More

    ಜಿಲ್ಲಾಡಳಿತ-ಸಬ್ ರಿಜಿಸ್ಟ್ರಾರ್‌ಗಳ ಶೀತಲ ಸಮರ; ಅಧಿಕಾರ ವ್ಯಾಪ್ತಿ ಮೀರಿ ಬಳ್ಳಾರಿ ಡಿಸಿಯಿಂದ ಎಸ್‌ಆರ್ ಅಮಾನತು

    ಬೆಂಗಳೂರು: ರಾಜ್ಯ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಹಾಗೂ ಜಿಲ್ಲಾಡಳಿತದ ನಡುವೆ ಶೀತಲ ಸಮರ ಶುರುವಾಗಿದೆ. ರೆವಿನ್ಯೂ ಬಡಾವಣೆಗಳ ಕಡಿವಾಣಕ್ಕೆ ಸರ್ಕಾರ ಜಿಲ್ಲಾಧಿಕಾರಿಗೆ ಅಧಿಕಾರ ನೀಡಿದೆ. ಆದರೆ, ಅಕ್ರಮ ಲೇಔಟ್ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿದ ಜಿಲ್ಲಾಡಳಿತ ರೆವಿನ್ಯೂ ಸೈಟ್‌ಗಳ ನೋಂದಣಿ ಆರೋಪ ಮೇಲೆ ವ್ಯಾಪ್ತಿ ಮೀರಿ ಸಬ್ ರಿಜಿಸ್ಟ್ರಾರ್ (ಎಸ್‌ಆರ್) ಅಮಾನತು ಮಾಡಿದ್ದು, ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಅಧಿಕಾರಿಗಳ ಆಕ್ರೋಶಕ್ಕೆ ಕಾರಣವಾಗಿದೆ.

    ಜ.30ರಂದು ಬಳ್ಳಾರಿ ಸಬ್ ರಿಜಿಸ್ಟ್ರಾರ್ ಆನಂದರಾವ್ ಬದನೆಕಾಯಿ ಅವರನ್ನು ಅಮಾನತು ಮಾಡಿ ಬಳ್ಳಾರಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದರು. ಸರ್ಕಾರ ನಿಯಮಾವಳಿ ಮತ್ತು ಸುತ್ತೋಲೆಗಳ ಉಲ್ಲಂಸಿ ನೋಂದಣಿ ಮಾಡಿ ಸರ್ಕಾರದ ಬೊಕ್ಕಸಕ್ಕೆ ಆರ್ಥಿಕ ನಷ್ಟ ಉಂಟು ಮಾಡಿದ್ದಾರೆ. ಕರ್ನಾಟಕ ನಾಗರೀಕ ಸವಾ ನಿಯಮಗಳು 1957ರ ನಿಯಮ ಅನ್ವಯ ಅಮಾನತು ಮಾಡಲಾಗಿದೆ ಎಂದು ಬಳ್ಳಾರಿ ಜಿಲ್ಲಾಧಿಕಾರಿ ಆದೇಶದಲ್ಲಿ ಉಲ್ಲೇಖಿಸಿದ್ದಾರೆ.

    ಆದರೆ, ಇದೀಗ ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ ಜಿಲ್ಲಾಧಿಕಾರಿ ನಡೆ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಸರ್ಕಾರದ ಮತ್ತು ಜಿಲ್ಲಾಡಳಿತದ ಸುತ್ತೋಲೆಗಳನ್ನು ಉಲ್ಲಂಘನೆ ಮಾಡಿದ್ದರೆ ಅದರ ಬಗ್ಗೆ ಜಿಲ್ಲಾ ನೋಂದಣಾಧಿಕಾರಿ (ಡಿಆರ್) ಕಡೆಯಿಂದ ವರದಿ ಪಡೆಯಲು ಅಧಿಕಾರವಿತ್ತು.

    ತಪ್ಪು ಕಂಡು ಬಂದಿದ್ದರೆ ಸಬ್‌ರಿಜಿಸ್ಟ್ರಾರ್‌ರನ್ನು ಅಮಾನತು ಮಾಡುವಂತೆ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಕಮಿಷನರ್‌ಗೆ ಶಿಫಾರಸ್ಸು ಮಾಡಬಹುದಾಗಿತ್ತು. ಜತೆಗೆ ಅಮಾನತಿಗೆ ಒತ್ತಾಯ ಮಾಡಲು ಅವಕಾಶವಿತ್ತು. ಬೇರೊಂದು ಇಲಾಖೆ ಅಧಿಕಾರಿ ವ್ಯಾಪ್ತಿ ಮೀರಿ ಮತ್ತೊಂದು ಇಲಾಖೆಯ ಅಧಿಕಾರಿಯನ್ನು ಅಮಾನತು ಮಾಡಿರುವುದು ಸರಿಯಲ್ಲ.

    ಕೃಷಿ ಭೂಮಿಯಲ್ಲಿ ರೆವಿನ್ಯೂ ಲೇಔಟ್ ಮಾಡುವರ ವಿರುದ್ಧ ಎಫ್​ಐಆರ್ ದಾಖಲು ಮಾಡಿ ತೆರವು ಮಾಡಬೇಕೆಂದು ಸರ್ಕಾರ ಜಿಲ್ಲಾಧಿಕಾರಿಗೆ ಸೂಚನೆ ನೀಡಿದೆ. ರೆವಿನ್ಯೂ ಲೇಔಟ್ ಮಾಡುವ ರಿಯಲ್ ಎಸ್ಟೇಟ್ ಉದ್ಯಮಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುತ್ತಿಲ್ಲ. ಬದಲಿಗೆ ಬೇರೆ ಇಲಾಖೆ ಮೇಲೆ ಅಧಿಕಾರ ಚಲಾಯಿಸುತ್ತಿದ್ದಾರೆ ಎಂದು ನೋಂದಣಿ ಮತ್ತು ಮುದ್ರಾಂಕ ಇಲಾಖೆ ಅಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಕೃಷಿ ಜಮೀನಿನಲ್ಲಿ ಲೇಔಟ್: ಬಳ್ಳಾರಿಯಲ್ಲಿ ಭೂಪರಿವರ್ತನೆ ಮಾಡದೆ ಕೃಷಿ ಭೂಮಿಯಲ್ಲಿ ನಿರ್ಮಾಣವಾಗಿರುವ ರೆವಿನ್ಯೂ ಲೇಔಟ್ ಮಾಡಿ ಸೈಟ್‌ಗಳ ನೋಂದಣಿ ಕ್ರಯ ಪತ್ರದ ಬದಲಾಗಿ ಹಕ್ಕು ಬಿಡುಗಡೆ ಪತ್ರಗಳನ್ನು ಸಬ್ ರಿಜಿಸ್ಟ್ರಾರ್ ಆನಂದರಾವ್ ಬದನೆಕಾಯಿ ನೋಂದಣಿ ಮಾಡುತ್ತಿದ್ದರು. ಈ ಬಗ್ಗೆ ಜಿಲ್ಲಾಧಿಕಾರಿ ನೋಟಿಸ್ ಕೊಟ್ಟು ನಿಲ್ಲಿಸುವಂತೆ ಮತ್ತು ಉತ್ತರ ನೀಡುವಂತೆ ಸೂಚನೆ ನೀಡಿದ್ದರು. ಆದರೆ, ಇದ್ಯಾವುದಕ್ಕೂ ಉತ್ತರ ನೀಡದೆ ಮತ್ತು ನೋಂದಣಿ ಸಹ ಮುಂದುವರಿಸಿದ್ದರು. ಗಂಭೀರವಾಗಿ ಪರಿಗಣಿಸಿದ ಬಳ್ಳಾರಿ ಜಿಲ್ಲಾಧಿಕಾರಿ, ಸಬ್ ರಿಜಿಸ್ಟ್ರಾರ್‌ರನ್ನು ಅಮಾನತು ಮಾಡಿದ್ದಾರೆ.

    ನೈಜತೆ ಪರೀಕ್ಷಿಸುವ ಅಧಿಕಾರವಿಲ್ಲ: ಉಪ ನೋಂದಣಾಧಿಕಾರಿಗಳು ಕರ್ನಾಟಕ ನೋಂದಣಿ ನಿಯಮ 1965ರ ಅನ್ವಯ ಅಧಿಕಾರ ಚಲಾಯಿಸುತ್ತಾರೆ. ಪಕ್ಷಕಕಾರರು ಹಾಜರುಪಡಿಸುವ ಆಸ್ತಿಗೆ ಸರ್ಕಾರದ ಮಾರ್ಗಸೂಚಿ ದರದ ಆಧಾರದ ಮೇಲೆ ನೋಂದಣಿ ಮತ್ತು ಮುದ್ರಾಂಕ ಶುಲ್ಕ ಪಡೆದು ನೋಂದಣಿ ಮಾಡುವುದು ಮಾತ್ರ. ನೋಂದಣಿ ನಿಯಮ 1965ರ ನಿಯಮ 73ರಡಿ ದಸ್ತಾವೇಜಿನ ಸಿಂಧುತ್ವವನ್ನು ಪ್ರಶ್ನಿಸುವ ಅಧಿಕಾರ ಸಬ್ ರಿಜಿಸ್ಟ್ರಾರ್‌ಗೆ ಇಲ್ಲ. ಸ್ವತ್ತಿನ ಮಾಲೀಕಕತ್ವವನ್ನು ಸಹ ಪ್ರಶ್ನಿಸುವಂತಿಲ್ಲ. ಭಾರತೀಯ ನೋಂದಣಿ ಕಾಯ್ದೆ 1908ರಲ್ಲಿ ಕಲಂ 82ರಲ್ಲಿ ಯಾರಾದರೂ ತಪ್ಪು ಮಾಹಿತಿ, ಸುಳ್ಳು ದಾಖಲೆಗಳನ್ನು ಹಾಜರುಪಡಿಸಿದಾಗ ಅದರ ನೈಜ ವ್ಯಕ್ತಿಯ ಬದಲಾಗಿ ಬೇರೆ ವ್ಯಕ್ತಿಯು ಎಕ್ಸಿಕ್ಯೂಟ್ ಮಾಡಿದ್ದೇ ಆದರೆ ಸಾಕ್ಷಿಗಳು ಮತ್ತು ಪಕ್ಷಕಕಾರರು ಹೊಣೆ. ಬರೆದುಕೊಡುವವರು ಪತ್ರದಲ್ಲಿ ನೀಡುವ ಮಾಹಿತಿ ಮತ್ತು ಸ್ವತ್ತಿನ ವಿವರವನ್ನು ಪ್ರಾಮಾಣಿಕವಾಗಿ ನೀಡುವುದು ಅವರ ಆದ್ಯಕರ್ತವ್ಯ ಎಂದು ಕಾಯ್ದೆಯಲ್ಲಿ ಉಲ್ಲೇಖಿಸಲಾಗಿದೆ.

    ಕಾಯ್ದೆಗೆ ತಿದ್ದುಪಡಿ ಅಗತ್ಯ: ಕರ್ನಾಟಕ ನೋಂದಣಿ ನಿಯಮ 1965ರ ಕಾಯ್ದೆಗೆ ತಿದ್ದುಪಡಿ ತರಬೇಕೆಂದು ನೋಂದಣಿ ಮತ್ತು ಮುದ್ರಾಂಕ ಇಲಾಖೆ ಅಧಿಕಾರಿಗಳು ಒತ್ತಾಯಿಸಿದ್ದಾರೆ. ದಾಖಲೆಗಳ ನೈಜತೆ ಪರಿಶೀಲನೆ ನಡೆಸುವ ಅಧಿಕಾರ ಸಬ್ ರಿಜಿಸ್ಟ್ರಾರ್‌ಗಳಿಗೆ ನೀಡಬೇಕು. ಅದಕ್ಕಾಗಿ ಕಾಯ್ದೆ ತಿದ್ದುಪಡಿ ತಂದರೇ ಪಕ್ಷಕಾರರನ್ನು ಪ್ರಶ್ನಿಸುವ ಅಧಿಕಾರ ಕೊಟ್ಟರೇ ಕಾನೂನು ಉಲ್ಲಂಘನೆ ಮಾಡಿದಾಗ ಶಿಕ್ಷೆ ಸಹ ಅನುಭವಿಸುತ್ತೆವೆ ಎನ್ನುತ್ತಿದ್ದಾರೆ. ಇತ್ತೀಚೆಗೆ ಬಿಬಿಎಂಪಿಯ ನಕಲಿ ಖಾತೆಗಳನ್ನು ಪರಿಶೀಲನೆ ನಡೆಸದೆ ರೆವಿನ್ಯೂ ಸೈಟ್ ನೋಂದಣಿ ಮಾಡಿದ ಆರೋಪದ ಮೇಲೆ ಯಲಹಂಕ ಸಬ್ ರಿಜಿಸ್ಟ್ರಾರ್ ನಜೀರ್ ಅಹಮದ್ ನದ್ಫಾ ಮತ್ತು ಜಯಪ್ರಕಾಶ್‌ನನ್ನು ಅಮಾನತು ಮಾಡಲಾಗಿತ್ತು. ಆದರೆ, ಹೈಕೋರ್ಟ್‌ನಲ್ಲಿ ದಾಖಲೆಗಳ ನೈಜತೆ ಪರಿಶೀಲನೆ ನಡೆಸುವ ಅಧಿಕಾರ ಸಬ್ ರಿಜಿಸ್ಟ್ರಾರ್‌ಗೆ ಇಲ್ಲವೆಂದು ಸರ್ಕಾರದ ಅಮಾನತು ಆದೇಶವನ್ನು ರದ್ದು ಮಾಡಿ ಕಾಯ್ದೆಗೆ ತಿದ್ದುಪಡಿ ತರುವಂತೆ ಸೂಚನೆ ನೀಡಿತ್ತು.

    ಗಂಡ ಮನೆ ಬಿಟ್ಟು ಹೋಗು ಎಂದಿದ್ದಕ್ಕೆ ಪ್ರಾಣವನ್ನೇ ಬಿಟ್ಟ ಹೆಂಡ್ತಿ; ಮಗ ಪ್ರಯೋಗಕ್ಕೆ ತಂದಿದ್ದ ಕೆಮಿಕಲ್ ಕುಡಿದು ಸತ್ತ ತಾಯಿ

    ಜ. 30ರಿಂದ ಮೂರು ವಾರ ಕಾಲ ಮಾಂಸ ಮಾರಾಟ ನಿಷೇಧ, ಮಾಂಸಾಹಾರಿ ಹೋಟೆಲ್​ಗಳೂ ಕ್ಲೋಸ್; ಎಲ್ಲಿ, ಯಾಕೆ?

    ಚಿಕಿತ್ಸೆಗೆಂದು ದಾಖಲಾದವಳ ಎರಡೂ ಕಿಡ್ನಿ ಕದ್ರು; ‘ನೀನಿನ್ನು ಇದ್ರೂ ಅಷ್ಟೇ, ಸತ್ರೂ ಅಷ್ಟೇ’ ಅಂತ ಪತ್ನಿ 3 ಮಕ್ಕಳ ಬಿಟ್ಟುಹೋದ ಪತಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts