More

    ಸುಮಾರು 140 ಭಾಷೆಗಳಲ್ಲಿ ಅದ್ಭುತವಾಗಿ ಹಾಡಿ ಗಿನ್ನೆಸ್ ದಾಖಲೆ ನಿರ್ಮಿಸಿದ ಗಾಯಕಿ ಸುಚೇತಾ ಸತೀಶ್

    ಅಬುಧಾಬಿ: ತಮ್ಮ ಸುಮಧುರ ಕಂಠದಿಂದ ಅಭಿಮಾನಿಗಳ ಮನ ಕದ್ದ ಬಹುಭಾಷಾ ಗಾಯಕಿ ಸುಚೇತಾ ಸತೀಶ್ ಮತ್ತೊಂದು ಗಿನ್ನಿಸ್ ದಾಖಲೆ ಬರೆದಿದ್ದಾರೆ. ವಿಶ್ವಸಂಸ್ಥೆಯ ಹವಾಮಾನ ಶೃಂಗಸಭೆಗೆ ಒಗ್ಗಟ್ಟಿನಿಂದ ನಡೆದ ಕನ್ಸರ್ಟ್ ಫಾರ್ ಕ್ಲೈಮೇಟ್‌ನಲ್ಲಿ ಸುಚೇತಾ 140 ಭಾಷೆಗಳಲ್ಲಿ ಹಾಡುಗಳನ್ನು ಹಾಡುವ ಮೂಲಕ ಗಿನ್ನೆಸ್ ದಾಖಲೆ ನಿರ್ಮಿಸಿದರು. ವಿಶ್ವ ದಾಖಲೆಯ ಪ್ರದರ್ಶನವನ್ನು ನವೆಂಬರ್ 24, 2023 ರಂದು ದುಬೈನ ಭಾರತೀಯ ಕಾನ್ಸುಲೇಟ್ ಸಭಾಂಗಣದಲ್ಲಿ ನಡೆಸಲಾಯಿತು.  

    ಕಣ್ಣೂರು ಎಳಯವೂರು ಮೂಲದ ಡಾ. ಸತೀಶ್ ಮತ್ತು ಸುಮಿತಾ ಆಯಿಲ್ಯಂ ಅವರ ಪುತ್ರಿಯಾದ ಸುಚೇತಾ ದುಬೈ ನಾಲೆಡ್ಜ್ ಪಾರ್ಕ್‌ನಲ್ಲಿರುವ ಮಿಡ್ಲ್ ಸೆ#ಕ್ಸ್ ಯೂನಿವರ್ಸಿಟಿ ಡಿಜಿಟಲ್ ಮೀಡಿಯಾದ ವಿದ್ಯಾರ್ಥಿನಿ. ಸುಚೇತಾ ಅವರಿಗೆ ಈಗ 18 ವರ್ಷ. ಅತಿ ಹೆಚ್ಚು (140) ಭಾಷೆಗಳಲ್ಲಿ ಹಾಡಿದ ದಾಖಲೆಯನ್ನು ಸಹ ಹೊಂದಿದ್ದಾರೆ.

    ಮಲಯಾಳಂ ಸೇರಿದಂತೆ 39 ಭಾರತೀಯ ಭಾಷೆಗಳಲ್ಲದೆ, 101 ವಿಶ್ವ ಭಾಷೆಗಳಲ್ಲಿ ಹಾಡನ್ನು ಹಾಡಿದ್ದಾರೆ. ನಿನ್ನೆ ವೆಬ್‌ಸೈಟ್ ಮೂಲಕ ಗಿನ್ನೆಸ್ ಅಧಿಕಾರಿಗಳು ಪ್ರಶಸ್ತಿಯನ್ನು ಪ್ರಕಟಿಸಿದ್ದಾರೆ. ಶೃಂಗಸಭೆಯಲ್ಲಿ 140 ರಾಷ್ಟ್ರಗಳ ಉಪಸ್ಥಿತಿಯು ಹಲವಾರು ಭಾಷೆಗಳಲ್ಲಿ ಹಾಡಲು ಪ್ರೇರೇಪಿಸಿತು ಎಂದು ಸುಚೇತಾ ಹೇಳಿದರು. ವಿಶ್ವ ದಾಖಲೆಯೊಂದಿಗೆ ಸಂಗೀತದಲ್ಲಿ ಹೊಸ ಎತ್ತರವನ್ನು ತಲುಪಲು ಸುಚೇತಾ ಸಿದ್ಧತೆ ನಡೆಸುತ್ತಿದ್ದಾರೆ.

    ಆಗಸ್ಟ್ 19, 2021 ರಂದು, ಅವರು ದುಬೈ ಇಂಡಿಯನ್ ಕಾನ್ಸುಲೇಟ್‌ನಲ್ಲಿ 120 ಭಾಷೆಗಳಲ್ಲಿ ಹಾಡುವ ಮೂಲಕ ಗಿನ್ನೆಸ್‌ ದಾಖಲೆಯನ್ನು ನಿರ್ಮಿಸಿದ್ದರು. ಭಾರತದ 75ನೇ ಸ್ವಾತಂತ್ರ್ಯ ದಿನಾಚರಣೆ ಹಾಗೂ ಯುಎಇಯ 50ನೇ ರಾಷ್ಟ್ರೀಯ ದಿನಾಚರಣೆಯ ಸಂದರ್ಭದಲ್ಲಿ ‘ಮ್ಯೂಸಿಕ್ ಬಿಯಾಂಡ್ ದಿ ಬಾರ್ಡಸ್್ರ’ ಎಂಬ ಶೀರ್ಷಿಕೆಯಡಿ ಸಂಗೀತ ಕಾರ್ಯಕ್ರಮವನ್ನು ಪ್ರಸ್ತುತಪಡಿಸಲಾಯಿತು.

    2018 ರಲ್ಲಿ, ಸುಚೇತಾ ಯುಎಸ್ ಮೂಲದ ವರ್ಲ್ಡ್ ರೆಕಾರ್ಡ್ ಅಕಾಡೆಮಿಯಿಂದ 102 ಭಾಷೆಗಳಲ್ಲಿ ಹಾಡಿದ್ದಕ್ಕಾಗಿ ಮತ್ತು ಸುದೀರ್ಘವಾದ ನಿರಂತರ ಗಾಯನ ಸಮಯಕ್ಕಾಗಿ 2 ಪ್ರಶಸ್ತಿಗಳನ್ನು ಗೆದ್ದಿದ್ದಾರೆ. 12 ನೇ ವಯಸ್ಸಿನಲ್ಲಿ, ಅವರು ಹೆಚ್ಚಿನ ಭಾಷೆಗಳಲ್ಲಿ ಸುದೀರ್ಘ ಸಂಗೀತ ಕಚೇರಿ ನಡೆಸಿಕೊಟ್ಟಿದ್ದಾರೆ.

    Higher Pension Deadline: ಕೋಟ್ಯಾಂತರ ಜನರಿಗೆ ಹೊಸ ವರ್ಷದ ಉಡುಗೊರೆ ನೀಡಿದ ಇಪಿಎಫ್‌ಒ; ಗಡುವು ವಿಸ್ತರಣೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts