More

    ಪ್ರಾದೇಶಿಕ ಭಾಷೆಗಳಲ್ಲೂ ಜೆಇಇ ಬರೆಯಬಹುದು ಇನ್ನು..

    ನವದೆಹಲಿ: ಜಂಟಿ ಪ್ರವೇಶ ಪರೀಕ್ಷೆ (ಜೆಇಇ-ಮೇನ್)ಗಳನ್ನು ಆದಷ್ಟು ಹೆಚ್ಚು ಪ್ರಾದೇಶಿಕ ಭಾಷೆಗಳಲ್ಲಿ ನಡೆಸಲು ಜಂಟಿ ಪ್ರವೇಶ ಮಂಡಳಿ (ಜೆಎಬಿ) ನಿರ್ಧರಿಸಿದ್ದು, ಇದು ಹೊಸ ರಾಷ್ಟ್ರೀಯ ಶಿಕ್ಷಣ ನೀತಿಗೆ ಅನುಗುಣವಾಗಿದೆ ಎಂದು ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಕ್ರಿಯಾಲ್ ಗುರುವಾರ ಹೇಳಿದ್ದಾರೆ.

    ಪರೀಕ್ಷೆಗಳ ಆಧಾರದಲ್ಲಿ ರಾಜ್ಯ ಇಂಜಿನಿಯರಿಂಗ್ ಕಾಲೇಜ್​ಗಳಿಗೆ ಪ್ರವೇಶ ನಿರ್ಧರಿಸುವ ಕಡೆಗಳಲ್ಲಿ ಪ್ರಾದೇಶಿಕ ಭಾಷೆಗಳಲ್ಲೂ ಪರೀಕ್ಷೆ ನಡೆಸಲಾಗುವುದು. ಜೆಇಇ ಮೇನ್ ಆಧಾರದಲ್ಲಿ ವಿದ್ಯಾರ್ಥಿಗಳಿಗೆ ಪ್ರವೇಶ ನೀಡುವ ರಾಜ್ಯಗಳ ರಾಜ್ಯಭಾಷೆಯನ್ನು ಕೂಡ ಇದು ಒಳಗೊಳ್ಳಲಿದೆ ಎಂದು ಅವರು ಹೇಳಿದ್ದಾರೆ.

    ಇದನ್ನೂ ಓದಿ: ಡಾರ್ನಿಯರ್​ ವಿಮಾನ ಚಲಾಯಿಸಲು ಸಿದ್ಧವಾಗಿದೆ ಮೊದಲನೇ ಮಹಿಳಾ ಪೈಲಟ್ ತಂಡ

    ಯಾವುದೇ ರಾಜ್ಯದ ಮೇಲೆ ಯಾವುದೇ ಭಾಷೆಯನ್ನು ಹೇರುವ ಉದ್ದೇಶ ಸರ್ಕಾರಕ್ಕಿಲ್ಲ ಎಂದು ಪೋಕ್ರಿಯಾಲ್ ಸ್ಪಷ್ಟಪಡಿಸಿದ್ದಾರೆ. (ಏಜೆನ್ಸೀಸ್)

    ಪದವಿ ತರಗತಿಗಳನ್ನು ಆರಂಭಿಸೋದು ಯಾವಾಗ?: ನಾಳೆ ಮಹತ್ವದ ಸಭೆ ನಡೆಸಲಿದ್ದಾರೆ ಉನ್ನತ ಶಿಕ್ಷಣ ಸಚಿವರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts