More

    ವೀರಶೈವ-ಲಿಂಗಾಯತ ಸಮಾಜಾಭಿವೃದ್ಧಿಗೆ ಶ್ರಮಿಸಿ

    ಕುಂದಗೋಳ: ಉಪಪಂಗಡಗಳಾಗಿ ವಿಂಗಡಿಸಿದ್ದರಿಂದ ವೀರಶೈವ ಲಿಂಗಾಯತ ಸಮಾಜವು ಹರಿದು ಹಂಚಿದಂತಾಗಿದೆ. ಎಲ್ಲರೂ ಒಗ್ಗೂಡಿ ಶೈಕ್ಷಣಿಕ, ಆರ್ಥಿಕವಾಗಿ ಹಿಂದುಳಿದಿರುವ ಸಮಾಜವನ್ನು ಮುಂದೆ ತರಬೇಕಿದೆ ಎಂದು ರಾಜ್ಯ ವೀರಶೈವ ಲಿಂಗಾಯತ ಯುವ ವೇದಿಕೆ ಅಧ್ಯಕ್ಷ ಪ್ರಶಾಂತ ಕಲ್ಲೂರ ಹೇಳಿದರು.

    ಪಟ್ಟಣದಲ್ಲಿ ಭಾನುವಾರ ಆಯೋಜಿಸಿದ್ದ ರಾಜ್ಯ ವೀರಶೈವ ಲಿಂಗಾಯತ ಯುವ ವೇದಿಕೆಯ ತಾಲೂಕು ಪದಾಧಿಕಾರಿಗಳ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ರಾಜಕಾರಣದಲ್ಲಿ ನಮ್ಮ ಸಮಾಜದ ನಾಯಕರು ಆಯ್ಕೆಯಾದ ಮೇಲೆ ಸಮಾಜದ ಏಳಿಗೆಗೆ ಶ್ರಮಿಸುತ್ತಿಲ್ಲ. ಆಯಾ ಪಕ್ಷಗಳ ಸಿದ್ಧಾಂತಕ್ಕೆ ಮಾರು ಹೋಗದೆ ಅವರೂ ಸಮಾಜದ ಅಭಿವೃದ್ಧಿಗೆ ಶ್ರಮಿಸುವಂತಾಗಬೇಕು ಎಂದು ಹೇಳಿದರು.

    ಸಮಾಜಕ್ಕೆ ಕೇಂದ್ರದಲ್ಲಿ ಒಬಿಸಿ ಮೀಸಲಾತಿ ರಾಜ್ಯದಲ್ಲಿ 2 ಎ ಮೀಸಲಾತಿ ನೀಡಬೇಕು. ಇಲ್ಲದಿದ್ದರೆ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳು ಉನ್ನತ ಸ್ಥಾನದಿಂದ ವಂಚಿತರಾಗಬೇಕಾಗುತ್ತದೆ. ಹೀಗಾಗಿ ನಮ್ಮ ಸಮಾಜದಲ್ಲಿರುವ ಒಣ ಪ್ರತಿಷ್ಠೆ ಗಳನ್ನು ಬದಿಗೊತ್ತಿ ಎಲ್ಲರೂ ಒಂದಾಗಿ ಹೋರಾಟ ಮಾಡದಿದ್ದರೆ ಮುಂಬರಲಿರುವ ದಿನದಲ್ಲಿ ಸಾಕಷ್ಟು ಸವಾಲುಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

    ರಾಜ್ಯ ವೀರಶೈವ ಲಿಂಗಾಯತ ಉಪಾಧ್ಯಕ್ಷ ಅಂದಾನಿ ಹಿರೇಮಠ ಮಾತನಾಡಿದರು. ಸಮಾಜದ ಮುಖಂಡ ಎ.ಬಿ. ಉಪ್ಪಿನ, ಜಿಲ್ಲಾಧ್ಯಕ್ಷ ಮಂಜುನಾಥ ಶಿವಕ್ಕನವರ, ಸಂಚಾಲಕ ಸಂಪತ ಕುಮಾರ ಸಾಲಿಮಠ, ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿರ್ದೇಶಕ ಶರಣಬಸಪ್ಪ ಅಂಗಡಿ, ಜಿಪಂ ಸದಸ್ಯ ಉಮೇಶ ಹೆಬಸೂರು, ಅರವಿಂದ ಕಟಗಿ, ರಮೇಶ ಕೊಪ್ಪಳ, ಪ್ರಕಾಶ ಗೌಡ ಪಾಟೀಲ, ಹನುಮಂತ ಗೌಡ್ರು ಕಮತದಮನೆ, ಬಸಲಿಂಗಪ್ಪ ಕೋರಿ, ಪ್ರಕಾಶ ಕಟಗಿ, ಗಂಗಾಧರ ಕೋಳಿವಾಡ, ಗುರುಸಿದ್ಧ ಗೌಡ ಮೇಲ್ಮಗಿ, ಶಿವಾನಂದ ಶಿವಳ್ಳಿ, ವಿರೂಪಾಕ್ಷಿ ಶೆಟ್ಟರ್, ಶ್ರೀಕಾಂತ ಹೂಗಾರ, ಶಂಕರ ಗಡ್ಡಪ್ಪನವರ, ಹನುಮಂತ ಶಿವಳ್ಳಿ, ಬಸು ಕೋನನವರ, ಶಂಕರ ನವಲಗುಂದ, ಲಕ್ಷ್ಮಣ ತಳವಾರ ಇತರರು ಉಪಸ್ಥಿತರಿದ್ದರು

    ಇದೇ ವೇಳೆ ವೀರಶೈವ ಲಿಂಗಾಯತ ಯುವ ವೇದಿಕೆಯ ನಗರ ಘಟಕದ ಅಧ್ಯಕ್ಷರನ್ನಾಗಿ ರಮೇಶ ಇಂಗಳಹಳ್ಳಿ, ಮಹಿಳಾ ಘಟಕದ ತಾಲೂಕಾಧ್ಯಕ್ಷರಾಗಿ ಪಪಂ ಸದಸ್ಯೆ ಸುನೀತಾ ಪಾಟೀಲ ಅವರನ್ನು ಆಯ್ಕೆ ಮಾಡಲಾಯಿತು. ನಗರ ಘಟಕದ ಮಹಿಳಾ ಅಧ್ಯಕ್ಷರಾಗಿ ನಿರ್ಮಲಾ ಕುಂದಗೋಳ, ಉಪಾಧ್ಯಕ್ಷರಾಗಿ ಪವಿತ್ರಾ ಹುಲ್ಲಣ್ಣವರ, ಯಲಿವಾಳ ಗ್ರಾಮ ಘಟಕದ ಅಧ್ಯಕ್ಷೆಯಾಗಿ ಸುವರ್ಣಾ ಪಾಟೀಲ ಅವರನ್ನು ನೇಮಕ ಮಾಡಲಾಯಿತು.

    ಈ ವೇಳೆ ಯುವ ವೇದಿಕೆ ಅಧ್ಯಕ್ಷ ಪ್ರಶಾಂತ ಕಲ್ಲೂರ ಹಾಗೂ ಉಪಾಧ್ಯಕ್ಷ ಅಂದಾನಿ ಹಿರೇಮಠ, ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ನಿರ್ದೇಶಕ ಶರಣಬಸಪ್ಪ ಅಂಗಡಿ ಅವರನ್ನು ಗೌರವಿಸಲಾಯಿತು.



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts