More

    ಇಂಡಿಯನ್ ಸೂಪರ್‌ಕ್ರಾಸ್ ಲೀಗ್‌ನ ಮೊದಲ ತಂಡ ಅನಾವರಣ

    ಪುಣೆ: ಸಿಯೆಟ್ ಇಂಡಿಯನ್ ಸೂಪರ್‌ಕ್ರಾಸ್ ಲೀಗ್‌ನ ಉದ್ಘಾಟನಾ ಆವೃತ್ತಿಯ ಮೊದಲ ತಂಡವಾಗಿ ಪಂಚಶೀಲ ರೇಸಿಂಗ್ ತಂಡ ಪದಾರ್ಪಣೆ ಮಾಡಿದೆ. ಫ್ರಾಂಚೈಸಿ ಹಕ್ಕುಗಳನ್ನು ಖರೀದಿಸಿರುವ ಪಂಚಶೀಲ ರಿಯಾಲಿಟಿ ಗೌರವಾನ್ವಿತ ಅಧ್ಯಕ್ಷ ಅತುಲ್ ಚೋರ್ಡಿಯಾ ಹೆಸರು ಅನಾವರಣಗೊಳಿಸಿದ್ದಾರೆ. ಅಕ್ಟೋಬರ್‌ನಲ್ಲಿ ನವದೆಹಲಿಯ ಜವಾಹರಲಾಲ್ ನೆಹರು ಸ್ಟೇಡಿಯಂನಲ್ಲಿ ಉದ್ಘಾಟನಾ ಆವೃತ್ತಿ ಪ್ರಾರಂಭವಾಗಲಿದೆ.

    ಭಾರತದ ಸೂಪರ್‌ಕ್ರಾಸ್ ರೇಸಿಂಗ್‌ನ ಮೆಕ್ಕಾ ಎಂದೇ ಹೆಸರಾಗಿರುವ ಪುಣೆ ನಗರಪಂಚಶೀಲ ತಂಡದ ತವರು ನೆಲವಾಗಿದೆ. ಮಾಜಿ ರೇಸರ್ ಆಗಿರುವ ಅತುಲ್ ಚೋರ್ಡಿಯಾ ಅವರು ವಿವಿಧ ರಾಷ್ಟ್ರೀಯ ರೇಸ್‌ಗಳಲ್ಲಿ ಗಮನಾರ್ಹ ಯಶಸ್ಸನ್ನು ಸಾಧಿಸಿದ್ದಾರೆ. ಈ ಸಾಧನೆಯ ಹಾದಿಯಲ್ಲಿ ಅವರು ಹಲವಾರು ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.

    ತಂಡದ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿದ ಅತುಲ್ ಚೋರ್ಡಿಯಾ ಅವರು, ಪಂಚಶೀಲ ರೇಸಿಂಗ್, ಸಿಯೆಟ್ ಇಂಡಿಯನ್ ಸೂಪರ್‌ಕ್ರಾಸ್ ರೇಸಿಂಗ್ ಲೀಗ್‌ಗೆ ಸೇರುವ ಪ್ರವರ್ತಕ ತಂಡವಾಗಿರುವುದಕ್ಕೆ ನಾವು ಪುಳಕಗೊಂಡಿದ್ದೇವೆ. ಅಥ್ಲೀಟ್ ಆಗಿ ನನ್ನ ಅನುಭವ ಮತ್ತು ಕ್ರೀಡೆಯ ಬಗ್ಗೆ ನನ್ನಲ್ಲಿ ಬೇರೂರಿರುವ ಉತ್ಸಾಹವೇ ಕಾರಣ.

    ಭಾರತದಲ್ಲಿ ಸೂಪರ್‌ಕ್ರಾಸ್‌ಗೆ ಅಪಾರ ಅವಕಾಶಗಳು ಇರುವುದನ್ನು ಗುರುತಿಸಿ, ದೇಶದಲ್ಲಿ ಕ್ರೀಡೆಯ ಅಭಿವೃದ್ಧಿಗೆ ನಮ್ಮ ಬದ್ಧತೆ ಪ್ರದರ್ಶಿಸಲು ಸಿಯೆಟ್ ಐಎಸ್‌ಆರ್‌ಎಲ್ ವೇದಿಕೆ ಒದಗಿಸಿದೆ. ಪುಣೆಯಲ್ಲಿ ನೆಲೆಸಿರುವ ನಮ್ಮ ಸೂಪರ್‌ಕ್ರಾಸ್ ರೇಸ್ ತಂಡವನ್ನು ಅತ್ಯಂತ ವೃತ್ತಿಪರತೆಯೊಂದಿಗೆ, ಕ್ರೀಡೆಯ ಅತ್ಯುನ್ನತ ಮಾನದಂಡಗಳಿಗೆ ಬದ್ಧವಾಗಿ ನಿರ್ವಹಿಸಲಾಗುತ್ತಿದೆ ಎಂದರು.

    ಸೂಪರ್‌ಕ್ರಾಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ಸಹ-ಸಂಸ್ಥಾಪಕ ಮತ್ತು ನಿರ್ದೇಶಕ ಈಶಾನ್ ಲೋಖಂಡೆ ಮಾತನಾಡಿ, ಸಿಯೆಟ್ ಇಂಡಿಯನ್ ಸೂಪರ್‌ಕ್ರಾಸ್ ರೇಸಿಂಗ್ ಲೀಗ್‌ಗೆ ಮೊದಲ ಫ್ರಾಂಚೈಸಿ ಮಾಲೀಕರಾಗಿ ಚೋರ್ಡಿಯಾ ಮತ್ತು ಪಂಚಶೀಲ ರಿಯಾಲಿಟಿಯನ್ನು ಸ್ವಾಗತಿಸಲು ನಾವು ಉತ್ಸಾಹಿತರಾಗಿದ್ದೇವೆ. ಇದು ಲೀಗ್‌ಗೆ ಉತ್ತಮ ಸೇರ್ಪಡೆಯಾಗಲಿದೆ ಎಂಬ ವಿಶ್ವಾಸ ಇದೆ ಎಂದು ತಿಳಿಸಿದ್ದಾರೆ.

    ಎಫ್‌ಎಂಎಸ್‌ಸಿಐನ ಸೂಪರ್‌ಕ್ರಾಸ್ ರೇಸಿಂಗ್ ಆಯೋಗದ ಅಧ್ಯಕ್ಷ ಸುಜಿತ್ ಕುಮಾರ್ ಪ್ರತಿಕ್ರಿಯಿಸಿ, ಮುಂದಿನ ವರ್ಷಗಳಲ್ಲಿ ಪಂಚಶೀಲ ರೇಸಿಂಗ್ ಒಂದು ಶಕ್ತಿಯಾಗಿ ಬೆಳೆಯಲಿದೆ ಎಂಬ ವಿಶ್ವಾಸವಿದೆ. ಅತುಲ್ ಚೋರ್ಡಿಯಾ ಅವರ ನೇತೃತ್ವದಲ್ಲಿ, ಅವರ ತಂಡವು ಭಾರತದಲ್ಲಿ ಸೂಪರ್‌ಕ್ರಾಸ್‌ನ ಚಾರಿತ್ರಿಕ ದಾಖಲೆಗಳಲ್ಲಿ ತನ್ನ ಹೆಸರನ್ನು ಬರೆಯಲು ಸಿದ್ಧವಾಗಿದೆ. ಮುಂಬರುವ ದಿನಗಳಲ್ಲಿ ಅವರ ಸಾಧನೆಗಳನ್ನು ನೋಡಲು ಕುತೂಹಲದಿಂದ ಎದುರು ನೋಡುತ್ತಿದ್ದೇನೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts