More

    ಹೈನುಗಾರಿಕೆ ಗುಣಮಟ್ಟ ಉತ್ತಮಗೊಳ್ಳುವ ಭರವಸೆ

    ವಿಜಯವಾಣಿ ಸುದ್ದಿಜಾಲ ಹೊಸಕೋಟೆ
    ಹೈನುಗಾರಿಕೆ ಮತ್ತಷ್ಟು ಅಭಿವೃದ್ಧಿಗೊಳಿಸಿ, ರೈತರನ್ನು ಉತ್ತೇಜಿಸಲು ದೇಶದಲ್ಲಿಯೇ ಹೈನುಗಾರಿಕೆಗೆ ಹೆಸರಾದ ಗುಜರಾತ್‌ಗೆ ಅಧ್ಯಯನ ಪ್ರವಾಸ ಆಯೋಜಿಸಲಾಗಿದ್ದು ಇದರಿಂದ ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಬಮುಲ್ ನಿರ್ದೇಶಕ ಹುಲ್ಲೂರು ಸಿ.ಮಂಜುನಾಥ್ ತಿಳಿಸಿದರು.
    ಬೆಂಗಳೂರು ಸಹಕಾರ ಹಾಲು ಒಕ್ಕೂಟದ ಹೊಸಕೋಟೆ ಡೇರಿಯ ಶಿಬಿರ ಕಚೇರಿಯಿಂದ ತಾಲೂಕಿನ 32 ಮಂದಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಮುಖ್ಯ ನಿರ್ವಾಹಕರ ತಂಡವನ್ನು ಗುಜರಾತ್‌ನ ಮೆಹಸಾನ್ ಅಧ್ಯಯನ ಪ್ರವಾಸಕ್ಕೆ ಬೀಳ್ಕೊಟ್ಟು ಅವರು ಮಾತನಾಡಿದರು.
    ಗುಜರಾತ್ ಹೈನುಗಾರಿಕೆಯಲ್ಲಿ ದೇಶದಲ್ಲಿಯೇ ನಂ.1 ಅಭಿವೃದ್ಧಿ ಸಾಧಿಸಿದೆ. ಅಲ್ಲಿ ಹೈನುಗಾರಿಕೆ ಅಭಿವೃದ್ಧಿಗೆ ಕೈಗೊಂಡಿರುವ ಕ್ರಮಗಳನ್ನು ಅರಿತುಕೊಳ್ಳಲು ಅಧ್ಯಯನಕ್ಕೆ ಕಳುಹಿಸಿ ಕೊಡಲಾಗಿದೆ. ಜಾನುವಾರುಗಳ ನಿರ್ವಹಣೆ ಹಾಗೂ ಕಾಯಿಲೆಗಳು ಬಾರದಂತೆ ಏನೇನು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುತ್ತಾರೆ. ಮೇವು ನಿರ್ವಹಣೆ, ಹಾಲು ಇಳುವರಿ ಹೆಚ್ಚಿಸುವ ಬಗ್ಗೆ ಖುದ್ದು ಪರಿಶೀಲನೆ ಮಾಡಿ, ಅಧ್ಯಯನ ನಡೆಸಿ, ನುರಿತ ತಜ್ಞರಿಂದ ಹೈನುಗಾರಿಕೆ ಬಗ್ಗೆ ತರಬೇತಿ ಪಡೆದುಕೊಂಡು ಬರಲು ಕಳುಹಿಸಿ ಕೊಡಲಾಗುತ್ತಿದೆ. ಇದರಿಂದ ತಾಲೂಕಿನಲ್ಲಿ ಹೈನುಗಾರಿಕೆಯ ಗುಣಮಟ್ಟದ ಜತೆಗೆ ಹೆಚ್ಚುವರಿ ಹಾಲು ಪಡೆಯುವ ನಿರೀಕ್ಷೆ ಇದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts