More

    RCB vs CSK ಪಂದ್ಯದ ವೇಳೆ ನಿಯಮ ಉಲ್ಲಂಘನೆ; ವಿರಾಟ್​ ಕೊಹ್ಲಿಗೆ ದಂಡ

    ಬೆಂಗಳೂರು: ಸೋಮವಾರ RCB ಹಾಗೂ CSK ನಡುವೆ ನಡೆದ IPL ಪಂದ್ಯದ ವೇಳೆ ನಿಯಮ ಉಲ್ಲಂಘಿಸಿದ್ದಕ್ಕಾಗಿ ಬ್ಯಾಟ್ಸ್​​​ಮ್ಯಾನ್​ ವಿರಾಟ್​ ಕೊಹ್ಲಿಗೆ ದಂಡ ವಿಧಿಸಲಾಗಿದೆ.

    ಚೆನೈ ಸೂಪರ್​ ಕಿಂಗ್ಸ್​ ವಿರುದ್ಧ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದ ವೇಳೆ ನಿಯಮ ಉಲ್ಲಂಘಿಸಿದ್ದಕ್ಕಾಗಿ ದಂಡ ವಿಧಿಸಲಾಗಿದೆ ಎಂದು ತಿಳಿದು ಬಂದಿದೆ.

    ಸಂಭ್ರಮಾಚರಣೆಗೆ ದಂಡ

    ಟಾಸ್​ ಸೋತು ಮೊದಲು ಬ್ಯಾಟಿಂಗ್​ ಮಾಡಿದ ಚೆನೈ ತಂಡವು ಆರಂಭಿಕ ಡೆವೊನ್​ ಕಾನ್ವೆ(83 ರನ್​, 45 ಎಸೆತ, 6 ಬೌಂಡರಿ, 6 ಸಿಕ್ಸರ್​​), ಮಧ್ಯಮ ಕ್ರಮಾಂಕದ ಬ್ಯಾಟ್ಸ್​​ಮ್ಯಾನ್​ ಶಿವಂ ದುಬೆ(52 ರನ್, 27 ಎಸೆತ, 2 ಬೌಂಡರಿ, 5 ಸಿಕ್ಸರ್​) ಫಲವಾಗಿ 20 ಓವರ್​ಗಳಲ್ಲಿ 6 ವಿಕೆಟ್​ ನಷ್ಟಕ್ಕೆ 226ರನ್​ ಗಳಿಸಿತ್ತು.

    Virat Kohli (1)

    ಇದನ್ನೂ ಓದಿ: ರಾಜ್ಯದಲ್ಲಿ ಕೋವಿಡ್​ ಸಕ್ರಿಯ ಪ್ರಕರಣಗಳ ಸಂಖ್ಯೆ 2 ಸಾವಿರಕ್ಕೆ ಏರಿಕೆ; ಲಸಿಕೆ ಪಡೆಯಲು ಜನರ ನಿರಾಸಕ್ತಿ

    ವೇಯ್ನ್​ ಪಾರ್ನೆಲ್​ 17ನೇ ಓವರ್​ನಲ್ಲಿ ಶಿವಂ ದುಬೆ ಅವರ ವಿಕೆಟ್​ ಅನ್ನು ಕಬಳಿಸಿದ್ದರು. ಈ ವೇಳೆ ತಂಡದ ಮಾಜಿ ನಾಯಕ ವಿರಾಟ್​ ಕೊಹ್ಲಿ ಸಂಭ್ರಮಿಸಿದ್ದಕ್ಕೆ ದಂಡ ವಿಧಿಸಲಾಗಿದೆ ಎಂದು ಹೇಳಲಾಗಿದೆ.

    ಲೆವೆಲ್​ 1 ಅಪರಾಧ

    IPL ನಿಯಮದ ಪ್ರಕಾರ ಆರ್ಟಿಕಲ್​ 2.2 ಅಡಿಯಲ್ಲಿ ವಿರಾಟ್​ ಕೊಹ್ಲಿ ಲೆವೆಲ್​ 1 ಅಪರಾಧವನ್ನು ಮಾಡಿದ್ಧಾರೆ. ಆದರೆ, ಈ ಕುರಿತು ಆಡಳಿತ ಮಂಡಳಿ ಹೆಚ್ಚಿನ ವಿವರವನ್ನು ನೀಡಿಲ್ಲ.

    ವಿರಾಟ್​ ಕೊಹ್ಲಿಗೆ ಪಂದ್ಯದ ಶೇ.10ರಷ್ಟು ಮೊತ್ತವನ್ನು ದಂಡವಾಗಿ ವಿಧಿಸಲಾಗಿದೆ ಎಂದು ತಳಿದು ಬಂದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts