More

    ‘ಕೋಟಿಗೊಬ್ಬ 3’ ಬಿಡುಗಡೆ ಯಾವಾಗ? ಸುದೀಪ್​ ಹೇಳ್ತಾರೆ ಕೇಳಿ …

    ಸುದೀಪ್​ ಅಭಿನಯದ ‘ಕೋಟಿಗೊಬ್ಬ 3’ ಚಿತ್ರದ ಚಿತ್ರೀಕರಣ ಈ ವರ್ಷದ ಆರಂಭದಲ್ಲೇ ಮುಗಿದಿತ್ತು. ಏಪ್ರಿಲ್​-ಮೇ ಹೊತ್ತಿಗೆ ಚಿತ್ರ ಬಿಡಗುಡೆಯಾಗುತ್ತದೆ ಎಂದು ಸಹ ಹೇಳಲಾಗಿತ್ತು. ಆದರೆ, ಅಷ್ಟರಲ್ಲಿ ಲಾಕ್​ಡೌನ್​ ಘೋಷಣೆಯಾಗಿದ್ದರಿಂದ, ಚಿತ್ರದ ಕೆಲಸಗಳೆಲ್ಲಾ ನಿಂತವು.

    ಇದನ್ನೂ ಓದಿ: ಅರ್ಜುನ್​ ಸರ್ಜಾ ಪುತ್ರಿ ಐಶ್ವರ್ಯಾ ಕರೊನಾ ವರದಿ ನೆಗೆಟಿವ್​; ಆಸ್ಪತ್ರೆಯಿಂದ ಡಿಸ್ಚಾರ್ಜ್​

    ಈಗ ಲಾಕ್​ಡೌನ್​ ತೆರವಾಗಿ, ಚಿತ್ರ ಚಟುವಟಿಕೆಗಳು ಶುರುವಾಗಿದೆ. ಬರೀ ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳು ಪ್ರಾರಂಭವಾಗಿರುವುದಷ್ಟೇ ಅಲ್ಲ, ಚಿತ್ರೀಕರಣ ಸಹ ಶುರುವಾಗಿದ್ದು, ಸುದೀಪ್​ ಸಹ ‘ಫ್ಯಾಂಟಮ್​’ ಚಿತ್ರದ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಈ ಮೂಲಕ, ಚಿತ್ರೀಕರಣದಲ್ಲಿ ಪಾಲ್ಗೊಂಡ ಮೊದಲ ದೊಡ್ಡ ನಟ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

    ಎಲ್ಲಾ ಸರಿ, ಈ ಮಧ್ಯೆ, ‘ಕೋಟಿಗೊಬ್ಬ 3’ ಚಿತ್ರದ ಕಥೆ ಏನು ಎಂಬ ಪ್ರಶ್ನೆ ಬರುವುದು ಸಹಜ. ಚಿತ್ರದ ಚಿತ್ರೀಕರಣವೇನೋ ಮುಗಿದಿದೆ. ಇನ್ನು ಬಿಡುಗಡೆ ಯಾವಾಗ ಎಂದು ಅಭಿಮಾನಿಗಳು ಕೇಳುತ್ತಿದ್ದಾರೆ. ಅಷ್ಟೇ ಅಲ್ಲ, ಚಿತ್ರತಂಡದವರ್ಯಾರೂ ಚಿತ್ರದ ಬಗ್ಗೆ ತುಟಿಕ್​ ಪಿಟಿಕ್​ ಅನ್ನುತ್ತಿಲ್ಲ ಎಂದು ಬೇಸರಿಸಿಕೊಂಡಿದ್ದಾರೆ.

    ಇದನ್ನೂ ಓದಿ: ಅಕ್ಷಯ್​ ಕುಮಾರ್ ಜತೆ ಸೂರ್ಯವಂಶಿ ಚಿತ್ರದಲ್ಲಿ ನಟಿಸಿದ ಕಲಾವಿದ ಇದೀಗ ತರಕಾರಿ ವ್ಯಾಪಾರಿ!

    ಈ ಕುರಿತು ಟ್ವೀಟ್​ ಮಾಡಿರುವ ಸುದೀಪ್​, ‘ಬಹಳಷ್ಟು ಜನ ‘ಕೋಟಿಗೊಬ್ಬ 3′ ಕುರಿತು ಏನಾದರೂ ಅಪ್​ಡೇಟ್​ ಕೊಡಿ ಎಂದು ಕೇಳುತ್ತಲೇ ಇದ್ದಾರೆ. ಚಿತ್ರದ ಚಿತ್ರೀಕರಣ ಮುಗಿದು, ಪೋಸ್ಟ್​ ಪ್ರೊಡಕ್ಷನ್​ ಸಹ ಬಹುತೇಕ ಮುಗಿದಿದೆ. ಈ ಮಧ್ಯೆ ಲಾಕ್​ಡೌನ್​ ಆಗಿರುವುದರಿಂದ, ಪೋಸ್ಟ್​ ಪ್ರೊಡಕ್ಷನ್​ ಕೆಲಸ ಬಾಕಿ ಉಳಿದಿದೆ. ಬಾಕಿ ಉಳಿದಿರುವ ಕೆಲಸಗಳನ್ನು ಆದಷ್ಟು ಬೇಗ ಮುಗಿಸಿ, ಚಿತ್ರ ಬಿಡುಗಡೆ ಮಾಡುತ್ತೇವೆ’ ಎಂದು ಸುದೀಪ್​ ಹೇಳಿಕೊಂಡಿದ್ದಾರೆ.

    ಇದೇನಿದು ಜಯಶ್ರೀ ಹೊಸ ಅವತಾರ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts