More

    ಸಬ್​ ರಿಜಿಸ್ಟ್ರಾರ್​ ಕಚೇರಿ ಇನ್ಮುಂದೆ ಮತ್ತಷ್ಟು ‘ಓಪನ್’; ಮಹಿಳಾ ಸಿಬ್ಬಂದಿಗೆ ಸಂಕಷ್ಟ!?

    ಬೆಂಗಳೂರು: ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಕಚೇರಿಯ ಕರ್ತವ್ಯದ ಅವಧಿಯನ್ನು ಸರ್ಕಾರ ಮತ್ತಷ್ಟು ವಿಸ್ತರಿಸಿದೆ. ಇಂದು ಸರ್ಕಾರ ಎರಡನೇ ಸಲ ಈ ವಿಸ್ತರಣೆಯನ್ನು ಮಾಡಿದ್ದು, ಸಾರ್ವಜನಿಕರ ಮುಖದಲ್ಲೇನೂ ನಗು ಮೂಡಿಸಿದೆ. ಆದರೆ ಉದ್ಯೋಗಿಗಳಲ್ಲಿ ಅಸಮಾಧಾನ ಮೂಡಿಸಿದೆ ಎನ್ನಲಾಗಿದೆ.

    ಮೊದಲು ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಕಚೇರಿ ಅವಧಿ ಬೆಳಗ್ಗೆ 10ರಿಂದ ಸಂಜೆ 5.30ರ ವರೆಗಿತ್ತು. ಇದನ್ನು ಕೆಲವು ದಿನಗಳ ಹಿಂದೆ ವಿಸ್ತರಿಸಿದ್ದ ಇಲಾಖೆ, ಕಚೇರಿಯ ಕೆಲಸದ ಅವಧಿಯನ್ನು ಬೆಳಗ್ಗೆ 9ರಿಂದ ರಾತ್ರಿ 7ರ ವರೆಗೆ ಹಿಗ್ಗಿಸಿತ್ತು. ಆಗಲೇ ಕೆಲವು ಸಿಬ್ಬಂದಿ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು.

    ಇದೀಗ ಇಂದು ಮತ್ತೊಂದು ಆದೇಶ ಹೊರಡಿಸಿರುವ ಸರ್ಕಾರ, ಮೊದಲು ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಕಚೇರಿ ಅವಧಿಯನ್ನು ಬೆಳಗ್ಗೆ 8ರಿಂದ ರಾತ್ರಿ 8ರವರೆಗೂ ಹಿಗ್ಗಿಸಿದೆ. ಇದು ಕಚೇರಿಯಲ್ಲಿ ಕೆಲಸ ಮಾಡುವ ಮಹಿಳಾ ಸಿಬ್ಬಂದಿಗೆ ಸಂಕಷ್ಟ ತರಲಿದೆ ಎನ್ನಲಾಗುತ್ತಿದ್ದು, ಕೆಲವರು ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಪೇದೆಯನ್ನು ನಂಬಿ ಗಂಡನ ಬಿಟ್ಟ ಮಹಿಳೆಯ ಬಾಳೇ ಈಗ ಗೋಳು: ಕಾನ್​ಸ್ಟೆಬಲ್​ ಕಿತಾಪತಿ ಒಂದೆರಡಲ್ಲ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts