More

    ಧಾರ್ಮಿಕ ಕ್ಷೇತ್ರಗಳಿಗೆ ಮಹಿಳೆಯರ ಪ್ರವೇಶ; ಜನವರಿ 17ರಂದು ವಕೀಲರ ಸಭೆ ಕರೆಯಲು ಸುಪ್ರೀಂಕೋರ್ಟ್​ ಸೂಚನೆ

    ನವದೆಹಲಿ: ವಿವಿಧ ಧರ್ಮ ಹಾಗೂ ಕೇರಳದ ಶಬರಿಮಲೆ ದೇವಾಲಯ ಸೇರಿ ಧಾರ್ಮಿಕ ಸ್ಥಳಗಳಲ್ಲಿ ಮಹಿಳೆಯರ ವಿರುದ್ಧದ ತಾರತಮ್ಯದ ಬಗ್ಗೆ ಚರ್ಚಿ​ಸಲು ಜನವರಿ 17 ರಂದು ಸಭೆ ಕರೆಯುವಂತೆ ನಾಲ್ಕು ಹಿರಿಯ ವಕೀಲರಿಗೆ ಸುಪ್ರೀಂಕೋರ್ಟ್ ಸೂಚಿಸಿದೆ.

    ಇಂದು ಬೆಳಗ್ಗೆ ವಿಚಾರಣೆ ಆರಂಭಿಸಿದಾಗ ನಾವು ಶಬರಿಮಲೆ ಪ್ರಕರಣದ ಪರಿಶೀಲನಾ ಮನವಿಯನ್ನು ಆಲಿಸುತ್ತಿಲ್ಲ. ಈ ಹಿಂದೆ 5 ನ್ಯಾಯಾಧೀಶರ ಪೀಠವು ಉಲ್ಲೇಖಿಸಿರುವ ವಿಷಯಗಳನ್ನು ನಾವು ಪರಿಗಣಿಸುತ್ತಿದ್ದೇವೆ ಎಂದು ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೊಬ್ಡೆ ನೇತೃತ್ವದ 9 ನ್ಯಾಯಾಧೀಶರ ಸಂವಿಧಾನ ಪೀಠ ಹೇಳಿತು.

    ಮುಸ್ಲಿಂ, ಪಾರ್ಸಿ ಮತ್ತು ದಾವೂಡಿ ಬೊಹ್ರಾ ಮಹಿಳೆಯರ ಪ್ರಕರಣಗಳ ಅರ್ಜಿಗಳ ವಿಚಾರಣೆ ನಡೆಸಲಿದೆ ಎಂದು ತಿಳಿಸಿದ ಪೀಠ, ಸಾಲಿಸಿಟರ್​ ಜನರಲ್​ ತುಷಾರ್​ ಮೆಹ್ತಾ ಮತ್ತು ಎ.ಎಂ. ಸಿಂಘ್ವಿ ಅವರು ಮತ್ತು ವಕೀಲರೊಂದಿಗೆ ಕೋರ್ಟ್​ನ ಪ್ರಧಾನ ಕಾರ್ಯದರ್ಶಿ ಸಂವಹನ ನಡೆಸಲಿ ಎಂದು ಸೂಚಿಸಿತು.

    ಹಾಗೆಯೇ ಸಭೆಯು ಆಯಾಯ ಪ್ರಕರಣಗಳಲ್ಲಿ ವಾದ ಮಾಡಲು ವಕೀಲರ ಸಮಯವನ್ನು ನಿಗದಿಪಡಿಸಲಿ. ಮುಂದಿನ ವಿಚಾರಣೆ ಮೂರು ವಾರಗಳ ನಂತರ ನಡೆಯಲಿದ್ದು ಯಾವ ಪ್ರಕರಣ, ಯಾವ ವಕೀಲರು ವಾದ ಮಾಡುತ್ತಾರೆ ಎಂಬುದನ್ನು ನಿಗದಿಗೊಳಿಸಿ ಎಂದಿತು.

    ಹಾಗೆಯೇ ಶಬರಿ ಮಲೆ ಪ್ರಕರಣದಲ್ಲಿ ನವೆಂಬರ್​ 14ರಂದು ನೀಡಿದ ತೀರ್ಪಿನ ಬಗ್ಗೆ ಗಮನವಿರಲಿ ಎಂದು ವಕೀಲರಿಗೆ ಪೀಠ ಸೂಚಿಸಿತು. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts