ಗ್ವಾಲಿಯರ್: ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಸೋಮವಾರ ಹಾಡಹಗಲೇ ಪೆಟ್ರೋಲ್ ಪಂಪ್ ಬಳಿ ಇಬ್ಬರು ವ್ಯಕ್ತಿಗಳು ಯುವತಿಯನ್ನು ಬೈಕ್ ಮೇಲೆ ಪ್ರಾಣಿಗಳನ್ನು ಎತ್ತಿಹಾಕಿಕೊಂಡು ಹೋಗುವ ರೀತಿಯಲ್ಲಿ ಅಪಹರಿಸಿದ್ದು, ಸಾರ್ವಜನಿಕರು ಬೆಚ್ಚಿಬಿದ್ದಿದ್ದಾರೆ.
ಇದನ್ನೂ ಓದಿ: ಪ್ರಭಾಸ್ ಹೀರೋಯಿನ್ ಜತೆ ಕಟ್ಟಪ್ಪ ಪ್ರೇಮ… ಮತ್ತೊಬ್ಬ ನಾಯಕನ ಎಂಟ್ರಿಯೊಂದಿಗೆ ಸೀನ್ ರಿವರ್ಸ್!
ಇಡೀ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇಬ್ಬರು ವ್ಯಕ್ತಿಗಳು ಆಕೆಯನ್ನು ಹೇಗೆ ಬಲವಂತವಾಗಿ ದ್ವಿಚಕ್ರ ವಾಹನದಲ್ಲಿ ಕರೆದೊಯ್ದಿದ್ದಾರೆ ಎಂಬುದನ್ನು ದೃಶ್ಯಾವಳಿಗಳು ತೋರಿಸಿವೆ.
ಇವರಲ್ಲಿ ಒಬ್ಬ ಹೆಲ್ಮೆಟ್ ಧರಿಸಿದ್ದರೆ, ಮತ್ತೊಬ್ಬ ಬಟ್ಟೆ ಕಟ್ಟಿಕೊಂಡು ಮುಖ ಮುಚ್ಚಿಕೊಂಡಿದ್ದಾನೆ. ಒಬ್ಬ ಬೈಕ್ ಮೇಲೆ ಕುಳಿತು ಹುಡುಗಿಯನ್ನು ಕರೆತರುವುದಕ್ಕೆ ಕಾಯುತ್ತಿದ್ದ. ಅದೇ ಸಮಯಕ್ಕೆ ಮುಖಕ್ಕೆ ಬಟ್ಟೆ ಕಟ್ಟಿಕೊಂಡಿದ್ದ ವ್ಯಕ್ತಿ ಆಕೆಯನ್ನು ಹಿಡಿದು ಕೈಗಳಿಂದ ಮೇಲಕ್ಕೆ ಎತ್ತಿಕೊಂಡು ಬರುತ್ತಾನೆ. ಬಂದವನೇ ಬೈಕ್ನ ಮಧ್ಯೆ ಯುವತಿಯನ್ನು ಹೊಡಿದಿಟ್ಟುಕೊಂಡು ಕುಳಿತುಕೊಳ್ಳುತ್ತಾನೆ. ಆಗ ಸವಾರ ಬೈಕ್ ಓಡಿಸುತ್ತ ಮುಂದೆ ಸಾಗುತ್ತಾನೆ. ಈ ದೃಶ್ಯ ಪೆಟ್ರೋಲ್ ಪಂಪ್ ಬಳಿ ಅಳವಡಿಸಲಾಗಿದ್ದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಅಪಹರಣಕ್ಕೆ ಒಳಗಾದ ಯುವತಿ 19 ವರ್ಷದ ಬಿಎ ವಿದ್ಯಾರ್ಥಿನಿಯಾಗಿದ್ದಾಳೆ. ಈಕೆ ಭಿಂಡ್ ಜಿಲ್ಲೆಯ ನಿವಾಸಿ, ಸೋಮವಾರ ಬೆಳಿಗ್ಗೆ 8:50 ರ ಸುಮಾರಿಗೆ ಬಸ್‌ನಿಂದ ಕೆಳಗಿಳಿದ ಕೆಲವೇ ನಿಮಿಷಗಳಲ್ಲಿ ಅಪಹರಣಕ್ಕೊಳಗಾಗಿದ್ದಾಳೆ.
ತನ್ನ ಕುಟುಂಬ ಸದಸ್ಯರೊಂದಿಗೆ ದೀಪಾವಳಿ ಆಚರಿಸಲು ಭಿಂಡ್‌ಗೆ ತೆರಳಿದ್ದ ಆಕೆ ಪೆಟ್ರೋಲ್ ಪಂಪ್‌ನಲ್ಲಿ ಸಹೋದರನಿಗಾಗಿ ಕಾಯುತ್ತಿದ್ದಳು ಎನ್ನಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದು, ಇಬ್ಬರ ಪತ್ತೆಗೆ ಬಲೆ ಬೀಸಿದ್ದಾರೆ.
ಮತ್ತೊಂದು ವಿವಾದ ಮೈಮೇಲೆ ಎಳೆದುಕೊಂಡ ಚಾಲೆಂಜಿಂಗ್ ಸ್ಟಾರ್ – ಸಾರ್ವಜನಿಕವಾಗಿ ಲಾಂಗ್ ಹಿಡಿದು ದರ್ಶನ್ ಪೋಸ್