More

    ಅಖಾಡದಲ್ಲಿ ಹೋರಿಗಳ ಮಿಂಚಿನ ಓಟ

    ಸೊರಬ: ತಾಲೂಕಿನ ಶಾಂತಗೇರಿಯಲ್ಲಿ ರಾಮೇಶ್ವರ ಯುವಕರ ಸಂಘ ಭಾನುವಾರ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ವಿಜೃಂಭಣೆಯಿAದ ನಡೆಯಿತು.
    ತಾಲೂಕು ಸೇರಿ ನೆರೆಯ ಜಿಲ್ಲೆಗಳಿಂದ ನೂರಾರು ಹೋರಿಗಳು ಆಗಮಿಸಿದ್ದವು. ಪೀಪಿ ಹೋರಿಗಳು ಸೇರಿ ವಿಶೇಷವಾಗಿ ಅಲಂಕಾರ ಮಾಡಿದ ಹೋರಿಗಳ ಮಿಂಚಿನ ಓಟ ನೋಡಲು ನೆರೆಯ ಗ್ರಾಮಸ್ಥರು ಜಿಲ್ಲೆಯ ಸಾವರಾರು ಅಭಿಮಾನಿಗಳು ಆಗಮಿಸಿದ್ದರು.
    ಅಖಾಡದಲ್ಲಿ ಪೈಲ್ವಾನರ ಕೈಗೆ ಸಿಗದಂತೆ ಹೋರಿಗಳು ಓಡುವ ದೃಶ್ಯ ರೋಮಾಂಚನಗೊಳಿಸಿತು. ಅಖಾಡದಲ್ಲಿ ಅಮಟೇಕೊಪ್ಪ ಹುಲಿ, ಶಾಂತಗೇರಿ ವರದಾ, ಬೆದವಟ್ಟಿ ಕಲಾವಿದ, ಮಾವಲಿ ಜೈ ಹನುಮ, ಓಟೂರಿನ ದರ್ಬಾರ್, ಹಾವೇರಿ ಬೆಟ್ಟದ ಹುಲಿ, ಅಂಡಿಗೆ ಆದಿಶೇಷ, ಕುಂಸಿ ಆಂಜನೇಯ, ಚಿಕ್ಕಮಾಕೊಪ್ಪ ಜೈ ಹನುಮ, ಗುಡ್ಡದ ಹೊಸಳ್ಳಿಯ ಸೂರ್ಯಪುತ್ರ, ಹಾವೇರಿ ಪೀಪಿ, ಮಾವಲಿ ಜೈ ಶ್ರೀರಾಮ್, ಹರೂರಿನ ಜೈ ಹನುಮ, ಉಡುಗಣಿ ರಾವಣಾಸುರ, ಹೊನ್ನಾಳಿ ವಾಲ್ಮೀಕಿ ಕಿಂಗ್, ಅಂಕರವಳ್ಳಿಯ ಕರಿಚಿಕ್ಕ, ಮದಕರಿ ಎಕ್ಸ್ಪ್ರೆಸ್, ಹೊಯ್ಸಳ ಇತರ ಹೆಸರಿನ ೨೫೦ಕ್ಕೂ ಹೆಚ್ಚು ಹೋರಿಗಳು ಭರ್ಜರಿ ಪ್ರದರ್ಶನ ನೀಡಿದವು. ಉತ್ತಮವಾಗಿ ಓಡಿದ ಹೋರಿಗಳು ಹಾಗೂ ಹೋರಿ ಹಿಡಿಯುವ ಮೂಲಕ ಬಲ ಪ್ರದರ್ಶನ ತೋರಿದ ಯುವಕರಿಗೆ ಬಹುಮಾನ ನೀಡಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts