More

    ಕೋವಿಡ್​ಗೆ ಸಬ್​ ರಿಜಿಸ್ಟ್ರಾರ್ ಬಲಿ, ಮಗನ ಸಾವಿನ ಸುದ್ದಿ ಕೇಳುತ್ತಿದ್ದಂತೆ ಪ್ರಾಣಬಿಟ್ಟ ತಾಯಿ

    ರಾಯಚೂರು: ಕರೊನಾ ಸೋಂಕಿನ ಅಟ್ಟಹಾಸ ಮಿತಿಮೀರಿದ್ದು, ಸಾವು-ನೋವಿನ ಪ್ರಕರಣಗಳು ದಿನೇದಿನೆ ಹೆಚ್ಚಾಗುತ್ತಲೇ ಇವೆ. ಇದೀಗ ಕೋವಿಡ್​ಗೆ ಮಾನ್ವಿಯ ಸಬ್ ರಿಜಿಸ್ಟ್ರಾರ್ ಬಲಿಯಾಗಿದ್ದು, ಈ ಸುದ್ದಿ ಕೇಳಿದ ಮೃತರ ತಾಯಿಯೂ ಆಘಾತಕ್ಕೊಳಗಾಗಿ ಪ್ರಾಣ ಬಿಟ್ಟಿದ್ದಾರೆ.

    45 ವರ್ಷದ ಸಬ್ ರಿಜಿಸ್ಟ್ರಾರ್​ಗೆ ಜು.24ರಂದು ಕೋವಿಡ್ ದೃಢಪಟ್ಟಿತ್ತು. ಕೂಡಲೇ ಅವರನ್ನು ರಾಯಚೂರಿನ ಓಪೆಕ್ ಆಸ್ಪತ್ರೆಗೆ ಸೇರಿಸಲಾಗಿತ್ತಾದರೂ ಉಸಿರಾಟದ ಸಮಸ್ಯೆ ತೀವ್ರವಾಗಿದ್ದರಿಂದ ಹೈದರಾಬಾದ್​ನ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿತ್ತು. ನಿನ್ನೆ(ಶುಕ್ರವಾರ) ರಾತ್ರಿ ಚಿಕಿತ್ಸೆ ಫಲಿಸದೆ ಸಬ್​ರಿಜಿಸ್ಟ್ರಾರ್ ಮೃತಪಟ್ಟಿದ್ದಾರೆ.

    ಇದನ್ನೂ ಓದಿರಿ ಕರೊನಾ ಸೋಂಕಿತನ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ?

    ಮಗನ ಸಾವಿನ ಸುದ್ದಿ ಕೇಳಿದ ಸಬ್​ ರಿಜಿಸ್ಟ್ರಾರ್ ತಾಯಿಗೆ ಆಘಾತವಾಗಿದ್ದು, ಅವರೂ ಅಸುನೀಗಿದ್ದಾರೆ. ಮತ್ತೊಂದೆಡೆ ಮೃತ ಸಬ್ ರಿಜಿಸ್ಟ್ರಾರ್​ರ ಅಣ್ಣನಿಗೂ ಕರೊನಾ ಪಾಸಿಟಿವ್ ದೃಢಪಟ್ಟಿದ್ದು, ಹೈದ್ರಾಬಾದ್​ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಿಗೆ ತಾಯಿ ಮತ್ತು ಸಹೋದರ ಮೃತಪಟ್ಟರೂ ಅವರ ಅಂತಿಮ ದರ್ಶನ ಮಾಡುವ ಭಾಗ್ಯ ಸಿಗಲಿಲ್ಲ.

    ತಿಥಿ ಕಾರ್ಯ ಮುಗಿದ ನಂತರ ಬಂತು ಶವ, ಕೋವಿಡ್​ ಆಸ್ಪತ್ರೆಯ ಮಹಾ ಯಡವಟ್ಟು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts