More

    ಸೌರಮಂಡಲ ವೀಕ್ಷಣೆಯಿಂದ ಮೂಢನಂಬಿಕೆ ದೂರ

    ಭದ್ರಾವತಿ: ಸೌರಮಂಡಲ ವೀಕ್ಷಣೆಯಿಂದ ಮೂಢ ನಂಬಿಕೆಗಳಿAದ ಮುಕ್ತರಾಗಲು ಸಾಧ್ಯವಾಗುತ್ತದೆ ಎಂದು ವಿಜ್ಞಾನ ಶಿಕ್ಷಕ ಹಾಗೂ ಹವ್ಯಾಸಿ ಖಗೋಳ ವೀಕ್ಷಕ ಹರೋನಹಳ್ಳಿ ಸ್ವಾಮಿ ಹೇಳಿದರು.
    ಗಾಂಽನಗರದ ಸೇಂಟ್ ಜೋಸೆಫ್ ವಿದ್ಯಾಸಂಸ್ಥೆಯಲ್ಲಿ ಗುರುವಾರ ವಿದ್ಯಾರ್ಥಿಗಳು ಮತ್ತು ಪಾಲಕರು ಟೆಲಿಸ್ಕೋಪ್ ಮೂಲಕ ಸೌರಮಂಡಲ ಗುರು, ಶನಿ, ಚಂದ್ರನ ಕುಳಿಗಳು, ಧ್ರುವ ನಕ್ಷತ್ರ, ರಾಶಿ ಚಕ್ರ ವಿವಿಧ ನಕ್ಷತ್ರ ಪುಂಜಗಳನ್ನು ತೋರಿಸಿ ವೈಜ್ಞಾನಿಕ ಮಾಹಿತಿ ನೀಡಿದರು.
    ಮಾನವ ಆರಂಭದಲ್ಲಿ ಭೂಮಿ ಕೇಂದ್ರ ಸಿದ್ಧಾಂತ ನಂಬಿದ್ದು 1610ರಲ್ಲಿ ನಡೆದ ಟೆಲಿಸ್ಕೋಪ್ ಕ್ರಾಂತಿಯಿAದ ಗೆಲಿಲಿಯೋ, ಕೋಪರ್ನಿಕಸ್‌ನಂತಹ ವಿಜ್ಞಾನಿಗಳ ವೈಜ್ಞಾನಿಕ ಶೋಧಗಳಿಂದ, ಸೌರವ್ಯೂಹಕ್ಕೆ ಸೂರ್ಯ ಕೇಂದ್ರದ ಸಿದ್ಧಾಂತದ ಸತ್ಯ ಸಾಧ್ಯವಾಯಿತು. ಸುಂದರ ಶನಿ, ರಾಶಿಗಳು, ಗ್ರಹ, ಗ್ರಹಣಗಳು ಹುಣ್ಣಿಮೆ ಅಮಾವಾಸ್ಯೆ ಇತ್ಯಾದಿಗಳ ಕುರಿತ ಅನೇಕ ಮೂಢನಂಬಿಕೆಗಳು ಈಗಲೂ ಇವೆ. ಆಕಾಶ ವೀಕ್ಷಣೆ ಮತ್ತು ವಿಶ್ವದ ರಹಸ್ಯ ತಿಳಿಯುವುದರಿಂದ ಅನೇಕ ಮೂಢನಂಬಿಕೆಗಳನ್ನು ಹೋಗಲಾಡಿಸಬಹುದು ಎಂದರು.
    ಇAದಿನ ಮಕ್ಕಳು ಮೊಬೈಲ್, ಟಿವಿಗಳಿಂದ ತುಂಬ ಆಕರ್ಷಿತರಾಗಿ ತಮ್ಮ ಅದ್ಭುತ ಸಾಮರ್ಥ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಕಲೆ ಸಂಗೀತ, ಆಟ, ಸೌರಮಂಡಲ ವೀಕ್ಷಣೆಯಂತಹ ಹವ್ಯಾಸಗಳಿಂದ ಮಕ್ಕಳ ಭಾವನಾತ್ಮಕ ಬುದ್ಧಿಮತ್ತೆ ಹೆಚ್ಚುತ್ತದೆ. ಸೃಜನಶೀಲ ಚಟುವಟಿಕೆಗಳಿಂದ ಮಕ್ಕಳ ಸರ್ವತೋಮುಖ ಚಿಂತನೆಗಳು ಸಾಧ್ಯ ಎಂದು ತಿಳಿಸಿದರು.
    ಶಾಲೆಯ ಸಂಸ್ಥಾಪಕಿ ಲತಾ ರಾಬರ್ಟ್ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿಗಳು ಪಾಲಕರು, ಸಾರ್ವಜನಿಕರು ಟೆಲಿಸ್ಕೋಪ್ ಮೂಲಕ ಆಕಾಶ ಕಾಯಗಳ ದೃಶ್ಯ ನೋಡಿ ಸಂಭ್ರಮಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts