More

    ಸಕ್ಕರೆ ಕಾರ್ಖಾನೆ ಭೂಮಿ ಪರಭಾರೆ ಮಾಡಿದರೆ ಹೋರಾಟ, ಶಾಸಕ ಜೆ.ಎನ್.ಗಣೇಶ್ ಎಚ್ಚರಿಕೆ

    ಕಂಪ್ಲಿ: ಕಂಪ್ಲಿ ಸಕ್ಕರೆ ಕಾರ್ಖಾನೆಯ 176 ಎಕರೆ ಜಮೀನನ್ನು ಸರ್ಕಾರ ಖಾಸಗಿಯವರಿಗೆ ಪರಭಾರೆ ಮಾಡಿದರೆ ರೈತ ಸಂಘಟನೆಗಳೊಂದಿಗೆ ಹೋರಾಟ ನಡೆಸಲಾಗುವುದುಎಂದು ಶಾಸಕ ಜೆ.ಎನ್.ಗಣೇಶ್ ಎಚ್ಚರಿಸಿದರು.

    ತಾಲೂಕಿನ ನಂ.10ಮುದ್ದಾಪುರ ಗ್ರಾಮದಲ್ಲಿ ಗುರುವಾರ 8 ಲಕ್ಷ ರೂ.ಗಳಲ್ಲಿ ನರೇಗಾ ಯೋಜನೆಯಡಿ ನಿರ್ಮಿಸಿದ 4ನೇ ಅಂಗನವಾಡಿ ಕೇಂದ್ರ ಉದ್ಘಾಟಿಸಿ ಮಾತನಾಡಿದರು. ಸಕ್ಕರೆ ಕಾರ್ಖಾನೆಯ 176 ಎಕರೆ ಜಮೀನು ಸರ್ಕಾರ ತನ್ನ ವಶಕ್ಕೆ ಪಡೆಯುವ ಬದಲಿಗೆ ಆಜೀಜ್ ಎನ್ನುವವರಿಗೆ ಪರಭಾರೆ ಮಾಡಲು ಯತ್ನಿಸುತ್ತಿದೆ. ಆಜೀಜ್ ಅವರ ಖಾತೆಯಲ್ಲಿ 5 ಲಕ್ಷ ರೂ. ಇಲ್ಲ. ಇಂತಹ ವ್ಯಕ್ತಿಗೆ 176 ಎಕರೆ ಜಮೀನು ಖರೀದಿಸಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು. ಆಜೀಜ್ ಹೆಸರಿನಲ್ಲಿ ಜಮೀನು ಲೂಟಿ ಹೊಡೆಯುತ್ತಿರುವವರ ಹೆಸರುಗಳನ್ನು ಮುಂದಿನ ದಿನಗಳಲ್ಲಿ ಬಹಿರಂಗಪಡಿಸುವೆ ಎಂದ ಶಾಸಕರು, ಜಮೀನು ಉಳಿಸಿಕೊಳ್ಳಲು ಕಾನೂನು ಹೋರಾಟ ಜತೆಗೆ ರೈತರೊಂದಿಗೆ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ತಿಳಿಸಿದರು.

    ಗ್ರಾಪಂ ಅಧ್ಯಕ್ಷೆ ಎಂ.ಎಸ್.ಮಾಂತಮ್ಮ, ಉಪಾಧ್ಯಕ್ಷ ವೈ.ಉಮೇಶ್, ಸದಸ್ಯರಾದ ಎ.ತಾಯಣ್ಣ, ಭಂಡಾರಿ ನರಸಣ್ಣ, ಎಡಿಎ ಬೀರಲಿಂಗ, ಕಾರ್ಯದರ್ಶಿ ವೀರಭದ್ರಗೌಡ, ಮಹಿಳಾ ಮೇಲ್ವಿಚಾರಕಿ ಎಚ್.ಉಷಾಸಿಂಗ್, ಅಂಗನವಾಡಿ ಕಾರ್ಯಕರ್ತೆ ಎಚ್.ಹುಲಿಗೆಮ್ಮ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಟ್ಗಿ ಬಸವರಾಜಗೌಡ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts