More

    ಗ್ರಾಮೀಣ ಕ್ರೀಡೆ ಉಳಿಸಲು ಶ್ರಮಿಸಿ

    ಮುದ್ದೇಬಿಹಾಳ: ಗ್ರಾಮೀಣ ಕ್ರೀಡೆಗಳನ್ನು ಪ್ರೋತ್ಸಾಹಿಸುವ ಜತೆಗೆ ಅವುಗಳ ಉಳಿವಿಗೆ ಎಲ್ಲರೂ ಶ್ರಮಿಸಬೇಕು ಎಂದು ಸಮಾಜ ಸೇವಕ ಎಂ.ಎನ್.ಮದರಿ ಹೇಳಿದರು.
    ತಾಲೂಕಿನ ಖಿಲಾರಹಟ್ಟಿ ಗ್ರಾಮದ ಬೀರಲಿಂಗೇಶ್ವರ, ಕಾಡಸಿದ್ಧೇಶ್ವರ ದೇವಸ್ಥಾನದಲ್ಲಿ ಭಾನುವಾರ ದಾಸಬೋಧೆ ಪುರಾಣ ಮಂಗಲೋತ್ಸವ ನಿಮಿತ್ತ ಏರ್ಪಡಿಸಿದ್ದ ಟಗರಿನ ಕಾಳಗ ಸ್ಪರ್ಧೆಗೆ ಚಾಲನೆ ನೀಡಿ ಅವರು ಮಾತನಾಡಿದರು.

    ಬಾಲಗಂಗಾಧರ ತಿಲಕ್ ಅವರು ಸ್ವಾತಂತ್ರ‍್ಯೋತ್ಸವಕ್ಕಾಗಿ ಸಾರ್ವಜನಿಕ ಗಣೇಶೋತ್ಸವ ಆಚರಣೆ ಜಾರಿಗೊಳಿಸಿದ್ದರು. ಅದೇ ರೀತಿ ಗ್ರಾಮೀಣ ಭಾಗದಲ್ಲಿ ಹಳ್ಳಿಗಾಡಿನ ಜನರ ಒಗ್ಗೂಡುವಿಕೆಗೆ ಟಗರಿನ ಕಾಳಗದಂತಹ ಆಟಗಳು ಪ್ರೇರಣೆಯಾಗಿವೆ ಎಂದರು.

    ಅಮರೇಶ ಮದರಿ, ಬೀರಪ್ಪ ಮದರಿ, ಕಿರಣ್ ಮದರಿ, ಬಸವರಾಜ ಗೂಡ್ಲಮನಿ, ಗುರಣ್ಣ ಹಾದಿಮನಿ, ವೀರೇಶ ಗೂಡ್ಲಮನಿ, ನೀಲಪ್ಪ ಮದರಿ, ಕಾಶಪ್ಪ ಮಾದರ, ಗುರುರಾಜ ಮದರಿ, ಮಲ್ಲಿಕಾರ್ಜುನ ಡೊಂಕಮಡು, ಸಂತೋಷ ಸೀಮಿಕೇರಿ, ರಾಘು ಕದ್ದಿನಹಳ್ಳಿ, ಮುತ್ತಪ್ಪ ನಾಯ್ಕೋಡಿ ಇತರರಿದ್ದರು.

    ಬಹುಮಾನ ವಿತರಣೆ : ಓಪನ್ ಟಗರಿನ ಕಾಳಗದಲ್ಲಿ ಬಾಗಲಕೋಟೆ ತಾಲೂಕಿನ ಸುಕನಾವದಗಿಯ ಲಕ್ಕಮ್ಮದೇವಿ ಪ್ರಥಮ, ಕೋಳೂರಿನ ಅಭ್ಯುದಯ ಟಗರು ದ್ವಿತೀಯ, ಖಿಲಾರಹಟ್ಟಿ ಮನ್ನೀರೇಶ್ವರ ಶಿವಮಣಿ ಟಗರು ತೃತೀಯ ಸ್ಥಾನ ಪಡೆಯಿತು. ಎರಡು ಹಲ್ಲಿನ ಟಗರಿನ ಕಾಳಗದಲ್ಲಿ ಇಲಾಳದ ಟಗರು ಪ್ರಥಮ, ಹಾರೋಗೇರಿಯ ಟಗರು ದ್ವಿತೀಯ, ಗಣಿ ಗ್ರಾಮದ ಟಗರು ತೃತೀಯ ಸ್ಥಾನ ಪಡೆದುಕೊಂಡಿತು. ನಾಲ್ಕು ಹಲ್ಲಿನ ಟಗರಿನ ಕಾಳಗದಲ್ಲಿ ಜಮ್ಮಲದಿನ್ನಿಯ ಟಗರಿಗೆ ಪ್ರಥಮ, ಬಳ್ಳಾರಿ ನಾಗ ದ್ವಿತೀಯ, ಆರೇಶಂಕರದ ಟಗರು ತೃತೀಯ ಸ್ಥಾನ ಪಡೆದುಕೊಂಡವು. ಆರು ಹಲ್ಲಿನ ಟಗರಿನ ಕಾಳಗದಲ್ಲಿ ನೀರಲಕೇರಿಯ ಬಲರಾಮ ಟಗರು ಪ್ರಥಮ, ಮುದ್ದೇಬಿಹಾಳದ ಶಿವಮಣಿ ಟಗರು ದ್ವಿತೀಯ, ನಾಲತವಾಡದ ದೋಸ್ತಿ ದರ್ಬಾರ್ ತೃತೀಯ ಸ್ಥಾನ ಪಡೆದುಕೊಂಡಿತು. ವಿಜೇತ ಟಗರುಗಳ ಮಾಲೀಕರಿಗೆ ಎಂ.ಎನ್.ಮದರಿ ಬಹುಮಾನ ವಿತರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts