More

    ಪ್ರತಿಯೊಬ್ಬರೂ ಸಮಾಜಕ್ಕೆ ವಿಶೇಷ ಕೊಡುಗೆ ನೀಡಬೇಕು; ಡಾ. ಪುಷ್ಪವತಿ

    ರಾಣೆಬೆನ್ನೂರ: ಶಿಕ್ಷಣ ಕಲಿತ ಪ್ರತಿಯೊಬ್ಬ ವ್ಯಕ್ತಿಯೂ ಸಮಾಜಕ್ಕೆ ಏನಾದರೂ ವಿಶೇಷ ಕೊಡುಗೆ ನೀಡಬೇಕು ಸಹಾಯಕ ಪ್ರಾಧ್ಯಾಪಕಿ ಡಾ. ಪುಷ್ಪವತಿ ಶಲವಡಿಮಠ ಹೇಳಿದರು.
    ತಾಲೂಕಿನ ಸುಣಕಲ್ಲಬಿದರಿ ಗ್ರಾಮದ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಜಗದ್ಗುರು ನಂದೀಶ್ವರ ನರ್ಸರಿ ಹಾಗೂ ಪ್ರಾಥಮಿಕ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಂಗಳವಾರ ಏರ್ಪಡಿಸಿದ್ದ ಸಾಂಸ್ಕೃತಿಕ ಚಟುವಟಿಕೆಗಳ ಸಮಾರೋಪ, ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
    ಮಕ್ಕಳಲ್ಲಿ ಅಜ್ಞಾನ ಎಂಬ ಕತ್ತಲೆ ಓಡಿಸಿ ಜ್ಞಾನ ಎಂಬ ಬಲವನ್ನು ಬೆಳಗಿಸಬೇಕು. ಮಕ್ಕಳಿಗಾಗಿ ಆಸ್ತಿ ಮಾಡಬೇಡಿ ಮಕ್ಕಳನ್ನೇ ಆಸ್ತಿಯಾಗಿ ಮಾಡಬೇಕು. ಮನುಷ್ಯನ ಸಂಪಾದನೆ ಜ್ಞಾನವೇ ಹೊರತು ಬೇರೆ ಯಾವುದೂ ಅಲ್ಲ. ಮಕ್ಕಳು ತಪ್ಪು ಮಾಡುವುದನ್ನು ತಿದ್ದಿ ಚಿಕ್ಕಂದಿನಿಂದಲೆ ಶಿಸ್ತು ಸಂಸ್ಕಾರ ಕಲಿಸಬೇಕು ಎಂದರು.
    ಶಾಲೆಯ ಸಲಹಾ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಅರಳಿ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಸೈನಿಕ ಜಲೀಲ ಕುಡುಪಲ್ಲಿ ಅವರನ್ನು ಸನ್ಮಾನಿಸಲಾಯಿತು.
    ಪ್ರಮುಖರಾದ ಪ್ರಕಾಶ ಮುದ್ದಿಗೌಡ್ರು, ಆರ್.ಬಿ. ತೋಟಿಗೇರ, ಪಿ. ಮುನಿಯಪ್ಪ, ಮಂಜಣ್ಣ ಲಿಂಗದಹಳ್ಳಿ, ಚನ್ನಗೌಡ ಕುಡಪಲ್ಲಿ, ಲೋಕಪ್ಪ ಹೂರಗಿ, ಕುಮಾರ ಎಸ್.ಎಂ., ಗಿರೀಶ ಅಂಗಡಿ, ಶ್ರೀಕಾಂತ ಎಸ್.ಕೆ., ದೀಪಾ ಹಲವಾಗಲು, ಚೈತ್ರಾ ಚಪಾಳಿ, ಗೀತಾ ಕುಂಬಾರ ಮತ್ತಿತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts