More

    ಮಕ್ಕಳ ಉಜ್ವಲ ಭವಿಷ್ಯಕ್ಕೆ ಶ್ರಮಿಸಿ

    ನವಲಗುಂದ: ಶಿಕ್ಷಕರು ವಿದ್ಯಾರ್ಥಿಗಳನ್ನು ಸರಿಸಮನಾಗಿ ಕಂಡು ಗುಣಮಟ್ಟದ ಶಿಕ್ಷಣ ನೀಡಿ ಅವರ ಉಜ್ವಲ ಭವಿಷ್ಯ ನಿರ್ವಣಕ್ಕೆ ಪಣ ತೊಡಬೇಕು ಎಂದು ಗವಿಮಠದ ಬಸವಲಿಂಗ ಸ್ವಾಮೀಜಿ ಹೇಳಿದರು.

    ಪಟ್ಟಣದ ಗವಿಮಠ ಶ್ರೀ ಸಿದ್ಧಲಿಂಗೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಯೋಜಿಸಿದ್ದ ವಾರ್ಷಿಕ ಸ್ನೇಹ ಸಮ್ಮೇಳನದ ಸಾನ್ನಿಧ್ಯವಹಿಸಿ ಅವರು ಮಾತನಾಡಿದರು. ಇಂದಿನ ಆಧುನಿಕ ಜಗತ್ತಿನಲ್ಲಿ ಕೇವಲ ಮಕ್ಕಳ ಮೇಲೆ ಒತ್ತಡ ಹಾಕದೆ ಅವರ ಅಭಿರುಚಿಗೆ ತಕ್ಕಂತೆ ಶಿಕ್ಷಣ ನೀಡಬೇಕು ಎಂದು ಪಾಲಕರಿಗೆ ಸಲಹೆ ನೀಡಿದರು.

    ಬಿಇಒ ಶಿವಾನಂದ ಮಲ್ಲಾಡ ಮಾತನಾಡಿ, ಶಿಕ್ಷಣ ಸಂಸ್ಥೆಗಳು ಪ್ರಥಮ ಸ್ಥಾನ ಪಡೆದುಕೊಂಡರೆ ಸಾಲದು. ವಿದ್ಯಾರ್ಥಿಗಳು ಯಾವ ಮಟ್ಟದಲ್ಲಿ ಬೆಳವಣಿಗೆಯಾಗಿದ್ದಾರೆ ಎಂಬುದನ್ನು ಅರಿತು ಬೋಧನೆ ಮಾಡಬೇಕು ಎಂದರು.

    ಸಂಸ್ಥೆಯ ನಿರ್ದೇಶಕ ಎ.ಎಸ್. ಭಾಗಿ, ಎಸ್.ಎಂ. ಪಟ್ಟಣಶೆಟ್ಟಿ, ಎಸ್.ಎ. ದೋಟಿಕಲ್, ವಿ.ಟಿ. ಕರಿಸಕ್ಕನವರ, ದೇವರಾಜ ಕರಿಯಪ್ಪನವರ, ಎಸ್.ಎ. ಕಾಳಗಿ, ಸಿದ್ದಲಿಂಗಯ್ಯ ಹಿರೇಮಠ, ಮುಖ್ಯಾಧ್ಯಾಪಕಿ ಅನ್ನಪೂರ್ಣ ಕಾಂಬಳೆ, ಶಿಕ್ಷಕಿಯರಾದ ಮಲ್ಲಮ್ಮ ಹಳ್ಳದ, ಲಾವಣ್ಯ ಮಸಾಲ್, ಜಿ. ಪುಷ್ಪ, ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts