More

    ಪವನ್​ ಒಡೆಯರ್​ ವಿರುದ್ಧ ಸುದೀಪ್​ ಅಭಿಮಾನಿಗಳ ಆಕ್ರೋಶ

    ಕರೊನಾ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆಯು ಬದಲಾಗು ನೀನು ಎಂಬ ವಿಡಿಯೋ ನಿರ್ಮಿಸಿರುವುದು ಗೊತ್ತಲ್ಲ. ಇದಕ್ಕೂ ಮುನ್ನ, ಈ ಹಾಡು ಮೇ 25ರಂದು ಯೂಟ್ಯೂಬ್​ನ ಡಿಬೀಟ್ಸ್​ ಮ್ಯೂಸಿಕ್​ ಚಾನಲ್​ನಲ್ಲಿ ಬಿಡುಗಡೆಯಾಗಬೇಕಿತ್ತು. ಕಾರಣಾಂತರಗಳಿಂದ ಹಾಡಿನ ಬಿಡುಗಡೆ ಪೋಸ್ಟ್​ಪೋನ್​ ಆಗಿ, ಇದೀಗ ನಾಳೆ ಅಂದರೆ ಜೂನ್​ ಐದರಂದು ಸಂಜೆ 5ಕ್ಕೆ ಬಿಡುಗಡೆಯಾಗಲಿದೆ.

    ಇದನ್ನೂ ಓದಿ: PHOTO GALLERY| ಹುಟ್ಟುಹಬ್ಬ ಸಂಭ್ರಮದಲ್ಲಿರೋ ಪ್ರಿಯಾಮಣಿಯವರ ಹಾಟ್​ ಫೋಟೋ ಗ್ಯಾಲರಿ ನಿಮಗಾಗಿ

    ಎಂಟು ನಿಮಿಷಗಳ ಈ ಹಾಡಿನಲ್ಲಿ ಕನ್ನಡ ಚಿತ್ರರಂಗದ ಜನಪ್ರಿಯ ಕಲಾವಿದರೆಲ್ಲಾ ಕಾಣಿಸಿಕೊಂಡಿದ್ದಾರೆ. ಶಿವರಾಜಕುಮಾರ್, ಉಪೇಂದ್ರ, ದರ್ಶನ್, ರವಿಚಂದ್ರನ್, ಯಶ್​, ಉಪೇಂದ್ರ, ಗಣೇಶ್, ಸುಮಲತಾ ಅಂಬರೀಷ್​​, ರಕ್ಷಿತ್ ಶೆಟ್ಟಿ, ಅಭಿಷೇಕ್​ ಅಂಬರೀಷ್​, ರವಿಶಂಕರ್, ರಮೇಶ್ ಅರವಿಂದ್, ವಿಜಯ್ ಪ್ರಕಾಶ್, ಶಾನ್ವಿ ಶ್ರೀವಾತ್ಸವ್, ಹರ್ಷಿಕಾ ಪೂಣಾಚ್ಛ, ಆಶಿಕಾ ರಂಗನಾಥ್, ರಾಕ್‌ಲೈನ್ ವೆಂಕಟೇಶ್, ಕ್ರಿಕೆಟಿಗ ರಾಹುಲ್​ ದ್ರಾವಿಡ್​, ಅನಿಲ್ ಕುಂಬ್ಳೆ ಮುಂತಾದವರು ಕಾಣಿಸಿಕೊಂಡಿದ್ದಾರೆ.

    ಈ ಹಾಡಿನಲ್ಲಿ ಕನ್ನಡ ಚಿತ್ರರಂಗದ ಬಹುತೇಕ ಜನಪ್ರಿಯ ಸ್ಟಾರ್​ಗಳೆಲ್ಲಾ ಕಾಣಿಸಿಕೊಂಡಿದ್ದು, ಸುದೀಪ್​ ಇಲ್ಲದ ಬಗ್ಗೆ ಅವರ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ಸುದೀಪ್​ ಅಭಿಮಾನಿಗಳು ಸೋಷಿಯಲ್​ ಮೀಡಿಯಾದಲ್ಲಿ, ಈ ಹಾಡನ್ನು ನಿರ್ದೇಶಿಸಿರುವ ಪವನ್​ ಒಡೆಯರ್​ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹಾಡಿನಲ್ಲಿ ಸುದೀಪ್​ ಇಲ್ಲದಿರುವುದರಿಂದ ತಮಗೆ ಬೇಸರವಾಗಿದ್ದು, ಹಾಡು ಬಿಡುಗಡೆಯಾದ ನಂತರ ಸುದೀಪ್​ ಅಭಿಮಾನಿಗಳೆಲ್ಲಾ ಡಿಸ್ಲೈಕ್​ ಮಾಡುವುದಕ್ಕೆ ಕೆಲವರು ಹೇಳಿದರೆ, ಸುದೀಪ್​ ಈ ಹಾಡಿನಲ್ಲಿ ಇಲ್ಲದಿರುವುದು ತಮಗೆ ಬೇಸರ ತಂದಿದ್ದು, ಈ ಬಗ್ಗೆ ಸ್ಪಷ್ಟೀಕರಣ ನೀಡಿ ಎಂದು ಕೆಲವರು ಹೇಳಿದ್ದಾರೆ.

    ಇದನ್ನೂ ಓದಿ: ಅಮ್ಮ ಮಾಡಿದ ಕೆಲಸದಿಂದ ಸಮಸ್ಯೆ ಆಗಿದ್ದು ಕರೀನಾಗೆ …

    ಬರೀ ಸುದೀಪ್​ ಅಭಿಮಾನಿಗಳು ಮಾತ್ರವಲ್ಲ, ಗಣೇಶ್ ಅಭಿಮಾನಿಗಳು ಸಹ ಹಾಡಿನ ಪೋಸ್ಟರ್​ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ತಮ್ಮ ನೆಚ್ಚಿನ ನಟನ ಫೋಟೋನ ಎಲ್ಲೋ ಮೂಲೆಯಲ್ಲಿ ಹಾಕಲಾಗಿದೆ, ಅಷ್ಟೊಂದು ಸ್ಟಾರ್​ಗಳ ಮಧ್ಯೆ ಗೋಲ್ಡನ್​ ಸ್ಟಾರ್​ ಅವರನ್ನು ಮೂಲೆಗುಂಪು ಮಾಡಲಾಗಿದೆ ಎಂದು ಸೋಷಿಯಲ್​ ಮೀಡಿಯಾದಲ್ಲಿ ಗಣೇಶ್​ ಅಭಿನಾನಿಗಳು ಬೇಸರ ವ್ತಕ್ತಪಡಿಸಿದ್ದರು. ಈಗ ಪೋಸ್ಟರ್​ನಲ್ಲಿ ಗಣೇಶ್​ ಅವರ ಸ್ಥಾನವನ್ನು ಬದಲಾಗಿಸಿದ್ದು, ಈ ಬಗ್ಗೆ ಗಣೇಶ್​ ಅಭಿಮಾನಿಗಳು ಸಂತೋಷ ವ್ಯಕ್ತಪಡಿಸಿದ್ದಾರೆ.

    ಇನ್ನು ಈ ಹಾಡಿನಲ್ಲಿ ಜಗ್ಗೇಶ್​ ಅವರು ಇಲ್ಲದ್ದರ ಬಗ್ಗೆಯೂ ಟೀಕೆಗಳು ವ್ಯಕ್ತವಾಗಿದ್ದು, ಅಷ್ಟೊಂದು ಸ್ಟಾರ್​ಗಳು ಇರುವಾಗ ಜಗ್ಗೇಶ್​ ಅವರನ್ನು ಸಹ ಸೇರಿಸಿಕೊಳ್ಳಬೇಕಿತ್ತು ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ. ಹಾಗೆಯೇ ಉಪೇಂದ್ರ ಅವರನ್ನು ಮೂಲೆಗುಂಪು ಮಾಡಲಾಗಿದೆ ಎಂದು ಅವರ ಅಭಿಮಾನಿಗಳು ದೂರುತ್ತಿದ್ದಾರೆ.

    ಈ ಹಾಡಿನ ಕಾನ್ಸೆಪ್ಟ್ ಮತ್ತು ನಿರ್ದೇಶನ ಪವನ್ ಒಡೆಯರ್ ಅವರದ್ದಾಗಿದ್ದು, ವಿ. ಹರಿಕೃಷ್ಣ ಸಂಗೀತ ಸಂಯೋಜಿಸಿದ್ದಾರೆ. ಇನ್ನು ಪ್ರದ್ಯುಮ್ನ ನರಹಳ್ಳಿ ಸಾಹಿತ್ಯ ಬರೆದರೆ, ಇಮ್ರಾನ್ ಸರ್ದಾರಿಯಾ ನೃತ್ಯ ನಿರ್ದೇಶನ ಮಾಡಿದ್ದಾರೆ. ಈಗಾಗಲೇ ಪವನ್ ಮತ್ತು ಇಮ್ರಾನ್, ಹಲವು ಕಲಾವಿದರನ್ನು ಭೇಟಿ ಮಾಡಿ, ಚಿತ್ರೀಕರಣ ಮಾಡಿಕೊಂಡು ಬಂದಿದ್ದಾರೆ. ಇನ್ನೂ ಕೆಲವರು ಮನೆಯಲ್ಲೇ ಅಗತ್ಯವಿರುವ ದೃಶ್ಯಗಳನ್ನು ಶೂಟ್ ಮಾಡಿ ಕಳುಹಿಸಿದ್ದಾರೆ.

    ಸಾಮಾಜಿಕ ಜಾಲತಾಣಕ್ಕೆ ಮರಳಿದ ಮೋಹಕತಾರೆ ರಮ್ಯಾರಿಂದ ಸಮಯ ಮೀಸಲಿಡಲು ಕರೆ…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts