More

    2020ರಲ್ಲೂ ಸುಪ್ರೀಂಕೋರ್ಟ್​ ಫುಲ್​ ಬಿಜಿ: ಹೊರಬರಲಿರುವ ತೀರ್ಪು, ನಡೆಯಲಿರುವ ಪ್ರಮುಖ ವಿಚಾರಣೆಗಳಾವುವು?

    ನವದೆಹಲಿ: 2019ರ ವರ್ಷ ಪೂರ್ತಿ ಸುಪ್ರೀಂಕೋರ್ಟ್​ ಅಂಗಳ ಬಿಜಿಯಾಗಿತ್ತು. 2020ರಲ್ಲೂ ಇದೇ ಮುಂದುವರಿಯುವ ಎಲ್ಲ ಲಕ್ಷಣಗಳು ಕಾಣುತ್ತಿವೆ.

    ಚಳಿಗಾಲದ ರಜೆ ಸೋಮವಾರ (ಜ.6)ರಂದು ಮುಗಿಯುತ್ತಿದ್ದು, ಅಂದು ಕೂಡ ಕೋರ್ಟ್​ ಅಂಗಳದಲ್ಲಿ ಜಂಗುಳಿ ಇರಲಿದೆ. 2020ರಲ್ಲಿ ಪ್ರಮುಖವಾದ ತೀರ್ಪುಗಳು ಹೊರಬೀಳಲಿವೆ. ಅದರಲ್ಲಿ ರಾಜಕೀಯಕ್ಕೆ ಸಂಬಂಧಪಟ್ಟ ಕುತೂಹಲಕಾರಿ ಪ್ರಕರಣಗಳಿವೆ.

    ಪ್ರಮುಖ ತೀರ್ಪುಗಳು
    1. 370ನೇ ವಿಧಿ ರದ್ದು
    ಜಮ್ಮು ಮತ್ತು ಕಾಶ್ಮೀರಾದಲ್ಲಿ 370ನೇ ವಿಧಿ ರದ್ದುಗೊಳಿಸಿದ ತೀರ್ಫು ಪ್ರಮುಖ ಪ್ರಕರಣಗಳಲ್ಲಿ ಒಂದು. ನ್ಯಾಯಾಮೂರ್ತಿಗಳಾದ ಎನ್​.ವಿ. ರಮಣ, ಆರ್​. ಸುಭಾಷ್​ ರೆಡ್ಡಿ ಮತ್ತು ಬಿ.ಆರ್​. ಗವಾಯಿ ಅವರು ನವೆಂಬರ್​ 27ರಂದು ಕಾಯ್ದಿರಿಸಿದ ತೀರ್ಪನ್ನು ಪ್ರಕಟಿಸಲಿದ್ದಾರೆ.

    2. ಭೂ ಸ್ವಾಧೀನ ಕಾಯ್ದೆ
    ಭೂ ಸ್ವಾಧೀನ ಕಾಯ್ದೆ 1894ರ ತಿದ್ದುಪಡಿಯ ಬಗ್ಗೆ ಇನ್ನೊಂದು ಪ್ರಮುಖ ತೀರ್ಫು ಇದಾಗಲಿದೆ. ಸೆಕ್ಷನ್​ 24ರ ಭೂ ಸ್ವಾಧೀನ ಮತ್ತು ಪುನರ್ವಸತಿಗೆ ಸಂಬಂಧ ಪಟ್ಟಂತೆ ತೀರ್ಫು ಇದು.

    ನ್ಯಾಯಮೂರ್ತಿಗಳಾದ ಅರುಣ್​ ಮಿಶ್ರಾ, ಇಂದಿರಾ ಬ್ಯಾನರ್ಜಿ, ವಿನೀತ್​ ಸರಣ್​, ಎಂ.ಆರ್​. ಷಾ, ಮತ್ತು ರವೀಂದ್ರ ಭಟ್​ ಅವರನ್ನೊಳಗೊಂಡ ಪೀಠ ತೀರ್ಪು ಪ್ರಕಟಿಸಲಿದೆ.

    3. ಆರ್ಥಿಕ ಮೀಸಲಾತಿ
    ಆರ್ಥಿಕ ಮೀಸಲಾತಿ ತೀರ್ಪು ಕೂಡ ಇದೇ 2020ರಲ್ಲಿ ಹೊರಬೀಳಲಿದೆ. ಮೂವರು ನ್ಯಾಯಮೂರ್ತಿಗಳಿರುವ ಪೀಠ ಈ ತೀರ್ಪನ್ನು ಪ್ರಕಟಿಸಲಿದೆ. ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೊಬ್ಡೆ, ನ್ಯಾಯಮೂರ್ತಿಗಳಾದ ಆರ್​. ಸುಭಾಷ್​ ರೆಡ್ಡಿ, ಮತ್ತು ಬಿ.ಆರ್. ಗವಾಯಿ ಈ ಪೀಠದ ನ್ಯಾಯಮೂರ್ತಿಗಳು.

    2019ರ ಜುಲೈ 31ರಂದು ವಿಚಾರಣೆ ನಡೆಸಿದ್ದ ಕೋರ್ಟ್​ ತೀರ್ಪನ್ನು ಕಾಯ್ದಿರಿಸಿತ್ತು. ಪ್ರಕರಣವನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸಬೇಕೆ ಅಥವಾ ಬೇಡವೇ ಎಂಬುದು ಇನ್ನಷ್ಟೆ ಸ್ಪಷ್ಟವಾಗಬೇಕಿದೆ.

    ವಿಚಾರಣೆ ನಡೆಸಲಿರುವ ಪ್ರಕರಣಗಳು
    1. ಪೌರತ್ವ ತಿದ್ದುಪಡಿ ಕಾಯ್ದೆ
    ಇತ್ತೀಚೆಗೆ ದೇಶಾದ್ಯಂತ ಸದ್ದು ಮಾಡುತ್ತಿರುವ, ಪ್ರತಿಭಟನೆಗಳಿಗೆ, ವಾದ- ವಿವಾದಗಳಿಗೆ ಕಾರಣವಾಗಿರುವ ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ವಿಚಾರಣೆ ನಡೆಸಲಿದೆ.

    2019ರಲ್ಲಿ ಕಾಯ್ದೆಯನ್ನು ಪ್ರಶ್ನಿಸಿ 60 ಅರ್ಜಿಗಳು ಸಲ್ಲಿಕೆಯಾಗಿವೆ. ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೊಬ್ಡೆ, ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ ಮತ್ತು ಸೂರ್ಯಕಾಂತ್​ ಅವರುಳ್ಳ ಪೀಠ ವಿಚಾರಣೆ ಕೈಗೆತ್ತಿಕೊಳ್ಳಲಿದೆ. ಡಿಸೆಂಬರ್​ 18ರಂದು ಈ ಸಂಬಂಧ ಕೇಂದ್ರ ಸರ್ಕಾರಕ್ಕೆ ನೋಟಿಸ್​ ನೀಡಲಾಗಿದೆ.

    2. ಪ್ರಮುಖ ನಾಲ್ಕು ವಿಚಾರಣೆಗಳು

    ಹೆಣ್ಣುಮಕ್ಕಳನ್ನು ದೇಗುಲ ಮತ್ತು ಮಸೀದಿ ಪ್ರವೇಶ ಕೋರಿ ಸಲ್ಲಿಕೆಯಾಗಿರುವ ಅರ್ಜಿಗಳಾಗಿದ್ದು ದೇಶಾದ್ಯಂತ ಕುತೂಹಲ ಕೆರಳಿಸಿದ್ದವು. ಮುಸ್ಲಿಂ ಹೆಣ್ಣು ಮಕ್ಕಳನ್ನು ಮಸೀದಿ ಪ್ರವೇಶ ಕೋರಿ ಸಲ್ಲಿಕೆಯಾದ ಅರ್ಜಿಯಾಗಿದೆ. ಇನ್ನೊಂದು ದಾವೂಡಿ ಬೊಹ್ರಾ ಸಮುದಾಯದಲ್ಲಿ ಪ್ರಚಲಿತದಲ್ಲಿರುವ ಸ್ತ್ರೀ ಜನನಾಂಗವ ಹಾಕು ನಿರ್ಬಂಧ ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿ. ಮೂರನೇಯದು ಪಾರ್ಸಿ ಜನಾಂಗದ ಮಹಿಳೆ ಪಾರ್ಸಿಯೇತರ ಧರ್ಮದವರನ್ನು ಮದುವೆಯಾದರೆ ಅವರು ಪಾರ್ಸಿ ದೇಗುಲಕ್ಕೆ ಪ್ರವೇಶ ನಿರಾಕರಣೆ ಪ್ರಶ್ನಿಸಿದ ಅರ್ಜಿ ವಿಚಾರಣೆಯಾಗಬೇಕಿದೆ.

    ಕೊನೆಯ ಮತ್ತು ಪ್ರಮುಖ ವಿಚಾರಣೆ ಎಂದರೆ ಶಬರಿ ಮಲೆ ಸ್ವಾಮಿ ಅಯ್ಯಪ್ಪ ದೇಗುಲಕ್ಕೆ ಮಹಿಳೆಯರ ಪ್ರವೇಶ ಸಂಬಂಧ ಸಲ್ಲಿಕೆಯಾಗಿರುವ ಅರ್ಜಿ. ಈ ಎಲ್ಲ ನಾಲ್ಕು ವಿಚಾರಣೆಗಳು 7 ಮಂದಿ ನ್ಯಾಯಮೂರ್ತಿಗಳನ್ನು ಒಳಗೊಂಡ ಪೀಠದ ಮುಂದೆ ವಿಚಾರಣೆಗೆ ಬರಲಿವೆ.

    ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೊಬ್ಡೆ, ಮುಸ್ಲಿಂ, ಪಾರ್ಸಿ ಸಂಬಂಧ ಪಟ್ಟ ಅರ್ಜಿಗಳು ತೀರ್ಮಾನವಾದ ನಂತರ ಶಬರಿಮಲೆ ಸಮಸ್ಯೆಯನ್ನ ಬಗೆಹರಿಸಲಾಗುವುದು ಎಂದು ಸ್ಪಷ್ಟ ಪಡಿಸಿದ್ದಾರೆ.

    3. ಹಣದ ಮಸೂದೆ
    ಒಮ್ಮೆ ಲೋಕಸಭೆಯಲ್ಲಿ ಸರಳ ಬಹುಮತದಿಂದ ಹಣದ ಮಸೂದೆ ಅಂಗೀಕರಿಸಲ್ಪಟ್ಟರೆ, ಅದನ್ನು ಶಿಫಾರಸ್ಸಿಗಾಗಿ ರಾಜ್ಯಸಭೆಗೆ ಕಳುಹಿಸಲಾಗುತ್ತದೆ. ಹಣದ ಮಸೂದೆಗಳ ಬಗ್ಗೆ ರಾಜ್ಯಸಭೆ ತಿರಸ್ಕರಿಸಲು ಆಯ್ಕೆ ಮಾಡಬಹುದು. ಪ್ರಸ್ತುತ ಸರ್ಕಾರವು ರಾಜ್ಯ ಸಭೆಯಲ್ಲಿ ಬಹುಮತ ಹೊಂದಿಲ್ಲವಾದರೂ ಅನುಮೋದನೆ ಪಡೆದಿದೆ.

    ಐದು ನ್ಯಾಯಾಧೀಶರ ನ್ಯಾಯಪೀಠವು ಮಸೂದೆಯನ್ನು ಅನುಮೋದಿಸುವ ಪ್ರಕರಣದಲ್ಲಿ ಅದರ ಹಿಂದಿನ ತೀರ್ಪನ್ನು ಮರುಪರಿಶೀಲಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದೆ. ಆದ್ದರಿಂದ, ಈ ವಿಷಯವನ್ನು ಏಳು ನ್ಯಾಯಾಧೀಶರ ಪೀಠದಲ್ಲಿ ಬಗೆಹರಿಸಿಕೊಳ್ಳಬಹುದು ಎಂದು ಹೇಳಿದೆ.

    4. ಕೆನೆ ಪದರ
    ಮಂಡಲ್ ಆಯೋಗದ ಪ್ರಕಾರ ಮೀಸಲಾತಿಗೆ ಅನರ್ಹರಾಗಿರುವ, ಹಿಂದುಳಿದ ವರ್ಗಗಳ ನಡುವೆ ಆರ್ಥಿಕವಾಗಿ ಉತ್ತಮವಾಗಿರುವವರನ್ನು ವಿವರಿಸಲು ಕೆನೆ ಪದರ ಎನ್ನಲಾಗುವುದು. ಆರ್ಥಿಕ ನಿಯತಾಂಕಗಳ ಆಧಾರದ ಮೇಲೆ ಇದನ್ನು ನಿರ್ಧರಿಸಲಾಗುತ್ತದೆ.

    ಎಸ್‌ಸಿ / ಎಸ್‌ಟಿ ಸಮುದಾಯಗಳ ಆರ್ಥಿಕ ಪ್ರಗತಿಯ ಹೊರತಾಗಿಯೂ ಮೀಸಲಾತಿ ಸೌಲಭ್ಯಗಳನ್ನು ಪಡೆಯಬೇಕು ಎಂಬ ಕಾರಣಕ್ಕೆ ಈ ತತ್ವ ಅನ್ವಯವಾಗಬೇಕು ಎಂಬುದನ್ನು ಕೇಂದ್ರ ಸರ್ಕಾರ ವಿರೋಧಿಸುತ್ತದೆ. ಈ ವಿಚಾರಣೆಯೂ ನ್ಯಾಯಾಲಯದ ಮುಂದೆ ಬರಲಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts