More

    VIDEO| ಸಮಾಧಿಯೊಳಗೆ ಕೂತು ಗೋಳಾಡಿದ ರೈತ! ವಿಡಿಯೋ ವೈರಲ್​

    ಬೆಳಗಾವಿ: ಮೃತದೇಹ ಹೂಳಲು ನಿರ್ಮಿಸಿದ್ದ ಸಮಾಧಿಯೊಳಗೆ ಕೂತು ರೈತನೊಬ್ಬ ‘ನಾನು ಕಷ್ಟಪಟ್ಟರೂ ದುಡಿಮೆಯ ಹಣ ಕೈ ಸೇರಿಲ್ಲ, ಬದುಕು ದುಸ್ತರವಾಗಿದೆ. ನನ್ನ ಬಳಿ ಒಂದು ರೂಪಾಯಿನೂ ಇಲ್ಲ, ಮಕ್ಕಳ ವಿದ್ಯಾಭ್ಯಾಸಕ್ಕೂ ತೊಡಕಾಗಿದೆ.. ದಿನನಿತ್ಯದ ಖರ್ಚುವೆಚ್ಚ ಸರಿದೂಗಿಸಲೂ ಆಗುತ್ತಿಲ್ಲ…’ ಎಂದು ಗೋಳಾಡುತ್ತಿದ್ದ ದೃಶ್ಯ ವೈರಲ್​ ಆಗಿದೆ.

    VIDEO| ಸಮಾಧಿಯೊಳಗೆ ಕೂತು ಗೋಳಾಡಿದ ರೈತ! ವಿಡಿಯೋ ವೈರಲ್​ಶುಕ್ರವಾರ ನಿಧನರಾಗಿದ್ದ ವೃದ್ಧೆಯೊಬ್ಬರ ಶವ ಹೂಳಲು ತೆಗೆದಿದ್ದ ಸಮಾಧಿಯಲ್ಲಿ ಕುಳಿತ ರೈತ ಶಿವಪ್ಪ ಪದ್ಮಪ್ಪ ಬೋಗಾರ, ‘…ಜೀವನ ಸಾಗಿಸುವುದೇ ಕಷ್ಟವಾಗಿದೆ. ನಾನು ಸಾಯುವುದೊಂದೇ ಬಾಕಿ, ಕಾರ್ಖಾನೆಯ ಅಧ್ಯಕ್ಷರು, ಸರ್ವನಿರ್ದೇಶಕರು ಬಂದು ಮಣ್ಣು ಹಾಕಿ’ ಎಂದು ಕಣ್ಣೀರು ಸುರಿಸಿದ್ದಾರೆ. ಇದಕ್ಕೆಲ್ಲ ಕಾರಣ ಎಂ.ಕೆ. ಹುಬ್ಬಳ್ಳಿಯ ಮಲಪ್ರಭಾ ಸಕ್ಕರೆ ಕಾರ್ಖಾನೆ. ಹೌದು, ಅವರು ಬೆಳೆದಿದ್ದ 114 ಟನ್​ ಕಬ್ಬನ್ನು ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಗೆ ಮಾರಾಟ ಮಾಡಿದ್ದರು. ಸುಮಾರು 85 ಸಾವಿರ ರೂಪಾಯಿ ಕಬ್ಬಿನ ಬಿಲ್ ಬಾಕಿ ಇದ್ದು, ಪಾವತಿ ಮಾಡದೆ ವಿಳಂಬ ಮಾಡುತ್ತಿದೆ. ಸಾಕಷ್ಟು ಬಾರಿ ಅಲೆದರೂ ಬಾಕಿ ಬಿಲ್​ ಪಾವತಿ ಆಗಿಲ್ಲ. ಇತ್ತ ಹಣ ಇಲ್ಲದೆ ಸಂಕಷ್ಟಕ್ಕೀಡಾಗಿದ್ದ ರೈತ ಸಮಾಧಿ ಬಳಿ ಕೂತು ವಿಭಿನ್ನವಾಗಿ ಪ್ರತಿಭಟನೆ ನಡೆಸಿದರು.

    ಕಾರ್ಖಾನೆ ನಿರ್ದೇಶಕರಾಗಿದ್ದ ಹಾಗೂ ಕೇಂದ್ರ ಮಾಜಿ ಸಚಿವ ಬಾಬಾಗೌಡ ಪಾಟೀಲ ಅವರ ಹೆಸರನ್ನು ಪ್ರಸ್ತಾಪಿಸಿದ ರೈತ, ‘ನಿಮ್ಮ ಸಹವಾಸವೇ ಸಾಕಾಗಿದೆ. ಮೈಮೇಲಿನ ಅರಿವೆ ಹರಿದಿವೆ. ಸಾಲವಾಗಿದೆ’ ಎಂದು ಅಳಲು ತೊಡಿಕೊಂಡರು. ‘ಮತ್ತೊಮ್ಮೆ ಚುನಾವಣೆಯಲ್ಲಿ ಗೆದ್ದುಬಂದು ಇದ್ದ ಕಾರ್ಖಾನೆ ಜಾಗವನ್ನೂ ಮಾರಿಬಿಡಿ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಇದನ್ನೂ ಓದಿರಿ ಬಸ್​ನಲ್ಲಿ ಒಂಟಿ ಮಹಿಳೆ ಪಕ್ಕದಲ್ಲಿ ಕೂರ್ತಾರೆ… ಕ್ಷಣಾರ್ಧದಲ್ಲಿ ಮಾಡಬಾರದ್ದನ್ನು ಮಾಡಿ ಎಸ್ಕೇಪ್ ಆಗ್ತಾರೆ ಹುಷಾರ್​​!

    VIDEO| ಸಮಾಧಿಯೊಳಗೆ ಕೂತು ಗೋಳಾಡಿದ ರೈತ! ವಿಡಿಯೋ ವೈರಲ್​ರೈತ ಶಿವಪ್ಪ ಬೋಗಾರ ಆಕ್ರೋಶಕ್ಕೆ ಧ್ವನಿಗೂಡಿಸಿರುವ ಅನೇಕ ರೈತರು, ‘ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯಿಂದ ಪಾವತಿಯಾಗಬೇಕಿರುವ ಅಂದಾಜು 25 ಕೋಟಿ ರೂ. ರೈತರ ಕಬ್ಬಿನ ಬಾಕಿ ಹಣವನ್ನು ತಕ್ಷಣ ಪಾವತಿಸಬೇಕು. ಅಲ್ಲಿಯವರೆಗೆ ಅ.14ರಂದು ನಿಗದಿಯಾಗಿರುವ ಕಾರ್ಖಾನೆ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆಯನ್ನು ರದ್ದುಗೊಳಿಸಬೇಕು’ ಎಂದು ಆಗ್ರಹಿಸಿದರು.

    ಕಾರ್ಖಾನೆಯಿಂದ ರೈತರಿಗೆ ಪಾವತಿಯಾಗಬೇಕಿರುವ ಬಾಕಿ ಬಿಲ್​ ನೀಡಲು ಈಗಾಗಲೇ ಹಣಕಾಸು ಸಂಸ್ಥೆಗಳಿಗೆ ಮನವಿ ಸಲ್ಲಿಸಿದ್ದೇವೆ. ನಾನು ಕೂಡ ಕೆಲ ದಿನಗಳ ಹಿಂದೆ ಹೊಸದಾಗಿ ವ್ಯವಸ್ಥಾಪಕ ನಿರ್ದೇಶಕನಾಗಿ ಬಂದಿದ್ದೇನೆ. ರೈತರ ಕಷ್ಟ ನನಗೆ ಅರ್ಥವಾಗುತ್ತದೆ. ಶೀಘ್ರವೇ ಬಾಕಿ ಬಿಲ್​ ಪಾವತಿಸಲಾಗುವುದು ಎಂದು ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ ಶಿವ ಕುಲಕರ್ಣಿ ಭರವಸೆ ನೀಡಿದ್ದಾರೆ.

    ಇತ್ತ ಸಮಾಧಿ ಬಳಿ ಕೂತು ಕಬ್ಬಿನ ಬಾಕಿ ಬಿಲ್​ಗಾಗಿ ರೈತ ಪ್ರತಿಭಟಿಸುತ್ತಿದ್ದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದರೆ, ಅತ್ತ ಬಾಗಲಕೋಟೆಯಲ್ಲಿ ಸಕ್ಕರೆ ಕಾರ್ಖಾನೆಯ ಬಾಕಿ ವಸೂಲಿ ವಿಚಾರವಾಗಿ ರೈತರು ಮತ್ತು ಜಿಲ್ಲಾಧಿಕಾರಿ ನಡುವೆ ಶುಕ್ರವಾರ ಮಾತಿನ ಚಕಮಕಿ ನಡೆದಿದೆ.

    10 ವರ್ಷದಿಂದ ರೈತರ ಬಾಕಿ ಹಣವನ್ನು ಕೇದಾರನಾಥ ಸಕ್ಕರೆ ಕಾರ್ಖಾನೆ ಪಾವತಿಸಿಲ್ಲ. ಇಷ್ಟು ವರ್ಷ ಕಾರ್ಖಾನೆ ಬಂದ್ ಇತ್ತು. ಇದೀಗ ಕಾರ್ಖಾನೆಯನ್ನು ನಿರಾಣಿ ಗ್ರೂಪ್ ಲೀಸ್ ಪಡೆದಿದೆ. ರೈತರ ಬಾಕಿ ಬಿಲ್​ ಪಾವತಿಸುವವರೆಗೂ ಕಾರ್ಖಾನೆ ಆರಂಭಿಸಬಾರದು ಎಂದು ಆಗ್ರಹಿಸಿದ್ದಾರೆ.

    ವೃದ್ಧೆಯ ಶವ ಹೂಳಲು ತೆಗೆದಿದ್ದ ಸಮಾಧಿಗೆ ಇಳಿದ ರೈತನ ಮಾಡಿದ್ದೇನು?

    ವೃದ್ಧೆಯ ಶವ ಹೂಳಲು ತೆಗೆದಿದ್ದ ಸಮಾಧಿಗೆ ಇಳಿದ ರೈತನ ಮಾಡಿದ್ದೇನು? ನಿಮ್ಮ ಸಹವಾಸ ಬೇಡ. ನನ್ನ ಬಳಿ ಒಂದು ರೂಪಾಯಿನೂ ಇಲ್ಲ.. ಮೈಮೇಲಿನ ಬಟ್ಟೆ ಹರಿದಿದೆ.. ಎನ್ನುತ್ತಾ ಸಮಾಧಿಯೊಳಗೆ ಕುಳಿತ ರೈತನೊಬ್ಬ ಗೋಳಾಡಿರುವ ವಿಡಿಯೋ ವೈರಲ್​ ಆಗಿದೆ. ಮಾಹಿತಿಗೆ https://bit.ly/2SGIvXe

    Posted by Vijayavani on Friday, October 9, 2020

    ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ ಅರ್ಚಕನಿಗೆ 14 ವರ್ಷ ಜೈಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts