More

    ವಾಸನೆಯಿಂದಲೂ ಕಂಡುಹಿಡಿಯಬಹುದು ಕರೊನಾ: ಅದು ಹೇಗೆ?

    ನ್ಯೂಯಾರ್ಕ್​: ಕರೊನಾ ವೈರಸ್​ಗೂ, ವಾಸನೆಗೂ ನೇರ ಸಂಬಂಧವಿದೆಯೇ? ಹೌದು ಎನ್ನುತ್ತಿದೆ ಸಂಶೋಧನೆ. ವಾಸನೆಯ ಶಕ್ತಿ ಕುಂದುತ್ತ ಬಂದಿತೆಂದರೆ, ಅದು ಕರೊನಾ ವೈರಸ್​ ಸೋಂಕಿನ ಲಕ್ಷಣವೂ ಆಗಿರಬಹುದು ಎಂದು ಅಮೆರಿಕದ ಸಿನ್ಸಿನಾಟಿ ವಿಶ್ವವಿದ್ಯಾಲಯ ಹೇಳಿದೆ.

    ಕರೊನಾ ವೈರಸ್​ಗೆ ಸೋಂಕಿಗೆ ಒಳಗಾದ ಬಹುತೇಕ ವ್ಯಕ್ತಿಗಳು, ಸೋಂಕು ತಗುಲಿದ ಮೂರನೆಯ ದಿನದಿಂದಲೇ ವಾಸನಾ ಶಕ್ತಿಯನ್ನು ಕುಂದಿಸಿಕೊಳ್ಳುತ್ತಾರೆ. ಅಂದರೆ ಅವರಿಗೆ ವಾಸನೆ ಗ್ರಹಿಸುವ ಶಕ್ತಿ ಇರುವುದಿಲ್ಲ ಎಂದಿರುವ ಸಂಶೋಧಕರು ಇದಕ್ಕೆ ಸಂಬಂಧಿಸಿದಂತೆ 100ಕ್ಕೂ ಅಧಿಕ ಕರೊನಾ ಸೋಂಕಿತರನ್ನು ಅಧ್ಯಯನಕ್ಕೆ ಒಳಪಡಿಸಿದ್ದಾರೆ. ಅದರಿಂದ ಕಂಡುಕೊಂಡಿರುವ ವರದಿ ಇದು.

    ಇದನ್ನೂ ಓದಿ: ಅಕ್ಷಯ ಕುಮಾರನಿಗಾಗಿ ಟೆರೇಸ್​ ಮೇಲೆ ಕಾದು ಕುಳಿತು ಸುಸ್ತಾದ ಮದುಮಗಳು!

    ಪ್ರತಿ ನೂರು ರೋಗಿಗಳ ಪೈಕಿ 60 ರಿಂದ 62 ರೋಗಿಗಳು ಶಕ್ತಿಯನ್ನು ಕಳೆದುಕೊಂಡಿದ್ದಾರೆ. ವಾಸನೆಯ ಗ್ರಹಿಕೆಯಲ್ಲಿನ ತೊಂದರೆ ಅಥವಾ ನಷ್ಟದ ಸರಾಸರಿ ಅವಧಿ ರೋಗ ತಗುಲಿದ ನಂತರದ 3-4 ದಿನಗಳಾಗಿರಲಿದೆ ಎಂದು ಅಧ್ಯಯನದಲ್ಲಿ ಹೇಳಲಾಗಿದೆ. ಇದನ್ನು Otolaryngology-Head and Neck Surgery ಜರ್ನಲ್​ನಲ್ಲಿ ಪ್ರಕಟಿಸಲಾಗಿದೆ.

    ಸ್ವಿಜರ್ಲೆಂಡ್​ನ ಆರಾವ್‌ ಪ್ರದೇಶದಲ್ಲಿರುವ ಸೋಂಕಿತರನ್ನು ಈ ಪರೀಕ್ಷೆಗೆ ಒಳಪಡಿಸಲಾಗಿತ್ತು. ಅವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದು ಸಂಶೋಧಕ ಸಿನ್ಸಿನಾಟಿ ವಿಶ್ವವಿದ್ಯಾಲಯದ ಅಹ್ಮದ್ ಸೆದಘಾಟ್ ಹೇಳಿದ್ದಾರೆ.

    ಇದನ್ನೂ ಓದಿ: ಮಾತೃ ಹೃದಯಕ್ಕೆ ಸಾಟಿ ಎಲ್ಲಿ? ಮರಿ ಎತ್ತಿಕೊಂಡು ಎಮರ್ಜೆನ್ಸಿ ವಾರ್ಡ್​ನತ್ತ ಓಡಿದ ಬೆಕ್ಕು!.

    ಉಸಿರಾಟದ ತೊಂದರೆ, ಜ್ವರ, ಕೆಮ್ಮು ಇವು ಕರೊನಾ ಸೋಂಕಿನ ಸಾಮಾನ್ಯ ಲಕ್ಷಣಗಳಾಗಿದ್ದರೂ, ಈ ಎಲ್ಲಾ ಲಕ್ಷಣಗಳೂ ಕಾಣಿಸಿಕೊಂಡರೆ ಸೋಂಕೇ ಬಂದಿದೆ ಎಂದು ಹೇಳಲಾಗದು. ಆದರೆ ಕ್ರಮೇಣ ವಾಸನೆಯ ಗ್ರಹಿಕೆಯಲ್ಲಿ ತೊಂದರೆಯಾದರೆ, ಸೋಂಕು ಖಚಿತ ಎಂದು ಅಂದುಕೊಳ್ಳಬೇಕು ಎಂದಿರುವ ಸಂಶೋಧಕರು, ಎಲ್ಲಾ ಸೋಂಕಿತರಲ್ಲಿಯೂ ಇದೆ ರೀತಿ ಆಗಬೇಕೆಂದೇನೂ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts