More

    ಸುಮನಸಾ ಕೊಡವೂರು ರಂಗಹಬ್ಬ

    ಉಡುಪಿ: ರಾಷ್ಟ್ರ ಮತ್ತು ಜಾಗತಿಕ ಮಟ್ಟದ ರಂಗಭೂಮಿಗಿಂತ ಪ್ರಾದೇಶಿಕ ರಂಗಭೂಮಿ ಎಲ್ಲವನ್ನು ಮೀರಿದ್ದು, ಇದಕ್ಕೆ ಹೆಚ್ಚಿನ ಮಹತ್ವ ಸಿಗಬೇಕಿದೆ ಎಂದು ಮೂಡುಬಿದಿರೆ ಆಳ್ವಾಸ್ ಎಜ್ಯುಕೇಶನ್ ಫೌಂಡೇಶನ್ ಅಧ್ಯಕ್ಷ ಡಾ.ಮೋಹನ್ ಆಳ್ವ ಹೇಳಿದರು.
    ಅಜ್ಜರಕಾಡು ಭುಜಂಗಪಾರ್ಕ್ ಬಯಲು ಮಂದಿರದಲ್ಲಿ ಸೋಮವಾರ ಸುಮನಸಾ ಕೊಡವೂರು ‘ರಂಗಹಬ್ಬ-8’ ಉದ್ಘಾಟಿಸಿ ಮಾತನಾಡಿದರು. ಜಾಗತಿಕ ರಂಗಭೂಮಿ ಇತಿಹಾಸದಲ್ಲಿ ಭಾರತದ ರಂಗಭೂಮಿಗೆ ಪುರಾತನ ಇತಿಹಾಸವಿದೆ. ನೆಲದ ಜನಪದ ಸಂಸ್ಕೃತಿ ಎತ್ತಿಹಿಡಿಯುವಂತಹ ಪ್ರಾದೇಶಿಕ ರಂಗಭೂಮಿ ಹೆಚ್ಚು ಮುನ್ನೆಲೆಗೆ ಬರಬೇಕಿದೆ ಎಂದು ಆಳ್ವ ಅಭಿಪ್ರಾಯಪಟ್ಟರು. ಪ್ರಾದೇಶಿಕ ರಂಗಭೂಮಿ ಕ್ರಿಯಶೀಲವಾಗಿರಲು ಗ್ರಾಮೀಣ ಭಾಗದ ಕೊಡವೂರು ಸುಮನಸಾದಂತಹ ಸಂಸ್ಥೆಗಳು ಕಾರಣವಾಗಿವೆ. ಎಲ್ಲ ಕಲೆಗಳಿಗಿಂತ ಹೆಚ್ಚು ಸೃಜನಶೀಲ ಮತ್ತು ಉತ್ತಮ ಸಮಾಜಕ್ಕೆ ಮಾರ್ಗದರ್ಶನ ನೀಡುವ ಕಲೆ ರಂಗಭೂಮಿ ಎಂದರು. ಈ ನಿಟ್ಟಿನಲ್ಲಿ ಸುಮನಸಾ ಕೊಡವೂರು ರಂಗ ಚಟುವಟಿಕೆ ಮೂಲಕ ತನ್ನದೆ ಕೊಡುಗೆ ನೀಡುತ್ತಿದೆ ಎಂದು ಶ್ಲಾಘಿಸಿದರು. ಮಾಜಿ ಶಾಸಕ ವಿನಯ ಕುಮಾರ್ ಸೊರಕೆ, ಉದ್ಯಮಿಗಳಾದ ಆನಂದ ಪಿ.ಸುವರ್ಣ, ಸಾಧು ಸಾಲ್ಯಾನ್, ಮಲಬಾರ್ ಗೋಲ್ಡ್‌ನ ರಾಘವೇಂದ್ರ ನಾಯಕ್, ನಗರಸಭೆ ಸದಸ್ಯೆ ರಶಿ ್ಮಚಿತ್ತರಂಜನ್ ಭಟ್, ಶಿಕ್ಷಕ ನಾಗರಾಜ್ ಜಿ.ಎಸ್, ಸುಮನಸಾ ಕೊಡವೂರು ಅಧ್ಯಕ್ಷ ಪ್ರಕಾಶ ಜಿ. ಕೊಡವೂರು, ಸಂಚಾಲಕ ಭಾಸ್ಕರ ಪಾಲನ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ್ ಬೆಕ್ಕೇರಿ ಉಪಸ್ಥಿತರಿದ್ದರು. ಸುಮನಸಾ ಗೌರವಾಧ್ಯಕ್ಷ ಎಂ.ಎಸ್.ಭಟ್ ಸ್ವಾಗತಿಸಿದರು. ಕಾರ್ಯದರ್ಶಿ ಜೀವನ್ ಕುಮಾರ್ ವಂದಿಸಿದರು. ದಯಾನಂದ ಯು. ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮ ಬಳಿಕ ಮುದ್ದಣ ಪ್ರಮೋಷನ್ ಪ್ರಸಂಗ ನಾಟಕ ಪ್ರಸ್ತುತಗೊಂಡಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts