More

    ಹೆತ್ತ ಮಗನನ್ನೇ ಕೊಂದ ಸಿಇಓ ಸುಚನಾ ಪ್ರಕರಣ| ಜ.6 ರಂದು ಏನಾಯಿತು, ಹತ್ಯೆಯ ಹಿಂದಿನ ನಿಜವಾದ ಉದ್ದೇಶವೇನು?

    ಬೆಂಗಳೂರು: ಗೋವಾದಲ್ಲಿ ನಾಲ್ಕು ವರ್ಷದ ಮಗನನ್ನೇ ಹತ್ಯೆಗೈದ ಸುಚನಾಳನ್ನು ಮಂಗಳವಾರ ಮಾಪುಸಾ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಗೋವಾದ ಕ್ಯಾಲಂಗುಟ್ ಪೊಲೀಸರು ಮಾಹಿತಿ ಮೇರೆಗೆ ಭಾರತೀಯ ದಂಡ ಸಂಹಿತೆ (ಐಪಿಸಿ) ಮತ್ತು ಗೋವಾ ಬಾಲಾಪರಾಧಿ ಕಾಯ್ದೆಯ ಸೆಕ್ಷನ್ 302 (ಕೊಲೆ) ಮತ್ತು 201 (ಸಾಕ್ಷ್ಯ ನಾಶ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಆಕೆಯನ್ನು ವಿಚಾರಣೆ ನಡೆಸಿದ ಬಳಿಕವಷ್ಟೇ ಕೊಲೆಯ ಹಿಂದಿನ ಉದ್ದೇಶ ತಿಳಿಯಲಿದೆ ಎಂದು ಉತ್ತರ ಗೋವಾ ಎಸ್ಪಿ ತಿಳಿಸಿದ್ದಾರೆ. ಆಕೆ ಮತ್ತು ಆಕೆಯ ಪತಿ ಪರಸ್ಪರ ಬೇರ್ಪಟ್ಟಿದ್ದು, ಪ್ರಸ್ತುತ ಅವರು ವಿಚ್ಛೇದನ ಪ್ರಕ್ರಿಯೆಗಳನ್ನು ನಡೆಸುತ್ತಿದ್ದಾರೆ ಎಂದು ಇದುವರೆಗಿನ ಮಾಹಿತಿಯು ಪೊಲೀಸರಿಗೆ ತಿಳಿಸಿದೆ ಎಂದು ಎಸ್ಪಿ ಹೇಳಿದ್ದಾರೆ.

    ಸುಚನಾ ಪಶ್ಚಿಮ ಬಂಗಾಳದವರಾಗಿದ್ದು, ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ. ಆದರೆ, ಆಕೆಯ ಪತಿ ಕೇರಳದವರಾಗಿದ್ದು, ಪ್ರಸ್ತುತ ಜಕಾರ್ತದಲ್ಲಿ (ಇಂಡೋನೇಷ್ಯಾ) ಇದ್ದಾರೆ. ಘಟನೆ ಕುರಿತು ಪೊಲೀಸರು ಸೂಚನಾ ಅವರ ಪತಿಗೆ ಮಾಹಿತಿ ನೀಡಿದ್ದಾರೆ. ಮರಣೋತ್ತರ ಪರೀಕ್ಷೆ ಬಳಿಕವಷ್ಟೇ ಮಗುವಿನ ಸಾವಿಗೆ ನಿಖರ ಕಾರಣ ತಿಳಿಯಲಿದೆ.

    ಜನವರಿ 6 ರಂದು ಏನಾಯಿತು?
    ಪೊಲೀಸರ ಪ್ರಕಾರ, ಜನವರಿ 6 ರಂದು, ಸುಚನಾ ಸೇಠ್ ತನ್ನ ಮಗನೊಂದಿಗೆ ಉತ್ತರ ಗೋವಾದ ಕ್ಯಾಂಡೋಲಿಮ್‌ನಲ್ಲಿರುವ ಹೋಟೆಲ್​​​​ಗೆ ಚೆಕ್-ಇನ್ ಆಗಿದ್ದಳು. ಸುಮಾರು 2 ದಿನಗಳ ಕಾಲ ಅಲ್ಲಿಯೇ ಇದ್ದಳು. ಬಳಿಕ ತಾನು ಯಾವುದೋ ಕೆಲಸದ ನಿಮಿತ್ತ ಬೆಂಗಳೂರಿಗೆ ಹೋಗುವುದಾಗಿ ಸಿಬ್ಬಂದಿಗೆ ತಿಳಿಸಿ ಟ್ಯಾಕ್ಸಿ ವ್ಯವಸ್ಥೆ ಮಾಡುವಂತೆ ಹೇಳಿದ್ದಾಳೆ. ಜನವರಿ 8 ರಂದು ಸುಚನಾ ತನ್ನ ಭಾರವಾದ ಸೂಟ್‌ಕೇಸ್‌ನೊಂದಿಗೆ ಟ್ಯಾಕ್ಸಿಯಲ್ಲಿ ಹೋಟೆಲ್‌ನಿಂದ ಒಬ್ಬಳೇ ಹೊರಟಿದ್ದಾಳೆ. ಅವಳು ಬೆಳಗ್ಗೆಯೇ ತನ್ನ ಹೋಟೆಲ್‌ನಿಂದ ಹೊರಟಳು, ಆದರೆ ಅವಳ ಮಗ ಅವಳೊಂದಿಗೆ ಇರಲಿಲ್ಲ.

    ಮಗನಿಲ್ಲದೆ ಹೋಟೆಲ್‌ನಿಂದ ಹೊರಬಂದ ಸುಚನಾ 
    ಹೋಟೆಲ್​​​​ ಸಿಬ್ಬಂದಿ ಸುಚನಾ ಸೇಠ್ ಉಳಿದಿದ್ದ ಕೊಠಡಿಯನ್ನು ಸ್ವಚ್ಛಗೊಳಿಸಲು ಹೋದಾಗ ಟವೆಲ್‌ನಲ್ಲಿ ರಕ್ತದ ಕಲೆಗಳು ಕಂಡುಬಂದಿವೆ. ಇದಾದ ನಂತರ ಹೋಟೆಲ್ ಆಡಳಿತ ಮಂಡಳಿಯವರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಹಿಳೆ ಹೋಟೆಲ್​​​​ನಿಂದ ಹೊರಬಂದಾಗ, ಆಕೆಯ ನಾಲ್ಕು ವರ್ಷದ ಮಗ ಅವಳೊಂದಿಗೆ ಕಾಣಲಿಲ್ಲ ಮತ್ತು ಅವಳು ಭಾರವಾದ ಚೀಲವನ್ನು ಸಹ ಹೊತ್ತಿದ್ದಳು ಎಂದು ಸಿಬ್ಬಂದಿ ವರದಿ ಮಾಡಿದ್ದಾರೆ. ಚಿತ್ರದುರ್ಗದ (ಕರ್ನಾಟಕ) ಪೊಲೀಸರು ನಂತರ ಮಹಿಳೆಯ ಬ್ಯಾಗ್ ಅನ್ನು ಪರಿಶೀಲಿಸಿದಾಗ ಮಗನ ಶವ ಪತ್ತೆಯಾಗಿದೆ.

    2021ರ ಎಐ ಎಥಿಕ್ಸ್ ಲಿಸ್ಟ್​​​ನಲ್ಲಿ 100 ಪ್ರತಿಭಾವಂತ ಮಹಿಳೆಯರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದ ಸುಚನಾ ಸೇಠ್

    ಸ್ವಂತ ಮಗನನ್ನೇ ಕೊಂದ ಸಿಇಓ ಸುಚನಾ ಪ್ರಕರಣ: ಮಹತ್ವದ ಮಾಹಿತಿ ನೀಡಿದ ಗೋವಾ ಪೊಲೀಸರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts