಯಾಗಳೆಂದು ಕರೆಯಲ್ಪಡುವ ಭಕ್ತರು, ಗಂಗಾ ನದಿ ತೀರಗಳಿಗೆ ನಡೆದುಕೊಂಡು ಅಥವಾ ವಾಹನಗಳಲ್ಲಿ ತೆರಳಿ, ಕೊಡಗಳಲ್ಲಿ ಗಂಗಾಜಲ ತುಂಬಿಸಿಕೊಂಡು ತಮ್ಮ ಊರಿಗೆ ವಾಪಸಾಗುತ್ತಾರೆ. 2019ರಲ್ಲಿ ಈ ಯಾತ್ರೆಯಲ್ಲಿ, ಸುಮಾರು 3.5 ಕೋಟಿ ಭಕ್ತರು ಉತ್ತರಾಖಂಡದ ಹರಿದ್ವಾರಕ್ಕೆ ಭೇಟಿ ನೀಡಿದ್ದರೆ, 2 ರಿಂದ 3 ಕೋಟಿ ಜನರು ಯುಪಿಯ ಪಶ್ಚಿಮ ಭಾಗದಲ್ಲಿರುವ ತೀರ್ಥಸ್ಥಳಗಳಿಗೆ ಭೇಟಿ ನೀಡಿದ್ದರು ಎನ್ನಲಾಗಿದೆ.

    ಇದನ್ನೂ ಓದಿ: ಕಳೆದ 24 ಗಂಟೆಗಳಲ್ಲಿ 38,792 ಹೊಸ ಪ್ರಕರಣಗಳು!

    ಕರೊನಾ ಹಿನ್ನೆಲೆಯಲ್ಲಿ ಜನಜಂಗುಳಿ ಉಂಟುಮಾಡುವಂಥ ಯಾವುದೇ ಕಾರ್ಯಕ್ರಮಗಳಿಗೆ ಅವಕಾಶ ನೀಡಬಾರದೆಂದು ತಜ್ನರು ಎಚ್ಚರಿಕೆ ನೀಡಿದ್ದಾರೆ. ಕುಂಭ ಮೇಳದ ವಿಷಯದಲ್ಲಿ ಈಗಾಗಲೇ ಕಹಿ ಉಂಡಿರುವ ಉತ್ತರಾಖಂಡ ಸರ್ಕಾರ, ಈ ವರ್ಷ ಕನ್ವರ್​ ಯಾತ್ರೆಗೆ ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟ ನಿಲುವು ತಳೆದಿದೆ. ಆದರೆ, ಸಿಎಂ ಯೋಗಿ ಆದಿತ್ಯನಾಥ್​ ನೇತೃತ್ವದ ಯುಪಿ ಸರ್ಕಾರವು ಜುಲೈ 25 ರಿಂದ ಆಗಸ್ಟ್​ 6 ರವರೆಗೆ ಈ ಯಾತ್ರೆಗೆ ಅವಕಾಶ ಕೊಟ್ಟಿದೆ.

    ಯುಪಿ ಸರ್ಕಾರದ ನಿರ್ಧಾರದ ಬಗೆಗಿನ ಪತ್ರಿಕಾ ವರದಿಯನ್ನು ಉಲ್ಲೇಖಿಸಿದ, ನ್ಯಾಯಮೂರ್ತಿ ರೋಹಿನ್ಟನ್ ಎಫ್ ನಾರಿಮನ್ ನೇತೃತ್ವದ ನ್ಯಾಯಪೀಠವು, ಈ ವಿಚಾರವನ್ನು ಇಂದು ಸುಯೋ ಮೋಟೊ ಕೈಗೆತ್ತಿಕೊಂಡಿತು. ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಮತ್ತು ಯುಪಿ ಸರ್ಕಾರಕ್ಕೆ ನೋಟೀಸು ಜಾರಿ ಮಾಡಿದ ನ್ಯಾಯಪೀಠ, ಜುಲೈ 16 ರ ಶುಕ್ರವಾರಕ್ಕೆ ವಿಚಾರಣೆಯನ್ನು ಗೊತ್ತುಪಡಿಸಿತು. (ಏಜೆನ್ಸೀಸ್)

    3ನೇ ಅಲೆ ಬರುತ್ತಿದೆ… ಮೈಮರೆತು ಜನಜಾತ್ರೆ ಮಾಡಬೇಡಿ: ಐಎಂಎ ಎಚ್ಚರಿಕೆ

    VIDEO | ಊರಿನೊಳಗೆ ಪ್ರತ್ಯಕ್ಷವಾದ ಕಾಡಾನೆ; ಜಮೀನು ರಸ್ತೆಗಳಲ್ಲಿ ಸಂಚಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts