More

    ತೆರೆದ ಸ್ಟ್ರಾಂಗ್ ರೂಂ, ಮತ ಎಣಿಕೆ ಶುರು

    ತುಮಕೂರು: ಶಿರಾ ಉಪಸಮರದ ಮತ ಏಣಿಕೆ ಇದೀಗ ಆರಂಭವಾಗಿದ್ದು ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿನ ಸ್ಟ್ರಾಂಗ್ ರೂಂ ಬೆಳಗ್ಗೆ 7.30ಕ್ಕೆ ಅಭ್ಯರ್ಥಿಗಳ ಸಮ್ಮುಖದಲ್ಲಿ ತೆರೆಯಲಾಗಿದೆ. ಮತ ಎಣಿಕೆ ಆರಂಭದಲ್ಲಿ ಮೊದಲಿಗೆ ಅಂಚೆ ಮತ ಎಣಿಕೆ ಆರಂಭಿಸಲಾಗಿದೆ.
    ನ.3ರಂದು ನಡೆದ ಮತದಾನದಲ್ಲಿ ಶೇ.84.54 ಮತದಾನವಾಗಿತ್ತು. ಕ್ಷೇತ್ರದಲ್ಲಿ ಒಟ್ಟು 2,15,725 ಮತದಾರರಲ್ಲಿ 4,821 ಅಂಚೆ ಮತ ಸೇರಿ ಒಟ್ಟು 1,82,374 ಮತದಾರರು ಹಕ್ಕು ಚಲಾಯಿಸಿದ್ದರು.

    14 ಟೇಬಲ್ ವ್ಯವಸ್ಥೆ: ಸರ್ಕಾರಿ ಪಾಲಿಟೆಕ್ನಿಕ್‌ನಲ್ಲಿ ಇವಿಎಂ ಮತ ಎಣಿಕೆಗೆ 14 ಟೇಬಲ್‌ಗಳ ವ್ಯವಸ್ಥೆ ಮಾಡಲಾಗಿದೆ. ಪ್ರತಿ ಟೇಬಲ್‌ಗೆ ಒಬ್ಬ ಸೂಪರ್‌ವೈಸರ್, ಒಬ್ಬ ಸಹಾಯಕ ಹಾಗೂ ಒಬ್ಬ ಮೈಕ್ರೋ ಅಬ್ಸರ್ವರ್‌ ಅವರನ್ನು ನೇಮಕ ಮಾಡಲಾಗಿದೆ. ಅಂಚೆ ಮತಯಂತ್ರ ಹಾಗೂ ಸರ್ವೀಸ್ ವೋಟ್‌ಗಳ ಎಣಿಕೆಗೆ 4 ಟೇಬಲ್‌ಗಳ ವ್ಯವಸ್ಥೆ ಮಾಡಲಾಗಿದೆ. ಒಂದು ಕೊಠಡಿಯಲ್ಲಿ 7 ಟೇಬಲ್ ಮಾತ್ರ ಅಳವಡಿಸಲು ಚುನಾವಣಾ ಆಯೋಗ ಸೂಚಿಸಿರುವ ಹಿನ್ನೆಲೆಯಲ್ಲಿ ಪಾಲಿಟೆಕ್ನಿಕ್ ಕಾಲೇಜಿನ ಕೊಠಡಿಗಳಲ್ಲಿ ಮತ ಎಣಿಕೆ ನಡೆಯಲಿದೆ. ಅಂಚೆ ಮತಗಳ ಸಂಖ್ಯೆಯೂ 4821 ಇದ್ದು ಅವುಗಳ ಎಣಿಕೆಯೂ ಸ್ಥಳಾವಕಾಶ ಜಾಸ್ತಿ ಬೇಕಿದೆ. 14 ಟೇಬಲ್‌ನಲ್ಲಿ ಇವಿಎಂ ಮತ ಎಣಿಕೆ ಹಾಗೂ ಮತ್ತೊಂದು ಕೊಠಡಿಯ ಮೂರು ಟೇಬಲ್‌ನಲ್ಲಿ ಅಂಚೆ ಮತ ಎಣಿಕೆ ನಡೆಯಲಿದೆ.

    24 ಸುತ್ತಿನ ಮತ ಎಣಿಕೆ: ಸುಮಾರು 24 ಸುತ್ತಿನಲ್ಲಿ ಮತ ಎಣಿಕೆ ನಡೆಯಲಿದೆ. ಬೆಳಗಿನಿಂದ ಪಾಸ್‌ಗಳನ್ನು ಹೊಂದಿದವರಿಗೆ ಮಾತ್ರ ಪ್ರವೇಶ ನೀಡಲಾಗುತ್ತಿದ್ದು ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳು ಹಾಗೂ ಚುನಾವಣಾ ಏಜೆಂಟರುಗಳಿಗೆ ಎಣಿಕಾ ಕೇಂದ್ರಕ್ಕೆ ಪ್ರವೇಶಿಸಲು ಅವಕಾಶ ಕಲ್ಪಿಸಲಾಗಿದೆ. ಅಭ್ಯರ್ಥಿಗಳ ಅನುಕೂಲಕ್ಕಾಗಿ ಎಣಿಕಾ ಕೇಂದ್ರದ ಆವರಣದಲ್ಲಿ ಅಭ್ಯರ್ಥಿಗಳ ಕೊಠಡಿಯನ್ನು ಪ್ರತ್ಯೇಕವಾಗಿ ವ್ಯವಸ್ಥೆ ಮಾಡಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts