More

    ಸಮಾಜದ ಒಳಿತಿಗಾಗಿ ಶ್ರಮಿಸಿರಿ

    ಕೋಲಾರ: ಸಮಾಜದ ಒಳಿತಿಗಾಗಿ ಯುವಕರು ಸೇವಾ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದು ಎಸ್​ಡಿಸಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಉಷಾ ಗಂಗಾಧರ್​ ಹೇಳಿದರು.

    ನಗರದ ಎಸ್​ಡಿಸಿ ಕಾಲೇಜಿನಲ್ಲಿ ರೋವರ್​&ರೇಂಜರ್​ ದಳಗಳನ್ನು ಗುರುವಾರ ಉದ್ಘಾಟಿಸಿ ಮಾತನಾಡಿ, ದೇಶದ ಭವಿಷ್ಯದ ಯುವಶಕ್ತಿಯ ಮೇಲೆ ಅಡಗಿದೆ. ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸಮಾಜಕ್ಕೆ ಕೊಡುಗೆ ನೀಡಬೇಕು ಎಂದರು.
    ಯುವಕರು ತಮ್ಮ ಶಕ್ತಿಯನ್ನು ವ್ಯರ್ಥ ಮಾಡದೇ ಸಮಾಜದ ಅಭಿವೃದ್ಧಿಗೆ ಉಪಯೋಗಿಸಬೇಕು. ಸ್ಕೌಟ್ಸ್​ &ಗೈಡ್ಸ್​ ಸಂಸ್ಥೆಯ ಸಿದ್ಧಾಂತಗಳನ್ನು ಹತ್ತಿರದಿಂದ ಬಲ್ಲೆನು. ಇಂದಿನ ಆಧುನಿಕ ಜಗತ್ತಿನಲ್ಲಿ ಕಾಡುತ್ತಿರುವ ಜಲ್ವಂತ ಸಮಸ್ಯೆಗಳಿಗೆ ಪರಿಹಾರಗಳನ್ನು ಕಾಣಲು ಶಿಬಿರಗಳನ್ನು ಆಯೋಜಿಸುತ್ತಿದ್ದು ಪ್ರತಿಯೊಬ್ಬರು ಪಾಲ್ಗೊಳ್ಳಬೇಕು ಎಂದರು.
    ಕಾಲೇಜಿನ ಎಲ್ಲ ವಿದ್ಯಾರ್ಥಿಗಳು ಶಿಬಿರಗಳಲ್ಲಿ ಭಾಗವಹಿಸಲು ಬೇಕಾದ ಮಾರ್ಗದರ್ಶನ ಹಾಗೂ ಸಹಕಾರ ನೀಡಲು ಸಂಸ್ಥೆಯ ಆಡಳಿತ ಮಂಡಳಿ ಸದಾ ಸಿದ್ಧ. ಯುವಕರು ವಾಹನ ಚಲಾಯಿಸುವಾಗ ರಸ್ತೆ ನಿಯಮಗಳನ್ನು ಪಾಲಿಸಬೇಕು. ಹೆಲ್ಮೆಟ್​ ಧರಿಸಿ ಚಲಿಸುವುದನ್ನು ರೂಡಿಸಿಕೊಳ್ಳಬೇಕು ಎಂದರು.
    ಜಿಲ್ಲಾ ಮುಖ್ಯ ಆಯುಕ್ತ ಕೆ.ವಿ.ಶಂಕರಪ್ಪ ಮಾತನಾಡಿ, ಸ್ಕೌಟ್ಸ್​ ಗೈಡ್ಸ್​ ಸಂಸ್ಥೆಯ ಸಂಸ್ಥಾಪಕ ಲಾರ್ಡ್​ ಬೇಡೆನ್​ ಪಾವೆಲ್​ 1907ರಲ್ಲಿಯೇ ಜಗತ್ತು ಮುಂದಿನ ಭವಿಷ್ಯದಲ್ಲಿ ಎದುರಿಸುವ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳಲು ಯುವಕರಿಂದ ಸಾಧ್ಯ ಎಂದು ತಿಳಿಸಿದ್ದಾರೆ ಎಂದರು. ಚಟುವಟಿಕೆ ಮತ್ತು ಗುಂಪುಗಳಲ್ಲಿ ಕಲಿಸುವ ಮೂಲಕ ಭವಿಷ್ಯಕ್ಕೆ ಬೇಕಾದ ಉತ್ತಮ ನಾಯಕ ನಾಯಕಿಯರನ್ನು ತಯಾರಿಸುವ ಸೇವಾ ಸಂಸ್ಥೆಯಾಗಿದೆ. ಎಲ್ಲರಿಗೂ ಮುಕ್ತವಾದ ಅವಕಾಶವಿದ್ದು ತಾವು ಉನ್ನತ ತರಬೇತಿ ಪಡೆದು ಕಾಲೇಜಿಗೆ ಕೀರ್ತಿ ತರಬೇಕು ಎಂದರು.
    ಕಾಲೇಜಿನ ಪ್ರಾಂಶುಪಾಲೆ ಪ್ರೊ.ಪುಷ್ಪಲತಾ ಮಾತನಾಡಿ, ರೋವರ್​ ಮತ್ತು ರೇಂಜರ್​ಗಳ ಧ್ಯೇಯ ಸೇವೆಯಾಗಿದ್ದು, ತಾವು ಇಂದಿನಿಂದಲೇ ಸೇವಾ ಗುಣಗಳನ್ನು ಮೈಗೂಡಿಕೊಳ್ಳಬೇಕು ಎಂದರು.
    ಜಿಲ್ಲಾ ಆಯುಕ್ತ ಕೆ.ಆರ್​.ಸುರೇಶ್​, ಸಹ ಕಾರ್ಯದರ್ಶಿ ವಿ.ಬಾಬು, ಜಿಲ್ಲಾ ಜಂಟಿ ಕಾರ್ಯದರ್ಶಿ ಉಮಾದೇವಿ, ಜಿಲ್ಲಾ ಸಹಾಯಕ ಆಯಕ್ತ ವಿಠ್ಠಲ್​ ರಾವ್​, ಸ್ಥಾನಿಕ ಆಯುಕ್ತೆ ಸುಮಂಗಲಿ ನೋಹ, ರೋವರ್​ ಲೀಡರ್​ ಸುಬ್ರಮಣಿ, ರೇಂಜರ್​ ಲೀಡರ್​ ರೇವತಿ, ಉಪನ್ಯಾಸಕರಾದ ರಜನಿಕಾಂತ್​, ಸದಾಶಿವ, ಶ್ರೀನಿವಾಸ, ಅರುಣ್​ ಕುಮಾರ್​ ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts