More

    ಜಾನುವಾರುಗಳಿಗೆ ಸಮತೋಲನ ಆಹಾರ ನೀಡಿದರೆ ಹೈನುಗಾರಿಕೆಗೆ ಅನುಕೂಲ

    ರಾಣೆಬೆನ್ನೂರ: ಹಸಿರು ಹುಲ್ಲು, ಒಣ ಹುಲ್ಲು ಹಾಗೂ ದಾಣಿ ಮಿಶ್ರಣದ ಸಮತೋಲನ ಪಶು ಆಹಾರ ಬಳಕೆ ಮಾಡುವ ಮೂಲಕ ವೈಜ್ಞಾನಿಕ ನಿರ್ವಹಣೆಯಿಂದ ಹೈನುಗಾರಿಕೆಯಲ್ಲಿ ಲಾಭ ಕಾಣಬಹುದು ಎಂದು ಮುಖ್ಯ ಪಶುವೈದ್ಯಾಧಿಕಾರಿ ಡಾ. ನೀಲಕಂಠ ಅಂಗಡಿ ಹೇಳಿದರು.
    ತಾಲೂಕಿನ ಸುಣಕಲ್ಲಬಿದರಿ ಗ್ರಾಮದ ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರದಲ್ಲಿ ಬುಧವಾರ ಸದ್ಗುರು ಶಿವಾನಂದ ಸಯುಕ್ತ ಪದವಿ ಪೂರ್ವ ಕಾಲೇಜ್ ವತಿಯಿಂದ ಏರ್ಪಡಿಸಿದ್ದ ಜಾನುವಾರುಗಳ ಚಿಕಿತ್ಸಾ ಶಿಬಿರದಲ್ಲಿ ಅವರು ಮಾತನಾಡಿದರು.
    ಹಸುಗಳ ಉತ್ಪಾದನಾ ಸಾಮರ್ಥ್ಯ ದೇಹದ ತೂಕದ ಆಧಾರದ ಮೇಲೆ ಆಹಾರ ನೀಡಬೇಕು. ಒಂದು ಹಸುವಿಗೆ ದಿನಕ್ಕೆ ನಿಯಮಿತವಾಗಿ ಹಸಿರು ಹುಲ್ಲು, ಒಣ ಮೇವು ಹಾಗೂ ದೇಹ ನಿರ್ವಹಣೆಗೆ ದಾಣಿ ಮಿಶ್ರಣ ಹಾಗೂ ಪ್ರತಿ 2.5 ಲೀಟರ್ ಹಾಲಿಗೆ ದಾಣಿ ಮಿಶ್ರಣ ನೀಡಬೇಕು. ಕಾಲಕಾಲಕ್ಕೆ ಮುಂಜಾಗೃತ ಲಸಿಕೆಗಳನ್ನು ಹಾಕಿಸಬೇಕು. ಕರುಗಳಿಗೆ ಸಾಕಷ್ಟು ಗಿಣ್ಣದ ಹಾಲು ಕುಡಿಸುವ ಜತೆಗೆ ಸಕಾಲದಲ್ಲಿ ಜಂತುನಾಶಕ ಹಾಕಬೇಕು ಎಂದು ತಿಳಿಸಿದರು.
    ಪಶುವೈದ್ಯಾಧಿಕಾರಿ ಡಾ. ಎಚ್.ಸಿ. ಪಾಟೀಲ, ಹಿರಿಯ ಪಶು ವೈದ್ಯಾಧಿಕಾರಿ ಪರೀಕ್ಷಕ ಎಚ್.ಆರ್. ನಾಯಕ, ಡಾ. ವಿನಾಯಕ, ಎಚ್. ಶಿವಾನಂದ, ಮಾದೇವಪ್ಪ ಮಲ್ಲಾಡದ, ಸುಮಲತಾ ತಳವಾರ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts