More

    ಚಿತ್ರರಂಗ ನನ್ನ ಸ್ವತ್ತಲ್ಲ; ಇಷ್ಟ ಇದ್ದವರು ಆಡಲು ಬರ್ತಾರೆ ಎಂದ ಸುದೀಪ್​

    ಬೆಂಗಳೂರು: ಕೋವಿಡ್​ ಕಾರಣಗಳಿಂದ ಕಳೆದ ಕೆಲವು ವರ್ಷಗಳಿಂದ ನಿಂತಿದ್ದ ‘ಕರ್ನಾಟಕ ಚಲನಚಿತ್ರ ಕಪ್​’, ಈ ಬಾರಿ ಮತ್ತೊಮ್ಮೆ ಮುಂದುವರೆಯಲಿದೆ. ಸುದೀಪ್​ ನೇತೃತ್ವದಲ್ಲಿ ಪ್ರಾರಂಭವಾದ ಈ ಕಪ್​ನ ಮೂರನೆಯ ಸೀಸನ್​ ಸದ್ಯದಲ್ಲೇ ಪ್ರಾರಂಭವಾಗಲಿದೆ.

    ಇದನ್ನೂ ಓದಿ: ಫೆ.17ಕ್ಕೆ ಬಿಡುಗಡೆಯಾಗಲಿದೆ ಅಕ್ಷಿತ್​ – ಅದಿತಿ ಅಭಿನಯದ ‘ಖೆಯೊಸ್​’

    ಸೋಮವಾರ ಬೆಳಿಗ್ಗೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಈ ಬಾರಿಯ ಸೀಸನ್​ ಕುರಿತು ಮಾಹಿತಿ ಹಂಚಿಕೊಂಡ ಸುದೀಪ್​, ‘ನಮ್ಮ ಚಿತ್ರರಂಗದಲ್ಲೊಂದು ಸಣ್ಣ ಗ್ಯಾಪ್​ ಇದೆ. ಚಿತ್ರರಂಗದವರಿಗೆ ಒಟ್ಟಿಗೇ ಸೇರುವುದಕ್ಕೆ ಒಂದು ವೇದಿಕೆ ಇಲ್ಲ. ಇಲ್ಲಿ ಕಲಾವಿದರು ಮಾತ್ರವಲ್ಲ, ತಂತ್ರಜ್ನರು, ಮಾಧ್ಯಮದವರು ಸೇರಿದಂತೆ ಸಾಕಷ್ಟು ಜನ ಇದ್ದಾರೆ. ಅವರನ್ನೆಲ್ಲ ಒಂದೇ ಕಡೆ ಸೇರಿಸುವ ವೇದಿಕೆ ಕೆಸಿಸಿ. ಇಲ್ಲಿ ನನ್ನದು ಅಂತ ಏನೂ ಇಲ್ಲ. ಎಲ್ಲರೂ ಇರುತ್ತಾರೆ. ನಾವೆಲ್ಲರೂ ಸೇರಿ ಈ ಬಾರಿ ಒಟ್ಟಿಗೆ ಕ್ರಿಕೆಟ್​ ಆಡುತ್ತೇವೆ’ ಎನ್ನುತ್ತಾರೆ ಅವರು.

    ಕಳೆದ ಸೀಸನ್​ಗಳಲ್ಲಿ ಕೆಲವು ನಟರು ಬಾರದಿದ್ದಕ್ಕೆ ಪ್ರತಿಕ್ರಿಯಿಸಿದ ಅವರು, ‘ಇದು ನನ್ನ ಸ್ವತ್ತಲ್ಲ. ಈ ಟೂರ್ನಿಯಲ್ಲಿ ಭಾಗವಹಿಸಲು ಎಲ್ಲರಿಗೂ ಆಹ್ವಾನ ನೀಡುತ್ತೇವೆ. ಕೆಲವರಿಗೆ ಈ ಟೂರ್ನಿಯಲ್ಲಿ ಆಡೋಕೆ ಇಷ್ಟ ಇರುವುದಿಲ್ಲ. ಅಂತಹವರು ಬರುವುದಿಲ್ಲ. ಅವರು ಯಾಕೆ ಬಂದಿಲ್ಲ, ಇವರು ಯಾಕೆ ಬಂದಿಲ್ಲ ಎಂದು ಉತ್ತರ ಕೊಡುವುದು ಕಷ್ಟ. ಅವರವರ ಕೆಲಸಗಳನ್ನು ನೋಡಿಕೊಂಡು ಬರುತ್ತಾರೆ’ ಎಂದು ಸುದೀಪ್​ ಹೇಳಿದರು.
    ಈ ಬಾರಿ ಟೂರ್ನಿ ಬರೀ ಬೆಂಗಳುರಿಗೆ ಮಾತ್ರ ಸೀಮಿತವಾಗುವುದಿಲ್ಲವಂತೆ. ಮೈಸೂರಿನಲ್ಲೂ ಟೂರ್ನಿ ನಡೆಯಲಿದೆ. ಈ ಟೂರ್ನಿಗೆ ಅಂತಾರಾಷ್ಟ್ರೀಯ ಆಟಗಾರರನ್ನು ಕರೆಸುವ ಉದ್ದೇಶವಿದ್ದರೂ ಅದು ಕಷ್ಟ ಎನ್ನುವ ಅವರು, ‘ಅಂತಾರಾಷ್ಟ್ರೀಯ ಆಟಗಾರರನ್ನು ಕರೆತರೋದು ಬಹಳ ಕಷ್ಟ. ಅವರನ್ನು ಭೇಟಿ ಮಾಡುವುದೇ ಕಷ್ಟ. ದುಡ್ಡಿದ್ದರೆ ಎಲ್ಲವೂ ಆಗುವುದಿಲ್ಲ. ಅದರ ಹಿಂದೆ ಸಾಕಷ್ಟು ಶ್ರಮ ಬೇಕು’ ಎನ್ನುತ್ತಾರೆ ಸುದೀಪ್​.

    ಇದನ್ನೂ ಓದಿ: ಮತ್ತೊಮ್ಮೆ ‘ಬೊಂಬಾಟ್​ ಭೋಜನ’ ಬಡಿಸಲು ಬರುತ್ತಿದ್ದಾರೆ ಸಿಹಿಕಹಿ ಚಂದ್ರು

    ಈ ಬಾರಿಯ ಟೂರ್ನಿಯಲ್ಲಿ ಸುದೀಪ್, ಶಿವರಾಜಕುಮಾರ್​, ಉಪೇಂದ್ರ, ಗಣೇಶ್, ‘ಡಾಲಿ’ ಧನಂಜಯ್ ಮುಂತಾದವರು ಭಾಗವಹಿಸುತ್ತಿದ್ದಾರೆ. ‘ಕೆಸಿಸಿ ಸೀಸನ್ 3’ ಪಂದ್ಯಗಳನ್ನು ಫೆಬ್ರವರಿ 11 ಹಾಗೂ 12ರಂದು ಆಯೋಜಿಸಲಾಗಿದೆ.

    ಕನ್ನಡಕ್ಕೆ ನನ್ನ ಮೊದಲ ಪ್ರಾಶಸ್ತ್ಯ; ಮನದ ಮಾತು ಬಿಚ್ಚಿಟ್ಟ ಸಪ್ತಮಿ ಗೌಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts