More

    ವಿದ್ಯಾರ್ಥಿಗಳ ನಡೆ ಕೃಷಿಯ ಕಡೆ

    ಕಾರವಾರ: ತಾಲೂಕಿನ ದೇವಳಮಕ್ಕಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಗೆ ಗ್ರಾಮದಲ್ಲಿ ಇಲ್ಲಿನ ಕಡಲ ಸಿರಿ ಯುವಕ ಸಂಘದ ಸದಸ್ಯರು ಭಾನುವಾರ ಗದ್ದೆ ನಾಟಿ ಮಾಡಿದರು.
    ಎಂಎಸ್​ಸಿ, ಎಂಸಿಜೆ ಮುಂತಾದ ಉನ್ನತ ವ್ಯಾಸಂಗದಲ್ಲಿ ತೊಡಗಿದ ತಾಲೂಕಿನ 10 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾನುವಾರ ನಗೆ ಗ್ರಾಮದ ಕೋಮಾರ ಗೌಡರ ಸುಮಾರು 1 ಎಕರೆ ಗದ್ದೆಯನ್ನು ನಾಟಿ ಮಾಡಿ, ಉಳುಮೆಯ ಬಗ್ಗೆ ಪ್ರಾಯೋಗಿಕವಾಗಿ ತಿಳಿದುಕೊಂಡರು. ಇದೇ ಸಂದರ್ಭದಲ್ಲಿ ಗದ್ದೆಯಲ್ಲಿ ಕೃಷಿಕ ಕೋಮಾರ ಗೌಡ ಅವರನ್ನು ಸನ್ಮಾನಿಸಲಾಯಿತು.
    ನಗರೀಕರಣಕ್ಕೆ ಮಾರು ಹೋದ ಇಂದಿನ ಯುವ ಜನಾಂಗ ನಮ್ಮ ನೆಲದ ಗುಣವನ್ನು, ಪರಂಪರೆಯನ್ನು ಮರೆಯುತ್ತಿದೆ. ಕೃಷಿಯಿಂದ ದೂರವಾಗುತ್ತಿದೆ. ಇದರಿಂದ ‘ವಿದ್ಯಾರ್ಥಿಗಳ ನಡೆ ಕೃಷಿಯ ಕಡೆ’ ಎಂಬ ಕಾರಣಡಿಂದ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು ಎಂದು ಕಡಲ ಸಿರಿ ಯುವಕ ಸಂಘದ ಸದಸ್ಯರು ತಿಳಿಸಿದ್ದಾರೆ. ಉಪಾಧ್ಯಕ್ಷ ಅಭಿಷೇಕ ಗೋವಿಂದಾಯ ಕಳಸ, ಪ್ರಧಾನ ಕಾರ್ಯದರ್ಶಿ ಪ್ರಜ್ವಲ್ ಬಾಬುರಾಯ ಶೇಟ್ ಇದ್ದರು.


    ಕಡಲ ಸಿರಿ ಯುವಕ ಸಂಘ ಹಲವು ಸಾಮಾಜಿಕ ಕಾರ್ಯಗಳನ್ನು ಮಾಡಿಕೊಂಡು ಬಂದಿದೆ. ಭಾರತ ಕೃಷಿ ಪ್ರಧಾನ ದೇಶ. ಶಾಲೆ, ಕಾಲೇಜ್ ವಿದ್ಯಾರ್ಥಿಗಳಿಗೆ ಕೃಷಿಯ ಕಷ್ಟ, ಸಾಧ್ಯತೆಗಳ ಅರಿವು ಮೂಡಿಸುವ ಸಲುವಾಗಿ ಗದ್ದೆ ನಾಟಿ ಕಾರ್ಯಕ್ರಮ ಆಯೋಜಿಸಿದ್ದೇವೆ.
    | ಪ್ರಜ್ವಲ ಶೇಟ್ ಕಡಲ ಸಿರಿ ಯುವಕ ಸಂಘದ ಕಾರ್ಯದರ್ಶಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts