More

    ಮುಸ್ಲಿಮರ ಮೀಸಲಾತಿ ರದ್ದು; ಕಾಲಾವಕಾಶ ಕೋರಿದ ಕರ್ನಾಟಕ ಸರ್ಕಾರ, ವಿಚಾರಣೆ ಮುಂದೂಡಿದ ನ್ಯಾಯಾಲಯ

    ನವದೆಹಲಿ: ಇತರೆ ಹಿಂದುಳಿದ ವರ್ಗಗಳ ಅಡಿಯಲ್ಲಿ ಮುಸ್ಲಿಮರಿಗೆ ನೀಡಲಾಗಿದ್ದ ಶೇ.4ರಷ್ಟು ಮೀಸಲಾತಿಯನ್ನು ರದ್ದುಪಡಿಸಿ ಆರ್ಥಿಕ ಹಿಂದುಳಿದ ವರ್ಗ(EWS)ಗಳಿಗೆ ಸೇರಿಸಿದ ಕುರಿತು ನ್ಯಾಯಾಲಯಕ್ಕೆ ಉತ್ತರಿಸಲು ಕರ್ನಾಟಕ ಸರ್ಕಾರ ಕಾಲಾವಕಾಶ ಕೋರಿದೆ.

    ಮೀಸಲಾತಿ ರದ್ದು ಮಾಡಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ನ್ಯಾಯಾಲಯ ಏಪ್ರಿಲ್ 13ರಂದು ವಿಚಾರಣೆ ನಡೆಸಿತ್ತು. ಮುಂದಿನ ವಿಚಾರಣೆಯನ್ನು ಏಪ್ರಿಲ್​ 18ಕ್ಕೆ ಮುಂದೂಡಿತ್ತು.

    ವಿಚಾರಣೆ ಮುಂದೂಡಿಕೆ

    ಮಂಗಳವಾರ ಅರ್ಜಿ ವಿಚಾರಣೆಯನ್ನು ಮುಂದರುವರೆಸಿದ ನ್ಯಾಯಮೂರ್ತಿ ಕೆ.ಎಂ. ಜೋಸೆಫ್​ ಹಾಗೂ ಬಿ.ವಿ. ನಾಗರತ್ನ ಅವರಿದ್ದ ದ್ವಿಸದಸ್ಯ ಪೀಠವು ಸಾಲಿಸಿಟರ್​ ಜನರಲ್​ ತುಷಾರ್​ ಮೆಹ್ತಾ ಅವರ ಮನವಿ ಮೇರೆಗೆ ವಿಚಾರಣೆಯನ್ನು ಏಪ್ರಿಲ್​​ 15ಕ್ಕೆ ಮುಂದೂಡಿತ್ತು.

    ಇದನ್ನೂ ಓದಿ: ಮುಸ್ಲಿಮರ ಮೀಸಲಾತಿ ರದ್ದು; ಕರ್ನಾಟಕ ಸರ್ಕಾರದ ನಿರ್ಧಾರಕ್ಕೆ ಸುಪ್ರೀಂ ಕೋರ್ಟ್​ ಗರಂ

    ಇದಕ್ಕೆ ಪ್ರತಿಕ್ರಿಯಿಸಿದ ಅರ್ಜಿದಾರರ ಪರ ವಖೀಲರಾದ ಕಪಿಲ್​ ಸಿಬಲ್​ ವಾರಾಂತ್ಯದೊಳಗೆ ಕರ್ನಾಟಕ ಸರ್ಕಾರ ಉತ್ತರ ನೀಡಿದ್ದಲ್ಲಿ ಮುಂದಿನ ವಿಚಾರಣೆ ವೇಳೆ ನಾವು ಆಕ್ಷೇಪ ಸಲ್ಲಿಸಲು ಅನುಕೂಲವಾಗುತ್ತದೆ ಎಂದು ಪ್ರತಿಕ್ರಿಯಿಸಿದ್ದರು.

    ವಾದ-ಪ್ರತಿವಾದವನ್ನು ಆಲಿಸಿದ ನ್ಯಾಯಪೀಠವು ಅರ್ಜಿ ವಿಚಾರಣೆಯನ್ನು ಏಪ್ರಿಲ್​ 25ಕ್ಕೆ ಮುಂದೂಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts