More

    ಎನ್‌ಎಸ್‌ಎಸ್ ಉತ್ತಮ ಮಾರ್ಗದರ್ಶನ ನೀಡುತ್ತದೆ; ವಿರುಪಾಕ್ಷಪ್ಪ ಬಳ್ಳಾರಿ

    ರಾಣೆಬೆನ್ನೂರ: ವಿದ್ಯಾರ್ಥಿಗಳು ಜೀವನದ ಪರಿಪೂರ್ಣ ಬದುಕನ್ನು ಕಟ್ಟಿಕೊಳ್ಳಲು ರಾಷ್ಟ್ರೀಯ ಸೇವಾ ಯೋಜನೆಯು ಉತ್ತಮ ಮಾರ್ಗದರ್ಶನ ನೀಡುತ್ತದೆ ಎಂದು ಮಾಜಿ ಶಾಸಕ ವಿರುಪಾಕ್ಷಪ್ಪ ಬಳ್ಳಾರಿ ಹೇಳಿದರು.
    ಸುಣಕಲ್ಲಬಿದರಿ ಗ್ರಾಮದ ಶ್ರೀ ಸದ್ಗುರು ಶಿವಾನಂದ ಸಂಯುಕ್ತ ಪದವಿ ಪೂರ್ವ ಕಾಲೇಜ್‌ನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವತಿಯಿಂದ ಶನಿವಾರ ರಾತ್ರಿ ಏರ್ಪಡಿಸಿದ್ದ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
    ಗಾಂಧೀಜಿಯವರ ಗ್ರಾಮಸ್ವರಾಜ್ಯ ಕನಸನ್ನು ಈಡೆರಿಸುವಲ್ಲಿ ಎನ್.ಎಸ್.ಎಸ್ ಪಾತ್ರ ಅತ್ಯಂತ ಮುಖ್ಯವಾಗಿದೆ. ಆದ ಕಾರಣ ಕಾಲೇಜು ಹಂತದಲ್ಲಿ ಇಂತಹ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಸೇವಾ ಮನೋಭಾವ, ಶಿಸ್ತು, ನಾಯಕತ್ವ, ವ್ಯಕ್ತಿಗೌರವ, ಕಾಯಕದ ಬಗ್ಗೆ ಅರಿತುಕೊಳ್ಳಲು ಸೂಕ್ತ ವೇದಿಕೆಯಾಗಿದೆ ಎಂದರು.
    ಸಾನ್ನಿಧ್ಯ ವಹಿಸಿದ್ದ ಗದಗ ಶಿವಾನಂದ ಮಠದ ಶ್ರೀ ಅಭಿನವ ಶಿವಾನಂದ ಸ್ವಾಮೀಜಿ ಮಾತನಾಡಿ, ಮಕ್ಕಳಿಗೆ ರಾಷ್ಟ್ರ ಅಭಿಮಾನ ಹಾಗೂ ಶಿಸ್ತಿನ ಜೀವನವನ್ನು ನೆಡೆಸಲು ಭರವಸೆಯನ್ನು ಈ ಎನ್.ಎಸ್.ಎಸ್. ಶಿಬಿರ ಮೂಡಿಸುತ್ತದೆ. ವಿದ್ಯಾರ್ಥಿಗಳು ಸೂಕ್ತ ಸಾಮರ್ಥ್ಯಗಳನ್ನು ಬೆಳಸಿಕೊಳ್ಳುವುದರ ಜೊತೆಗೆ ಸಹಬಾಳ್ವೆ, ಬ್ರಾತೃತ್ವ, ಜವಾಬ್ದಾರಿಯುತ ವ್ಯಕ್ತಿತ್ವ, ಉತ್ತಮ ಗುಣಗಳನ್ನು ಬೆಳಸಿಕೊಳ್ಳಲು ಸಹಕಾರಿಯಾಗಿದೆ. ಅಲ್ಲದೆ ಅನುಭವದ ಮೂಲಕ ಶಿಕ್ಷಣ ಹಾಗೂ ಶಿಕ್ಷಣದ ಜತೆಗೆ ಸೇವೆಯನ್ನು ನೀಡುವ ಈ ಯೋಜನೆ ಉತ್ಮ ಸಂಸ್ಕಾರವನ್ನು ನೀಡುತ್ತದೆ ಎಂದರು.
    ಕಾಲೇಜಿನ ಸ್ಥಳೀಯ ಸಲಹಾ ಸಮಿತಿಯ ಸದಸ್ಯ ವಿ.ಪಿ. ಪೋಲಿಸ್‌ಗೌಡ್ರ ಮಾತನಾಡಿ, ಶಿಬಿರಾರ್ಥಿಗಳು ಮಾಡಿರುವ ಕೆಲಸಗಳು ಅತ್ಯಂತ ಮಹತ್ವವನ್ನು ಪಡೆದಿವೆ. ಏಕೆಂದರೆ ಸಮಯಪ್ರಜ್ಞೆ ಪರಸ್ಪರ ಸಹಕಾರ ಭಾವದಿಂದ ಒಂದು ಕೆಲಸದಲ್ಲಿ ಸಮೂಹಿಕವಾಗಿ ಮಾಡಿರುವ ಶ್ರಮಧಾನ ಶ್ಲಾಘನೀಯವಾಗಿದೆ ಎಂದರು.
    ಪ್ರಾಚಾರ್ಯ ಪಿ. ಮುನಿಯಪ್ಪ ಅಧ್ಯಕ್ಷತೆ ವಹಿಸಿದ್ದರು.
    ಪ್ರಮುಖರಾದ ಬಿ.ಎಸ್. ಜಪಾಳಿ, ಮಲತೇಶ ಕುಸಗೂರ, ಭರಮಗೌಡ ಕುಡುಪಲಿ, ಬಸವೇಣ್ಣಪ್ಪ ನೋಟದ, ಮಂಜಪ್ಪ ಲಿಂಗದಹಳ್ಳಿ, ಶಿವಾನಂದ ಒಗ್ಗರಣಿ, ಸಂತೋಷ ಅಂಗಡಿ, ಅಶೋಕ ಲಮಾಣಿ, ಪೂರ್ಣಿಮಾ ಮಾಗನೂರು, ಆರ್.ಪ್ರವೀಣಕುಮಾರ, ಎಸ್.ಎಂ. ಮಕಂದರ, ಜಗದೀಶ ಕೊರವರ ಮತ್ತಿತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts