More

    ರಾಜಗೋಪುರ ಕಳಸಾರೋಹಣ ಪ್ರತಿಷ್ಠಾಪನೆ

    ಹೊನ್ನಾಳಿ: ಸುಂಕದಕಟ್ಟೆ ಗ್ರಾಮದಲ್ಲಿ ಶ್ರೀ ಮಂಜುನಾಥ ಸ್ವಾಮಿ, ನರಸಿಂಹ ಸ್ವಾಮಿ ದೇವಸ್ಥಾನದ ನೂತನ ರಾಜಗೋಪುರ, ಕಳಸಾರೋಹಣ ಹಾಗೂ ಧರ್ಮಸಭೆ ಫೆ.2, 3ರಂದು ಅದ್ದೂರಿಯಾಗಿ ಜರುಗಲಿದೆ.
    ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎಸ್.ಕೆ.ನರಸಿಂಹಮೂರ್ತಿ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿ, ಫೆ.2ರ ಗುರುವಾರ ಬೆಳಗ್ಗೆ ಗಂಗಾಪೂಜೆಯೊಂದಿಗೆ ನೂತನ ಕಳಸಗಳ ಮೆರವಣಿಗೆ ಹಾಗೂ ಪೂಜಾ ವಿಧಿ-ವಿಧಾನ ನೆರವೇರಲಿದ್ದು, ಬೆಳಗ್ಗೆ 11.30ಕ್ಕೆ ರಾಜಗೋಪುರ ಕಳಸಾರೋಹಣ ಪ್ರತಿಷ್ಠಾಪನೆ ನಡೆಯಲಿದೆ ಎಂದರು.
    ಕಾರ್ಯಕ್ರಮದಲ್ಲಿ ಹೊಸದುರ್ಗ ಕುಂಚಿಟಿಗ ಸಮಾಜದ ಶಾಂತವೀರ ಶ್ರೀ, ಕನಕಗುರು ಪೀಠದ ಈಶ್ವರಾನಂದಪುರಿ ಶ್ರೀ, ಚಿತ್ರದುರ್ಗದ ಬಸವಮೂರ್ತಿ ಮಾದಾರ ಚನ್ನಯ್ಯ ಶ್ರೀ, ಭಗೀರಥ ಗುರುಪೀಠದ ಪುರುಷೋತ್ತಮಾನಂದಪುರಿ ಶ್ರೀ, ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಶ್ರೀ, ರಾಯದುರ್ಗದ ಎ.ಪಿ.ರಾಮಮೂರ್ತಿ ಶ್ರೀ, ಹೊನ್ನಾಳಿ ಹಿರೇಕಲ್ಮಠದ ಡಾ.ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಶ್ರೀ, ಹೊಟ್ಯಾಪುರದ ಗಿರಿಸಿದ್ಧೇಶ್ವರ ಶಿವಾಚಾರ್ಯ ಶ್ರೀ, ರಾಂಪುರದ ಶಿವಕುಮಾರ ಶಿವಾಚಾರ್ಯ ಶ್ರೀ, ಬೆಂಗಳೂರಿನ ಮಹರ್ಷಿ ಗಂದೋಡಿ ಶ್ರೀ, ಜಯ ಶ್ರೀನಿವಾಸನ್ ಗೂರೂಜಿ, ಶಂಕರಾತ್ಮಾನಂದ ಶ್ರೀಗಳು ಭಾಗವಹಿಸಲಿದ್ದಾರೆ ಎಂದರು.
    ಶಾಸಕ ಎಂ.ಪಿ.ರೇಣುಕಾಚಾರ್ಯ ಕಾರ್ಯಕ್ರಮ ಉದ್ಘಾಟಿಸಲಿದ್ದು, ದೇವಸ್ಥಾನ ಸಮಿತಿ ಅಧ್ಯಕ್ಷ ಎಸ್.ಕೆ.ನರಸಿಂಹಮೂರ್ತಿ ಅಧ್ಯಕ್ಷತೆ ವಹಿಸುವರು.
    ಫೆ.3ರಂದು ಮುಜರಾಯಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ರಾಜಗೋಪುರ ಮತ್ತು ಪಂಚ ಕಳಸಾರೋಹಣವನ್ನು ಲೋಕಾರ್ಪಣೆಗೊಳಿಸುವರು. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ವೇದಿಕೆ ಕಾರ್ಯಕ್ರಮ ಉದ್ಘಾಟಿಸುವರು. ಶಾಸಕ ಎಂ.ಪಿ.ರೇಣುಕಾಚಾರ್ಯ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ತಿಳಿಸಿದರು.
    ಕಾರ್ಯಕ್ರಮದಲ್ಲಿ ಮಾಜಿ ಸಚಿವ ಡಿ.ಜಿ.ಶಾಂತನಗೌಡ ಮತ್ತಿತರರು ಭಾಗವಹಿಸುವರು. ಎರಡು ದಿನವೂ ಸಂಗೀತ ಸಂಜೆ ಹಾಗೂ ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ ಎಂದರು.
    ಸುದ್ದಿಗೋಷ್ಠಿಯಲ್ಲಿ ದೇವಸ್ಥಾನದ ಪ್ರಧಾನ ಅರ್ಚಕ ರಾಜುಸ್ವಾಮಿ, ಸದಸ್ಯರಾದ ಎಸ್.ಎಚ್.ನರಸಪ್ಪ, ಎಸ್.ಎಚ್.ಚಂದ್ರಮ್ಮ ತಿಮ್ಮಪ್ಪ, ಡಿ.ಟಿ.ಗೌರಮ್ಮ ರಾಮಚಂದ್ರಪ್ಪ, ಎಸ್.ಕೆ.ಕರಿಯಪ್ಪ, ಎ.ಕೆ.ಅಣ್ಣಪ್ಪ, ಎಸ್.ಎನ್.ಪ್ರಸನ್ನಕುಮಾರ್, ಆರ್.ಆರ್.ರಾಕೇಶ್, ಗ್ರಾಪಂ ಸದಸ್ಯರಾದ ಶ್ರೀನಾಥ್ ಇದ್ದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts