More

    ಕಲ್ಪತರು: ಮೋದಪಡಿಸುತಿಹ ತಾನಿಹಪರದಲ್ಲಿ, ಈತಗೆ ಸರಿ ಎಲ್ಲಿ!

    ಕಲ್ಪತರು: ಮೋದಪಡಿಸುತಿಹ ತಾನಿಹಪರದಲ್ಲಿ, ಈತಗೆ ಸರಿ ಎಲ್ಲಿ!ಶ್ರೀ ಸುಯಮೀಂದ್ರತಿರ್ಥರು 1966ರಲ್ಲಿ ಬೆಂಗಳೂರಿಗೆ ಸಂಚಾರತ್ವೇನ ದಿಗ್ವಿಜಯ ಮಾಡಿದರು. ಕಾರಣಾಂತರಗಳಿಂದ ಸೀತಾಪತಿ ಅಗ್ರಹಾರದ ಮಠದಲ್ಲಿ ವಾಸ್ತವ್ಯ ಮಾಡಲಾಗಲಿಲ್ಲ. ನಂತರ ಶ್ರೀಮಠದ ಶ್ರೀ ಸುಶೀಲೇಂದ್ರಾಚಾರ್ಯರು (ಪ್ರಸ್ತುತ ಪೀಠಾಧಿಪತಿಗಳ ಗುರುಗಳಾಗಿದ್ದ ಶ್ರೀ ಸುಯತೀಂದ್ರತಿರ್ಥರು) ತಾವು ಪೂರ್ವಾಶ್ರಮದಲ್ಲಿ ಕೆಲಸಮಾಡುತ್ತಿದ್ದ ಭಾರತೀಯ ಸಂಸತಿ ವಿದ್ಯಾಪಿಠದ ಮಾಲಕರ ಅಪೇೆಯ ಮೇರೆಗೆ ವಸಂತ ಕಾಲದಲ್ಲಿ ಅಲ್ಲಿಯೇ ಒಂದೂವರೆ ತಿಂಗಳು ವಾಸ್ತವ್ಯ ಮಾಡುವಂತೆ ವಿಾಪಿಸಿಕೊಂಡರು. ಬೇಸಿಗೆಯ ರಜಾ ದಿನಗಳಾದುದರಿಂದ ವಿದ್ಯಾಪಿಠದಲ್ಲಿ ವಾಸ್ತವ್ಯದ ಏರ್ಪಾಡು ಮಾಡಿದ್ದರು. ತರುವಾಯ ಶ್ರೀಸುಯಮೀಂದ್ರತಿರ್ಥರು ತಮ್ಮ ಕಡೆಯ ದಿನಗಳನ್ನು ಸೀತಾಪತಿ ಅಗ್ರಹಾರದ ರಾಯರ ಮಠದಲ್ಲಿಯೇ ಕಳೆದರು.

    ಪೂಜಾ ಮತ್ತು ಧರ್ಮಕಾರ್ಯಗಳು ಶ್ರೀಗಳವರ ಆಾನಸಾರ ಅಂದಿನಿಂದ ಇಂದಿನವರೆಗೆ ಪದ್ಧತಿಯಂತೆ ನಡೆಯುತ್ತಾ ಬರುತ್ತಿದ್ದು ಆಥಿರ್ಕ ಮತ್ತು ಧಾಮಿರ್ಕವಾಗಿ ಅಭಿವೃದ್ಧಿ ಹೊಂದುತ್ತಾ ಎರಡನೇ ಮಂತ್ರಾಲಯವೆಂದು ಪ್ರಸಿದ್ಧಿಯಾಗಿದೆ. ಇಲ್ಲಿನ ಸಂಪ್ರದಾಯ ಶಿಸ್ತು ಕ್ರಮಗಳೇ ನಂತರ ಸ್ಥಾಪಿಸಲ್ಪಟ್ಟ ಎಲ್ಲಾ ಮಠಗಳಲ್ಲಿಯೂ ಅನುಷ್ಠಾನಕ್ಕೆ ಬಂದಿರುವುದು ಇಲ್ಲಿನ ಆಚಾರ&ವಿಚಾರಗಳ ವೈಶಿಷ್ಟ$್ಯವನ್ನು ಸಾರುತ್ತಿದೆ. ವಿಶೇಷ ದಿವಸಗಳಲ್ಲಿ ಅನಾಥಾಲಯಗಳಿಗೆ ಉಚಿತ ಭೋಜನ ವಿತರಣೆ, ಸದಾ ಸಾಮಾನ್ಯ ಜನರಿಗೆ ಉಪಯುಕ್ತವಾದ ಆಧ್ಯಾತ್ಮಿಕ ಗ್ರಂಥಗಳ ಪ್ರಕಾಶನ ಮತ್ತು ಸುಲಭ ಬೆಲೆಯಲ್ಲಿ ವಿತರಣೆ & ಇವು ಮಠದ ಕಾರ್ಯಕಲಾಪಗಳಲ್ಲಿ ಕೆಲವಾಗಿವೆ. ಪ್ರಾರಂಭದಲ್ಲಿ ಗರ್ಭ ಗುಡಿಯ ಮುಂದೆ ಹೆಂಚಿನ ಮುಂಭಾಗ ಮತ್ತು ಹಿಂದೆ ಸಣ್ಣ ಕೋಣೆ ಬಿಟ್ಟರೆ ಮತ್ತೇನೂ ಇರಲಿಲ್ಲ. ಮಳೆ ಬಂದರೆ ಭಕ್ತಾದಿಗಳು ನೆನೆಯಬೇಕಾದ ಪರಿಸ್ಥಿತಿ ಇತ್ತು. ಕ್ರಿ.ಶ.1942 ರಿಂದ 1948 ರ ವರೆಗೆ ಯುದ್ಧದ ಬಿಸಿಯಿಂದ ಹಣಕಾಸಿನ ತೊಂದರೆ ಸಹ ಇತ್ತು. ಆಗ ತಿಂಗಳಿಗೆ ನಾಲ್ಕು ಆಣೆ ಸೇರಿಸಿ ವರ್ಷಕ್ಕೆ ಮೂರು ರೂಪಾಯಿ ಕೊಟ್ಟರೆ ಸಾಕು. ರಾಯರ ಹಸ್ತೋದಕ ನಡೆಯುತ್ತಿತ್ತು. ಕಾಲ ಕಳೆದಂತೆ ಭಕ್ತರ ಉದಾರ ಕಾಣಿಕೆಯಿಂದ ವ್ಯವಸ್ಥಿತವಾಗಿ ನಡೆದು ಈಗಿನ ಸುಸಜ್ಜಿತ ಮಠವನ್ನು ನೋಡಬಹುದಾಗಿದೆ.

    ಒಮ್ಮೆ ಹುಡುಗಿಯೊಬ್ಬಳು ಒಂದು ಮಹಾರೋಗದಿಂದ ಬಳಲುತಿದ್ದಳು. ಆಕೆಯನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಸೇರಿಸಿದರು. ಅಲ್ಲಿಯ ವೈದ್ಯರು ಕಾಲು ಕತ್ತರಿಸಬೇಕೆಂದು ಹೇಳಿದರು. ತಂದೆತಾಯಿಗಳಿಗೆ ಬಹಳ ದುಃಖವಾಗಿ ಸೀತಾಪತಿ ಅಗ್ರಹಾರದಲ್ಲಿರುವ ರಾಯರ ಸೇವೆಗೆ ಸಂಕಲ್ಪ ಮಾಡಿ ಯಥಾಶಕ್ತಿ ಭಕ್ತಿಯಿಂದ ಪ್ರಾಥಿರ್ಸಿದರು. ದೈನ್ಯಭಾವದಿಂದ ಗಳಗಳನೆ ಅತ್ತರು. ಸರ್ಜರಿಗೆ ನಿಗದಿಯಾಗಿದ್ದ ಹಿಂದಿನ ದಿನ ರಾತ್ರಿ ಮೂರು ಂಟೆಗೆ ಆ ಹುಡುಗಿಯನ್ನು ವೈದ್ಯರು ಆಪರೇಷನ್​ಗೆ ಕರೆದುಕೊಂಡು ಹೋದರು. ವೈದ್ಯರ ಜತೆಗೆ ಸಹಾಯಕರೂ ಒಳ ನಡೆದರು. ಹುಡುಗಿಯನ್ನು ಆಸ್ಪತ್ರೆಗೆ ಸೇರಿಸಿ
    ಐದು ದಿನಗಳು ಕಳೆದಿದ್ದ ಕಾರಣ ಪ್ರತಿದಿವಸವೂ ಔಷಧಿ ಕೊಡುತ್ತಿದ್ದ ಎಲ್ಲ ಸಿಬ್ಬಂದಿಯೂ ಆಕೆಗೆ ಚಿರಪರಿಚಿತರಾಗಿದ್ದರು. ಆಪರೇಷನ್​ ಮುಗಿದು ಬೆಳಗ್ಗೆ ನಾಲ್ಕು ಂಟೆಗೆ ಆಕೆಯನ್ನು ವಾಡಿರ್ಗೆ ತಂದು ಹಾಸಿಗೆಯಲ್ಲಿ ಮಲಗಿಸಿದರು. ಮಧ್ಯರಾತ್ರಿಯಾದ ಕಾರಣ ತಂದೆತಾಯಿಯವರು ಬಂದಿರಲಿಲ್ಲ.

    ಬೆಳಗಾಗುತ್ತಲೇ ಆಕೆಯ ತಂದೆ-ತಾಯಿ ವೈದ್ಯರು ಬರುವುದನ್ನೇ ಕಾಯುತ್ತಿದ್ದರು. ತರುವಾಯ ಬಂದ ವೈದ್ಯರು, “ನಾನು ನನ್ನ ಪ್ರಯತ್ನ ಮಾಡುತ್ತೇನೆ. ಸರಿಯಾಗುವುದು ಬಿಡುವುದು ದೇವರ ಕೈಯಲ್ಲಿದೆ’ ಎಂದರು. ಆ ಹುಡುಗಿ ಇದ್ದ ರೂಂ ಬಾಗಿಲು ತೆರೆದು ಡಾಕ್ಟರ್​, ತಂದೆ ತಾಯಿ ಎಲ್ಲಾ ಒಟ್ಟಿಗೆ ಹೋದರು. ನಡೆಯೋದಕ್ಕೇ ಬಾರದೇ ಇದ್ದ ಆ ಹುಡುಗಿ ಓಡಿಬಂದು ಅಮ್ಮನನ್ನು ಅಪ್ಪಿಕೊಂಡು ನಗುತ್ತಿದ್ದಳು. ವೈದ್ಯರು “ಮಗು, ನಡಿ ಆಪರೇಷನ್​ ಹಾಲಿಗೆ. ನಿನಗೆ ಆಪರೇಷನ್​ ಮಾಡಬೇಕಿದೆ’ ಎಂದರು. ಆ ಹುಡುಗಿ “ಅಯ್ಯೋ ರಾತ್ರಿ ತಾತನ ಜೊತೆ ನೀವೇ ಬಂದಿದ್ದಿರಿ. ನೀವೇ ಆಪರೇಷನ್​ ಮಾಡಿ, ಇನ್ನೇನು ಹೆದರಬೇಡ ಎಂದೂ ಹೇಳಿದ್ದೀರಿ, ಇದೇನಿದು ಮತ್ತೆ ಆಪರೇಷನ್​ ಎನ್ನುತ್ತಿದ್ದೀರಿ?’ ಎಂದು ಕೇಳಿದಳು. “ನನ್ನ ಕಾಲಿನಲ್ಲಿ ಈಗ ಬಲ ಬಂದಿದೆ. ನೋಡಿ’ ಎಂದು ಆಪರೇಷನ್​ ಆದ ಜಾಗವನ್ನೂ ತೋರಿಸಿದಳು.
    ಎಲ್ಲರಿಗೂ ಆಶ್ಚರ್ಯ. ಡಾಕ್ಟರ್​ ಬಂದೇ ಇಲ್ಲ ಆಪರೇಷನ್​ ಆಗಿದೆ, ಹುಡುಗಿ ಆರೋಗ್ಯವಂತಳಾಗಿದ್ದಾಳೆ. ಸ್ವಯಂ ವೈದ್ಯರಿಗೇ ಸೀಮಾತೀತ ಆಶ್ಚರ್ಯ.

    ಸೀತಾಪತಿ ಅಗ್ರಹಾರದಲ್ಲಿ ಆ ಹುಡುಗಿಯ ತಂದೆ ತಾಯಿಗಳು ತಾವು ಮಾಡಿದ ರಾಯರ ಪ್ರಾರ್ಥನೆಯನ್ನು ನೆನೆದು ಗುರುರಾಯರ ಕಾರುಣ್ಯಾತಿಶಯಕ್ಕೆ ಅವಾಕ್ಕಾದರು. ಮಗಳೊಂದಿಗೆ ರಾಯರ ಬಳಿಗೆ ಓಡೋಡಿ ಹೋಗಿ ಶರಣಾದರು. ರಾಯರಿಗೆ ಬಹುವಿಧವಾಗಿ ಸೇವೆಯನ್ನು ಸಲ್ಲಿಸಿ ಧನ್ಯತಾಭಾವವನ್ನು ಹೊಂದಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts