More

    ಬೆಂಬಲ ಬೆಲೆ ಯೋಜನೆಯಡಿ ಬಳ್ಳಾರಿ ಜಿಲ್ಲೆಯಲ್ಲಿ 9 ಖರೀದಿ ಕೇಂದ್ರ ಆರಂಭ

    ಬಳ್ಳಾರಿ: ಬೆಂಬಲ ಬೆಲೆ ಯೋಜನೆಯಡಿ ಭತ್ತ, ಜೋಳ ಮತ್ತು ರಾಗಿ ಖರೀದಿಸಲು ಜಿಲ್ಲೆಯ ವಿವಿಧೆಡೆ 9 ಖರೀದಿ ಕೇಂದ್ರ ತೆರೆದಿದ್ದು, ಅಧಿಕಾರಿಗಳು ಹಾಗೂ ಗ್ರೇಡರ್‌ಗಳನ್ನು ಸಹ ನಿಯೋಜಿಸಲಾಗಿದೆ.

    ಬಳ್ಳಾರಿ,ಕುರುಗೋಡು ತಾಲೂಕಿಗೆ ಬಳ್ಳಾರಿ ಎಪಿಎಂಸಿ ಯಾರ್ಡ್‌ನಲ್ಲಿ ಭತ್ತ ಮತ್ತು ಜೋಳ ಖರೀದಿ ಕೇಂದ್ರ-ಎಂ.ಜೆ.ಯಶ್ವಂತರಾವ್(7204033996), ಕಂಪ್ಲಿ ಎಪಿಎಂಸಿ ಯಾರ್ಡ್-ಎ.ಸೆಲ್ವರಾಜ(9341258729), ಸಿರಗುಪ್ಪ ಎಪಿಎಂಸಿಯಲ್ಲಿ ಭತ್ತ ಕೇಂದ್ರ-ಎಂ.ಪಿ.ಗೋವಿಂದರೆಡ್ಡಿ (9448755122), ಭತ್ತ, ಜೋಳ ಮತ್ತು ರಾಗಿ ಖರೀದಿಗೆ ಸಂಡೂರು ಎಪಿಎಂಸಿ-ಎಂ.ಚಿನ್ನಪ್ಪ (9380937990/9980450713), ಕೊಟ್ಟೂರು-ಈಶ್ವರಪ್ಪ(9945006241), ಹಗರಿಬೊಮ್ಮನಹಳ್ಳಿ-ಬಸವರಾಜು(9986606310), ಹರಪನಳ್ಳಿ-ರಾಮಚಂದ್ರಪ್ಪ,(8147738412), ಹೊಸಪೇಟೆ-ಶಿವರಾಜ(9535627707), ಹಡಗಲಿ-ಇರ್ಫಾನಿ ಭಾಷಾ(9886734876) ಸಂಪರ್ಕಿಸಬಹುದು.

    ಸಾಮಾನ್ಯ ಭತ್ತಕ್ಕೆ 1815.ರೂ, ಗ್ರೇಡ್ ಎ ಭತ್ತ 1835ರೂ, ರಾಗಿ 3150 ರೂ, ಹೈಬ್ರಿಡ್ ಜೋಳ 2550 ರೂ, ಮಾಲ್ದಂಡಿ ಜೋಳ 2570 ರೂ ಬೆಂಬಲ ಬೆಲೆ ನಿಗದಿಪಡಿಸಲಾಗಿದೆ. ಕೃಷಿ ಉತ್ಪನ್ನಗಳನ್ನು ಜ.10ರೊಳಗೆ ರೈತರು ನೋಂದಣಿ ಮಾಡಿಸಿಕೊಳ್ಳಬೇಕು ಎಂದು ಆಹಾರ ಇಲಾಖೆ ಜಂಟಿ ನಿರ್ದೇಶಕ ಕೆ.ರಾಮೇಶ್ವರಪ್ಪ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts