More

    VIDEO| ಹುಲಿಗೆ ನೀರು ಕುಡಿಸಿದ ಜಿಂಕೆ!

    ಪಶ್ಚಿಮ ಬಂಗಾಳ: ಪ್ರಕೃತಿಯ ಅತ್ಯಂತ ಸುಂದರವಾದ ಸೃಷ್ಟಿಗಳಲ್ಲಿ ರಾಯಲ್​ ಬೆಂಗಾಲ್​ ಟೈಗರ್​ ಕೂಡ ಪ್ರಮುಖ ಸ್ಥಾನ ಪಡೆದಿದೆ.

    ಪಶ್ಚಿಮ ಬಂಗಾಳ ಸುಂದರ್​ ಬನ್ಸ್​ ಕಾಡು ಹುಲಿಗಳ ಮನೆ ಎಂದು ರಾಷ್ಟ್ರದಲ್ಲಿ ಚಿರಪರಿಚಿತವಾಗಿದೆ ಮತ್ತು ಅತಿ ಹೆಚ್ಚು ರಾಯಲ್​ ಬೆಂಗಾಲ್​ ಟೈಗರ್​ ಹೊಂದಿರುವುದು ಇದರ ವಿಶೇಷತೆ.

    ಇದೀಗ ರಾಯಲ್​ ಬೆಂಗಾಲ್​ ಟೈಗರ್​ ಒಂದು ಜಿಂಕೆಯನ್ನು ಬೇಟೆಯಾಡಲು ಮುಂದಾಗಿ ನಂತರ ವಿಫಲಗೊಂಡಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

    ಸದ್ಯ ವೈರಲ್​ ಆಗಿರುವ ವಿಡಿಯೋದಲ್ಲಿ ಹುಲಿಯೊಂದು ಗಿಡಗಳ ಹಿಂದೆ ಅಡಗಿ ಜಿಂಕೆಗಳ ಹಿಂಡು ಮೇಯುತ್ತಿರುವುದನ್ನು ಅತಿ ಸೂಕ್ಷ್ಮವಾಗಿ ಗಮನಿಸುತ್ತದೆ.

    ನಂತರ ಏಕಾಏಕಿ ಜಿಂಕೆಗಳ ಹಿಂಡಿನ ಮೇಲೆ ದಾಳಿ ಮಾಡಿ ನಿಖರವಾಗಿ ಒಂದರ ಹಿಂದೆ ಬೀಳುತ್ತದೆ. ಆದರೆ, ಚುರುಕಾಗಿ ಓಡುವ ಜಿಂಕೆ ನೀರಿಗೆ ಧುಮುಕಿ ಹುಲಿಯಿಂದ ತಪ್ಪಿಸಿಕೊಂಡು ತನ್ನ ಪ್ರಾಣವನ್ನು ಉಳಿಸಿಕೊಳ್ಳುತ್ತದೆ.

    ಅನೂಪ್​ ಕಯಾಲ್​ ಎಂಬುವವರು ಈ ವಿಡಿಯೋವನ್ನು ಚಿತ್ರೀಕರಿಸಿದ್ದು ಜಿಂಕೆ ಬೇಟೆಯಾಡಲು ಹೋಗಿ ವಿಫಲವಾಗಿದ್ದನ್ನು ಸ್ಪಷ್ಟವಾಗಿ ಕಾಣಬಹುದಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts