More

    ಬಸ್ ಸೌಕರ್ಯ ಕಲ್ಪಿಸಲು ಆಗ್ರಹಿಸಿ ಕೆಡಿಪಿ ಸಭೆಗೆ ಬಂದ ವಿದ್ಯಾರ್ಥಿಗಳು



    ಹುಬ್ಬಳ್ಳಿ: ತಾಲೂಕಿನ ನಾಗರಹಳ್ಳಿಯಿಂದ ಶಿರಗುಪ್ಪಿಗೆ ಸಾರಿಗೆ ಸೌಕರ್ಯ ಒದಗಿಸುವಂತೆ ಆಗ್ರಹಿಸಲು ನಾಗರಹಳ್ಳಿ ಗ್ರಾಮದ ಶಾಲಾ- ಕಾಲೇಜು ವಿದ್ಯಾರ್ಥಿಗಳು ಗ್ರಾಮದಿಂದ ನೇರವಾಗಿ ತಾಲೂಕು ಮಟ್ಟದ ತ್ರೖೆಮಾಸಿಕ ಕೆಡಿಪಿ ಸಭೆಗೆ ಆಗಮಿಸಿದ ಪ್ರಸಂಗ ಬುಧವಾರ ನಡೆಯಿತು.
    30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇಲ್ಲಿನ ತಾಲೂಕು ಪಂಚಾಯಿತಿ ಸಭಾ ಭವನದಲ್ಲಿ ನಡೆಯುತ್ತಿದ್ದ ಕೆಡಿಪಿ ಸಭೆಗೆ ಆಗಮಿಸಿದ್ದರು. ಕೂಡಲೆ ಬಸ್ ಸೌಕರ್ಯ ಒದಗಿಸುವಂತೆ ಒತ್ತಾಯಿಸಿ, ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರಲ್ಲಿ ಪಟ್ಟು ಹಿಡಿದರು.
    ನಾಗರಹಳ್ಳಿ- ಶಿರಗುಪ್ಪಿ ನಡುವೆ 8 ಕಿ.ಮೀ. ಅಂತರವಿದೆ. ನಾಗರಹಳ್ಳಿಯಿಂದ ನಿತ್ಯ 60ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿರಗುಪ್ಪಿಗೆ ತೆರಳುತ್ತಾರೆ. ಬಸ್ ಸೌಕರ್ಯ ಇಲ್ಲದ ಹಿನ್ನೆಲೆಯಲ್ಲಿ ತೀವ್ರ ಸಂಕಷ್ಟ ಎದುರಾಗಿದೆ. ಇದರಿಂದಾಗಿ ಸದ್ಯ ಭಂಡಿವಾಡ ಕ್ರಾಸ್​ಗೆ ಇಳಿದು, ಬೇರೆ ಬಸ್​ನಲ್ಲಿ ಗ್ರಾಮಕ್ಕೆ ಬರಬೇಕಾಗಿದೆ. ಇದರಿಂದಾಗಿ ನಿತ್ಯ ಮನೆ ಸೇರಲು ರಾತ್ರಿ 8 ಗಂಟೆ ಆಗುತ್ತಿದೆ. ಮಳೆಗಾಲ ಆದ್ದರಿಂದ ಈ ಸಮಸ್ಯೆ ಮತ್ತಷ್ಟು ಹೆಚ್ಚಾಗಿದೆ. ಈ ಮೊದಲು ಬಸ್ ಸೌಕರ್ಯ ಇತ್ತು. ಕರೊನಾ ನಂತರ ಬಂದ್ ಆಗಿದೆ. ಈ ಕುರಿತು ಈಗಾಗಲೇ ತಹಸೀಲ್ದಾರ್ ಸೇರಿದಂತೆ ಹಲವು ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೇವೆ. ಆದರೂ ಪ್ರಯೋಜನವಾಗಿಲ್ಲ. ಇನ್ನಾದರೂ ಸಮಸ್ಯೆ ಬಗೆಹರಿಸಬೇಕು ಎಂದು ವಿದ್ಯಾರ್ಥಿಗಳು, ಗ್ರಾಮಸ್ಥರು ಆಗ್ರಹಿಸಿದರು.
    ಗ್ರಾಮಸ್ಥರಾದ ಅಮೃತಯ್ಯ ಐನಾಪುರಮಠ, ಹನುಮಂತಗೌಡ ನಾಗನಗೌಡ್ರ, ಮಹಾದೇವಗೌಡ ಪಾಟೀಲ, ಶಿವನಗೌಡ ಶಿರಸಂಗಿ, ಮಲ್ಲಿಕಾರ್ಜುನ ಮುದ್ದುನವರ, ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts