More

    ಕೇಂದ್ರ ಬಜೆಟ್​ 2020: ಸಣ್ಣ ಮತ್ತು ಮಧ್ಯಮ ಉದ್ಯಮಿಗಳಿಗೆ ಅಧೀನ ಸಾಲ ನೀಡಲು ಹೊಸ ಯೋಜನೆ

    ನವದೆಹಲಿ: ಸಣ್ಣ, ಅತಿ ಸಣ್ಣ ಮತ್ತು ಮಧ್ಯಮ ಉದ್ಯಮಿಗಳಿಗೆ ಅಧೀನ ಸಾಲ ನೀಡುವುದಕ್ಕೆ ನೂತನ ಯೋಜನೆಯೊಂದನ್ನು ತಯಾರಿಸುವುದಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಬಜೆಟ್​ ಮಂಡನೆ ವೇಳೆಯಲ್ಲಿ ತಿಳಿಸಿದ್ದಾರೆ.

    ಸಣ್ಣ ಮತ್ತು ಮಧ್ಯಮ ಉದ್ಯಮಿಗಳಿಗೆ ಸಾಲ ಮರುರಚನೆ ಮಾಡಲು ಮಾರ್ಚ್​ 31, 2021ರ ತನಕ ಕಾಲಾವಕಾಶ ಮಾಡಬೇಕು ಎಂದು ಹಣಕಾಸು ಸಚಿವೆ ಆರ್​ಬಿಐಗೆ ನಿರ್ದೇಶನ ನೀಡಿದ್ದಾರೆ. ಕಳೆದ ವರ್ಷ 5 ಲಕ್ಷಕ್ಕೂ ಹೆಚ್ಚು ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಸಾಲ ಮರುರಚನೆ ಮಾಡಲು ಆರ್​ಬಿಐ ಅವಕಾಶ ಮಾಡಿಕೊಟ್ಟಿದ್ದು 2020ರ ಮಾರ್ಚ್​ 31ರ ತನಕ ಕಾಲಾವಕಾಶ ಕೊಟ್ಟಿತ್ತು. ಇದೀಗ ಅದರ ಕಾಲಾವಧಿಯನ್ನು ಒಂದು ವರ್ಷಗಳ ಕಾಲ ಹೆಚ್ಚಳ ಮಾಡಲಾಗಿದೆ.

    ಎಮ್​ಎಸ್​ಎಮ್​ಇಗಳಿಗೆ ಬ್ಯಾಂಕಿಂಗ್​ ರಹಿತ ಹಣಕಾಸು ಕಂಪನಿಗಳು (ಎನ್​ಬಿಎಫ್​ಸಿ) ನೀಡುವ ಇನ್ವಾಯ್ಸ್​ ಹಣಕಾಸನ್ನು ವಿಸ್ತರಿಸುವ ಸಲುವಾಗಿ ಫ್ಯಾಕ್ಟರ್​ ರೆಗ್ಯುಲೇಷನ್​ ಆ್ಯಕ್ಟ್​ 2011ಕ್ಕೆ ಅಗತ್ಯ ತಿದ್ದುಪಡಿಗಳನ್ನು ಮಾಡಲಾಗುವುದು. ಈ ಮೂಲಕ ಆರ್ಥಿಕ ಸುಸ್ಥಿರತೆಯನ್ನು ಹೆಚ್ಚಿಸಲಾಗುವುದು.

    ಎಮ್​ಎಸ್​ಎಮ್​ಇಗಳಲ್ಲಿ ಕಾರ್ಯವಾಹಿ ಬಂಡವಾಳ ಅತಿ ದೊಡ್ಡ ಸಮಸ್ಯೆಯಾಗಿದೆ. ಅದಕ್ಕಾಗಿ ಅವುಗಳಿಗೆ ಅಧೀನ ಸಾಲವನ್ನು ಒದಗಿಸುವ ಯೋಜನೆಯನ್ನು ಪರಿಚಯಿಸಲಾಗುವುದು. ಉದ್ಯಮಿಗಳಿಗೆ ನೀಡಲಾಗುವ ಈ ಸಾಲವನ್ನು ಅರೆ ಷೇರು ಎಂದು ಪರಿಗಣಿಸಲಾಗುವುದು ಮತ್ತು ಕ್ರೆಡಿಟ್​ ಗ್ಯಾರಂಟಿ ಟ್ರಸ್ಟ್​ಗಳಿಂದ ಗ್ಯಾರಂಟಿ ನೀಡಲಾಗುವುದು.

    ಎಮ್​ಎಸ್​ಎಮ್​ಇ ಉದ್ಯಮಿಗಳಲ್ಲಿ ವಿಳಂಬಿತ ಸಾಲದ ಸಮಸ್ಯೆಯನ್ನು ಪರಿಹರಿಸುವ ಸಲುವಾಗಿ ಅಪ್ಲಿಕೇಶನ್​ ಆಧಾರಿತ ಇನ್ವಾಯ್ಸ್​ ಸಾಲವನ್ನು ನೀಡುವುದಾಗಿ ಹಣಕಾಸು ಸಚಿವೆ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts