More

    ರ್‍ಯಾಗಿಂಗ್ ನಿರತ 6 ವಿದ್ಯಾರ್ಥಿಗಳ ಬಂಧನ

    ಮಂಗಳೂರು: ನಗರದ ಖಾಸಗಿ ಕಾಲೇಜೊಂದರ ಕಿರಿಯ ವಿದ್ಯಾರ್ಥಿಗೆ ರ‌್ಯಾಗಿಂಗ್ ಮಾಡಿದ 6 ಮಂದಿ ಹಿರಿಯ ವಿದ್ಯಾರ್ಥಿಗಳನ್ನು ಪಾಂಡೇಶ್ವರ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

    ಅತ್ತಾವರದ ಅಪಾರ್ಟ್‌ಮೆಂಟ್‌ನಲ್ಲಿ ವಾಸವಿದ್ದ ಮ್ಯಾನ್ಯುವಲ್ ಬಾಬು ಎಂಬುವರ ಕೊಠಡಿಗೆ ಏಕಾಏಕಿ ನುಗ್ಗಿ ಅವರ ಮೇಲೆ ಅದೇ ಕಾಲೇಜಿನ ಹಿರಿಯ ವಿದ್ಯಾರ್ಥಿಗಳಾದ ಶ್ರೀಲ(20), ಶಾಹಿದ್ (20), ಅಮ್ಜದ್(20), ಜುರೈಜ್(20), ಹುಸೈನ್(20), ಲಿಮ್ಸ್(20) ಹಲ್ಲೆ ಮಾಡಿದ್ದಾರೆ. ನಾವು ಹಿರಿಯ ವಿದ್ಯಾರ್ಥಿಗಳು ಗೌರವ ಕೊಡಬೇಕು. ನಮ್ಮ ಎದುರಲ್ಲಿ ತಲೆ ಕೆಳಗೆ ಹಾಕಿಕೊಂಡು ಹೋಗಬೇಕು ಎಂದು ರ‌್ಯಾಗಿಂಗ್ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
    ಕಣ್ಣಿನ ಭಾಗಕ್ಕೆ ಗಾಯಗೊಂಡಿದ್ದ ಮ್ಯಾನ್ಯುವಲ್ ಬಾಬು ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಿಡುಗಡೆಗೊಂಡು ಊರಿಗೆ ತೆರಳಿದ್ದಾರೆ. ಪಾಂಡೇಶ್ವರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts