More

    ಕಬ್ಬು ಅರೆಯುವ ಸಾಮರ್ಥ್ಯ ಹೆಚ್ಚಳಕ್ಕೆ ಹೊಸ ಯೋಜನೆ

    ಬೈಲಹೊಂಗಲ: ಸೋಮೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಪ್ರತಿ ದಿನ 2,500 ಮೆಟ್ರಿಕ್ ಟನ್ ಕಬ್ಬು ಅರೆಯಲಾಗುತ್ತಿದೆ. ಈ ಸಾಮರ್ಥ್ಯವನ್ನು 4 ಸಾವಿರಕ್ಕೆ ಹೆಚ್ಚಿಸುವ ಜತೆಗೆ ಸಹ ವಿದ್ಯುತ್ ಉತ್ಪಾದನಾ, 45 ಕೆಎಲ್‌ಪಿಡಿ ಇಥೆನಾಲ್ ಘಟಕ ಸ್ಥಾಪಿಸುವ ಯೋಜನೆ ರೂಪಿಸಲಾಗಿದೆ ಎಂದು ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕ ಎಂ.ಡಿ.ಮಲ್ಲೂರ ಹೇಳಿದ್ದಾರೆ.

    ಪಟ್ಟಣದ ಕಾರ್ಖಾನೆಯ ಗೆಸ್ಟ್‌ಹೌಸ್ ಆವರಣದಲ್ಲಿ ಗುರುವಾರ ವಿಡಿಯೋ ಕಾನ್ಫ್‌ರನ್ಸ್ ಮೂಲಕ ಹಮ್ಮಿಕೊಂಡಿದ್ದ 2019-20ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿ, ಯೋಜನೆ ಕುರಿತು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಪರಿಶೀಲನೆ ಹಂತದಲ್ಲಿದೆ. ಇದರಿಂದ ಹೆಚ್ಚಿನ ಪ್ರಮಾಣದಲ್ಲಿ ಕಬ್ಬು ಅರೆದು ಸಕ್ಕರೆ ಮತ್ತು ಸಹ ಘಟಕಗಳ ಉತ್ಪನ್ನ ಸಹಿತ ಹೆಚ್ಚಿನ ಆದಾಯ ಪ್ರಾಪ್ತಿಯಾಗುತ್ತದೆ. ರೈತರಿಗೆ ಸಕಾಲದಲ್ಲಿ ಬಿಲ್ ಪಾವತಿಸಲು ನೂತನ ಕ್ರಮ ನೆರವಾಗಲಿದೆ ಎಂದರು.

    ಪ್ರಸಕ್ತ ವರ್ಷದಲ್ಲಿ ಕಬ್ಬು ಪೂರೈಸಿದ ರೈತರಿಗೆ ಎಫ್‌ಆರ್‌ಪಿ ದರ ಎಚ್ ಮತ್ತು ಟಿ ಸೇರಿ 3,438 ರೂ. ನೀಡಲಾಗುತ್ತಿದ್ದು, ಈಗಾಗಲೇ ಸಾರಿಗೆ ವೆಚ್ಚ 306 ರೂ., ಕಟಾವು ವೆಚ್ಚ 335 ರೂ. ಸಂದಾಯದ ಹಣ 2,500 ರೂ. ಸೇರಿ ಒಟ್ಟು 3,141 ರೂ. ಸಂದಾಯ ಮಾಡಲಾಗುತ್ತಿದೆ ಎಂದರು. ಕಾರ್ಖಾನೆ ಅಧ್ಯಕ್ಷ ಗುರುಪುತ್ರಪ್ಪ ಹೊಸಮನಿ ಮಾತನಾಡಿ, ಈ ಸಕ್ಕರೆ ಕಾರ್ಖಾನೆ ರೈತರ ಕಾರ್ಖಾನೆಯಾಗಿದ್ದು, ಸದಸ್ಯರಿಗೆ ರಿಯಾಯಿತಿ ದರದಲ್ಲಿ ಸಕ್ಕರೆ ಹಂಚಿಕೆ ಮಾಡಿ, ಸರ್ಕಾರ ಘೋಷಿತ ದರ ನೀಡುತ್ತ, ಕಾರ್ಖಾನೆಯ ಅಭಿವೃದ್ಧಿಗೆ ವಿವಿಧ ಯೋಜನೆಗಳನ್ನು ರೂಪಿಸಲಾಗುತ್ತಿದೆ ಎಂದರು. ನಿರ್ದೇಶಕರಾದ ಮಲ್ಲಪ್ಪ ಮುರಗೋಡ, ರಾಜು ಕುಡಸೋಮಣ್ಣವರ ಕಾರ್ಖಾನೆ ನಡೆದು ಬಂದ ದಾರಿಯನ್ನು ವಿವರಿಸಿದರು. ಉಪಾಧ್ಯಕ್ಷ ಪಾರಿಸಪ್ಪ ಬಾವಿ, ಬಸವರಾಜ ಬಾಳೇಕುಂದರಗಿ, ಮಲ್ಲಿಕಾರ್ಜುನ ಗೂಳಪ್ಪನವರ, ಪ್ರದೀಪ ವಣ್ಣೂರ, ಅಶೋಕ ಬಾಳೇಕುಂದರಗಿ, ಬಸವರಾಜ ಮೋಖಾಶಿ, ಕಮಲಾ ಅವ್ವಕ್ಕನವರ, ಕಸ್ತೂರಿ ಸೋಮನಟ್ಟಿ, ಮಡಿವಾಳಪ್ಪ ಅಂಗಡಿ, ಅದೃಶ್ಯಪ್ಪ ಕೋಟಬಾಗಿ, ಸಣ್ಣಭೀಮಶೇಪ್ಪ ಅಂಬಡಗಟ್ಟಿ, ಗಂಗಪ್ಪ ಭರಮಣ್ಣವರ, ಮಂಜುನಾಥ ದಿಂಡಲಕೊಪ್ಪ, ಬಸವರಾಜ ಇಂಗಳಗಿ, ನಿಂಗಪ್ಪ ಚೌಡಣ್ಣವರ, ಮಹಾಂತೇಶ ಉಳೆಗಡ್ಡಿ, ಕಾರ್ಯದರ್ಶಿ ಅಶೋಕ ಬೊಮ್ಮಣ್ಣವರ ಹಾಗೂ ಕಾರ್ಖಾನೆಯ ಕಾರ್ಮಿಕರು, ಸಿಬ್ಬಂದಿ, ರೈತರು ಉಪಸ್ಥಿತರಿದ್ದರು. ಶ್ರೀಕರ ಕುಲಕರ್ಣಿ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts