More

    ಶಿಸ್ತು ಬದ್ಧ, ವ್ಯವಸ್ಥಿತ ಯೋಜನೆಯಿಂದ ಯಶಸ್ಸು

    ಅರಸೀಕೆರೆ: ಶಿಸ್ತು ಬದ್ಧ, ವ್ಯವಸ್ಥಿತ ಯೋಜನೆ, ಯೋಚನೆ, ಅಧ್ಯಯನ ಮತ್ತು ಪ್ರಯತ್ನಗಳಿಂದ ಯಶಸ್ಸು ಕಾಣಲು ಸಾಧ್ಯವಿದೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ.ಎಸ್.ನಾರಾಯಣ್ ಹೇಳಿದರು.

    ಆಂತರಿಕ ಗುಣಮಟ್ಟದ ಭರವಸೆ ಕೋಶ(ಐ.ಕ್ಯೂ.ಎ.ಸಿ) ಸಹಯೋಗದೊಂದಿಗೆ ಅರ್ಥಶಾಸ್ತ್ರ ವಿಭಾಗ ವತಿಯಿಂದ ಕಾಲೇಜು ಸಭಾಂಗಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ‘ಕರ್ನಾಟಕ ಬಜೆಟ್ ವಿಶ್ಲೇಷಣೆ ಮತ್ತು ಪದವಿ ನಂತರ ಮುಂದೇನು?’ಎಂಬ ವಿಷಯ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಬಂಡವಾಳ ಹೂಡುವಿಕೆಯಿಂದ ಆರ್ಥಿಕ ಪ್ರಗತಿ ಸಾಧಿಸಬಹುದು. ಈ ನಿಟ್ಟಿನಲ್ಲಿ ತಜ್ಞರ ಸಲಹೆ ಪಡೆಯಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

    ಸಂಪನ್ಮೂಲ ವ್ಯಕ್ತಿ ಯಗಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ.ಶರತ್‌ಕುಮಾರ್ ಮಾತನಾಡಿ, ಬಜೆಟ್ ಅನ್ನು ವಾರ್ಷಿಕ ಹಣಕಾಸು ಯೋಜನೆ ಎಂದೂ ಕರೆಯಲಾಗುತ್ತದೆ. ವರ್ಷದಲ್ಲಿ ಭರಿಸಬಹುದೆಂದು ಅಂದಾಜಿಸಲಾದ ರಸೀದಿ ಮತ್ತು ವೆಚ್ಚಗಳ ಹೇಳಿಕೆಯಾಗಿದೆ. ಇದು ರಸೀದಿಗಳ ಮೂಲ ಮತ್ತು ವರ್ಷದ ವೆಚ್ಚಗಳನ್ನು ಪಟ್ಟಿ ಮಾಡುತ್ತದೆ ಎಂದರು.

    ವಿವಿಧ ಇಲಾಖೆಗಳನ್ನು ಒಳಗೊಂಡಂತೆ ಬಜೆಟ್ ತಯಾರಿಸಲಾಗುತ್ತದೆ. ಬಜೆಟ್ ಸಂಬಂಧಿತ ಪ್ರಕ್ರಿಯೆಗಳಾದ ಅಂದಾಜು, ನಿರ್ಣಯ, ನಿಧಿಗಳು/ಅನುದಾನಗಳ ವಿತರಣೆ, ಉಸ್ತುವಾರಿ, ಆಡಿಟ್ ಇತ್ಯಾದಿ ವಿಷಯಗಳ ಕುರಿತು ಮಾಹಿತಿ ನೀಡಿದಲ್ಲದೆ, ಪದವಿ ನಂತರ ಮುಂದೇನು? ಎನ್ನುವ ಕುರಿತು ವಿವರಿಸಿದರು.

    ಕಲಾ ಮತ್ತು ವಾಣಿಜ್ಯ ವಿಭಾಗದಲ್ಲಿ ಪದವಿ ಪಡೆದವರಿಗೂ ಹಲವು ಕ್ಷೇತ್ರಗಳಲ್ಲಿ ಅವಕಾಶಗಳಿವೆ. ಬಿಎ ಮತ್ತು ಬಿಕಾಂ ಪದವಿ ನಂತರ ಯಾವೆಲ್ಲ ಕೋರ್ಸ್ ಮಾಡಿದ್ರೆ ಏನೆಲ್ಲಾ ಕೆರೆಯರ್ ಆಯ್ಕೆಗಳಿವೆ ಎಂಬುದರ ಬಗ್ಗೆ ತಿಳಿಯಬೇಕು ಎಂದರು.

    ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಜಿ.ಎಲ್.ಭಾಸ್ಕರ್ ಮಾತನಾಡಿ, ಬಜೆಟ್ ಒಂದು ಲೆಕ್ಕಾಚಾರದ ಯೋಜನೆ. ಕಂಪನಿ, ಸರ್ಕಾರ, ಕುಟುಂಬ ಮತ್ತು ಇತರ ಸಂಸ್ಥೆಗಳು ಅಳೆಯಬಹುದಾದ ಯೋಜನೆಗಳನ್ನು ವ್ಯಕ್ತಪಡಿಸಲು ಬಜೆಟ್ ಅನಿವಾರ್ಯ ಎಂದು ಹೇಳಿದರು.

    ಉದ್ಯೋಗ ಭರವಸೆ ಕೋಶ ಸಂಚಾಲಕ ಡಾ. ಸುನೀಲ್ ಕುಮಾರ್, ಐ.ಕ್ಯೂ ಎ.ಸಿ ಸಂಚಾಲಕ ಸುಬ್ರಮಣಿ, ಡಾ.ಹರೀಶ್‌ಕುಮಾರ್, ಡಾ. ರಾಜೇಶ್ ಖನ್ನಾ, ಹರೀಶ್, ಮಂಜುನಾಥ, ರಾಘವೇಂದ್ರ ಭಜಂತ್ರಿ, ಗಂಗಾ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts