More

    ರಾಷ್ಟ್ರ ರಾಜಧಾನಿಯಲ್ಲಿ ಮತ್ತೆ ಆತಂಕ; ವಾಯುಮಾಲಿನ್ಯ ಸಂಕಷ್ಟದ ನಡುವೆಯೇ ಮತ್ತೊಂದು ಭೀತಿ!

    ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ಈಗಾಗಲೇ ವಾಯುಮಾಲಿನ್ಯ ಸಂಕಷ್ಟವನ್ನು ಅನುಭವಿಸುತ್ತಿದ್ದು, ಅದರ ನಡುವೆಯೇ ಇಲ್ಲಿನ ಜನರು ಮತ್ತೊಂದು ಭೀತಿಯಲ್ಲಿ ಬದುಕುವಂತಾಗಿದೆ. ಮೊನ್ನೆಯಷ್ಟೇ ಭೂಕಂಪನಕ್ಕೆ ಒಳಗಾಗಿದ್ದ ದೆಹಲಿಯಲ್ಲಿ ಇಂದು ಮತ್ತೆ ಭೂಮಿ ಕಂಪಿಸಿದೆ.

    ಪರ್ವತಗಳ ನಾಡು ನೇಪಾಳದಲ್ಲಿ ಶುಕ್ರವಾರ ರಾತ್ರಿ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ ಅದರ ತೀವ್ರತೆ 6.4 ದಾಖಲಾಗಿತ್ತು. ನೇಪಾಳದಲ್ಲಿನ ಈ ಭೂಕಂಪದ ತೀವ್ರತೆ ಎಷ್ಟಿತ್ತೆಂದರೆ ದೆಹಲಿ ಸೇರಿದಂತೆ ಉತ್ತರ ಭಾರತದ ಕೆಲವೆಡೆ ಭೂಮಿ ಕಂಪಿಸಿದೆ. ಅಲ್ಲದೆ ನೇಪಾಳದಲ್ಲಿ 74 ಮಂದಿ ಸಾವಿಗೀಡಾಗಿದ್ದು, 140ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು.

    ಇದನ್ನೂ ಓದಿ: ನೇಪಾಳದಲ್ಲಿ ಪ್ರಬಲ ಭೂಕಂಪ: ಸಾವಿನ ಸಂಖ್ಯೆ 70ಕ್ಕೆ ಏರಿಕೆ, ದೆಹಲಿಯಲ್ಲೂ ಕಂಪಿಸಿದ ಭೂಮಿ

    ಮೊನ್ನೆಯಷ್ಟೇ ಸಂಭವಿಸಿದ್ದ ಭೂಕಂಪನದ ಆತಂಕದಲ್ಲೇ ಇದ್ದ ದೆಹಲಿ ಜನತೆ ಇಂದು ಮತ್ತೆ ಭೂಮಿ ಕಂಪಿಸಿದ್ದರಿಂದ ನಡುಕಕ್ಕೆ ಒಳಗಾಗಿದ್ದಾರೆ. ಇಂದು ಪುನಃ ನೇಪಾಳದಲ್ಲಿ ಭೂಕಂಪ ಸಂಭವಿಸಿದ್ದು, ಅದರ ತೀವ್ರತೆ ರಿಕ್ಟರ್ ಮಾಪಕದಲ್ಲಿ 5.6 ದಾಖಲಾಗಿದೆ. ಈ ಭೂಕಂಪನದ ಪರಿಣಾಮವಾಗಿ ದೆಹಲಿಯ ಕೆಲವೆಡೆ ಭೂಮಿ ಕಂಪಿಸಿದ್ದು, ಜನರು ಆತಂಕಗೊಂಡಿದ್ದಾರೆ. ಈ ಕುರಿತ ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.

    ಇದನ್ನೂ ಓದಿ: ಯುವಕರೇಕೆ ಹೃದಯಾಘಾತಕ್ಕೆ ಒಳಗಾಗುತ್ತಿದ್ದಾರೆ ಎಂದು ಅಚ್ಚರಿಯೇ?: 70 ಗಂಟೆ ಕೆಲಸ.. ಮೂರ್ತಿ ವರ್ಸಸ್ ಮೂರ್ತಿ…

    ರಾಷ್ಟ್ರ ರಾಜಧಾನಿ ದೆಹಲಿ ಈಗಾಗಲೇ ವಾಯುಮಾಲಿನ್ಯದಿಂದ ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದು, ಜಗತ್ತಿನಲ್ಲೇ ಗರಿಷ್ಠ ವಾಯುಮಾಲಿನ್ಯ ಹೊಂದಿರುವ ಪ್ರದೇಶ ಎಂಬ ಕುಖ್ಯಾತಿಗೂ ಒಳಗಾಗಿದೆ. ವಾಯುಮಾಲಿನ್ಯವನ್ನು ಹೇಗೆ ನಿಯಂತ್ರಿಸುವುದು, ಎದುರಿಸುವುದು ಎಂಬ ಚಿಂತೆಯಲ್ಲಿರುವ ದೆಹಲಿ ಜನರಿಗೆ ಈಗ ಮೇಲಿಂದ ಮೇಲೆ ಭೂಕಂಪನ ಸಂಭವಿಸುತ್ತಿರುವುದು ತಲೆನೋವಾಗಿ ಪರಿಣಮಿಸಿದೆ.

    ವಿನಾಶಕಾರಿ ಭೂಕಂಪ ಮತ್ತೆ ಬರಬಹುದು, ಸಿದ್ಧತೆ ಅಗತ್ಯ…ಎಚ್ಚರಿಕೆ ನೀಡಿದ ವಿಜ್ಞಾನಿಗಳು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts