More

    ಚಿಕ್ಕಮಾಕೊಪ್ಪದಲ್ಲಿ ವಿಜೃಂಭಣೆಯ ಹೋರಿ ಬೆದರಿಸುವ ಹಬ್ಬ

    ಸೊರಬ: ಗ್ರಾಮೀಣ ಭಾಗದ ರೈತರ ಅಚ್ಚುಮೆಚ್ಚಿನ ಜಾನಪದ ಕ್ರೀಡೆ ಹೋರಿ ಬೆದರಿಸುವ ಹಬ್ಬವನ್ನು ಸಮೀಪದ ಚಿಕ್ಕಮಾಕೊಪ್ಪ ಗ್ರಾಮದಲ್ಲಿ ಸೋಮವಾರ ಶ್ರೀ ರಾಮೇಶ್ವರ ಗೆಳೆಯರ ಬಳಗದಿಂದ ವಿಜೃಂಭಣೆಯಿಂದ ಆಚರಿಸಲಾಯಿತು.
    ತಾಲೂಕು ಸೇರಿ ನೆರೆಯ ಜಿಲ್ಲೆಗಳಿಂದ ಸುಮಾರು 150ಕ್ಕೂ ಅಧಿಕ ಹೋರಿಗಳು ಆಗಮಿಸಿದ್ದವು. ಅಖಾಡದಲ್ಲಿ ಹೋರಿಗಳ ಮಿಂಚಿನ ಓಟ ನೋಡುಗರ ಗಮನ ಸೆಳೆಯಿತು. ಸುತ್ತಮುತ್ತಲಿನ ಗ್ರಾಮಗಳು ಸೇರಿ ತಾಲೂಕು ಹಾಗೂ ಜಿಲ್ಲೆಗಳಿಂದ ಸಾವಿರಾರು ಹೋರಿ ಅಭಿಮಾನಿಗಳು ಆಗಮಿಸಿದ್ದರು. ಅಖಾಡದಲ್ಲಿ ಪೈಲ್ವಾನರ ಕೈಗೆ ಸಿಗದಂತೆ ಹೋರಿಗಳು ಓಡುವ ದೃಶ್ಯ ರೋಮಾಂಚನಗೊಳಿಸಿತು. ಮಾಲೀಕರು ತಮ್ಮ ನೆಚ್ಚಿನ ಹೋರಿಗಳನ್ನು ಬಣ್ಣಬಣ್ಣದ ಜೂಲ, ಬಲೂನು, ಹೂವು, ಕೊಬ್ಬರಿಹಾರ ಕಟ್ಟಿ ಶೃಂಗರಿಸಿದ್ದರು. ಹೋರಿಗಳು ಅಖಾಡದಲ್ಲಿ ಓಡಿ ಬರುತ್ತಿದ್ದಂತೆ ನೆರೆದವರಿಂದ ಕೇಕೆ, ಶಿಳ್ಳೆ, ಚಪ್ಪಾಳೆ ಜೋರಾಗಿ ಕೇಳಿ ಬಂದವು.
    ಅಖಾಡದಲ್ಲಿ ಚಂದ್ರಗುತ್ತಿಯ ಚಕ್ರವರ್ತಿ, ಯಡಗೊಪ್ಪದ ಬಡವ ಸಾಕಿದ ಬಹದ್ದೂರ್, ಮದರವಳ್ಳಿ ಡೇಂಜರ್ ಮುತ್ತು, ಚಂದ್ರಗುತ್ತಿ ಡಾನ್, ಬಳ್ಳಿಬೈಲು ಅಗ್ನಿ, ಭದ್ರಾಪುರ ವಾಲ್ಮೆಕಿ ಹುಲಿ, ಭದ್ರಾಪುರದ ಬ್ರಹ್ಮ, ಚಂದ್ರಗುತ್ತಿ ಅಧೀರ, ಮಗರವಳ್ಳಿ ಅಶ್ವಮೇಧ, ಬನವಾಸಿ ವರದಾ ಎಕ್ಸ್‌ಪ್ರೆಸ್, ಅಂಕರವಳ್ಳಿ ಬಸವೇಶ್ವರ, ಗುಡುವಿ ಜಮೀನ್ದಾರ, ತರಲಘಟ್ಟ ವಾಯುಪುತ್ರ, ಓಟೂರು ಆರ್ಮಿ ಹುಲಿ, ಮಾರಿಗುಡಿ ಕಾ ರಾಜ, ಗ್ರಾಮದ ಹೋರಿಗಳಾದ ದೊಡ್ಮನೆ ಚಿನ್ನಾ, ಸೀತಾ ರಾಮೇಶ್ವರ, ಶ್ರೀ ನಂದಿ, ಜೈ ಹನುಮ, ವಾಯುಪುತ್ರ ಸೇರಿ ವಿವಿಧ ಹೆಸರಿನ ಹೋರಿಗಳು ಓಡಿದವು.
    ಹೋರಿ ಹಬ್ಬ ಆಯೋಜಿಸಿದ್ದ ಚಿಕ್ಕಮಾಕೊಪ್ಪ ಗ್ರಾಮದಲ್ಲಿ ಶ್ರೀ ರಾಮೇಶ್ವರ ಗೆಳೆಯರ ಬಳಗದವರು ಅಖಾಡದ ಎರಡು ಬದಿಯಲ್ಲಿ ಸುರಕ್ಷತಾ ಕ್ರಮ ಕೈಗೊಂಡು, ಅಖಾಡದಲ್ಲಿ ಕ್ರಮವಾಗಿ ಒಂದೊಂದೆ ಹೋರಿಗಳನ್ನು ಓಡಿಸಿದರು. ಸುರಕ್ಷತೆಗಾಗಿ ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗಿತ್ತು. ಅಖಾಡದಲ್ಲಿ ಉತ್ತಮವಾಗಿ ಓಡಿದ ಹೋರಿಗಳು ಹಾಗೂ ಬಲ ಪ್ರದರ್ಶನ ತೋರಿದ ಪೈಲ್ವಾನರನ್ನು ಗುರುತಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts