More

    ಕೋಡಿಹಳ್ಳಿ ಚಂದ್ರಶೇಖರ್ ಸಮಾಜಘಾತುಕ ಶಕ್ತಿ

    ಶಿವಮೊಗ್ಗ: ಮುಷ್ಕರದ ನೆಪದಲ್ಲಿ ಸಾರಿಗೆ ನಿಗಮಗಳ ನೌಕರರನ್ನು ದಾರಿ ತಪ್ಪಿಸುತ್ತಿರುವ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಸಮಾಜಘಾತುಕ ಶಕ್ತಿ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಕಿಡಿಕಾರಿದರು.

    ಸರ್ಕಾರ 10ರಲ್ಲಿ 9 ಬೇಡಿಕೆಗಳನ್ನು ಈಡೇರಿಸಿದೆ. ಆದರೂ ಕಳೆದ ನಾಲ್ಕು ದಿನದಿಂದ ಮುಷ್ಕರ ನಡೆಸುವ ಮೂಲಕ ಕೋಟ್ಯಂತರ ಸಾರ್ವಜನಿಕರಿಗೆ ತೊಂದರೆ ನೀಡಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಅಶಾಂತಿ ಎಬ್ಬಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ವಾಗ್ದಾಳಿ ಮಾಡಿದರು.

    ರಾಜ್ಯದಲ್ಲಿ 50ಕ್ಕೂ ಅಧಿಕ ನಿಗಮಗಳಿವೆ. ಈ ನಿಗಮಗಳಲ್ಲಿ 4ರಿಂದ 5 ಲಕ್ಷ ಸಿಬ್ಬಂದಿಗಳಿದ್ದು, ಸರ್ಕಾರಿ ನೌಕರರಿಗಿಂತ ಹೆಚ್ಚು ವೇತನ ಪಡೆಯುತ್ತಿದ್ದಾರೆ. ಕೋಡಿಹಳ್ಳಿ ಚಂದ್ರಶೇಖರ್ ಮಾತು ಕೇಳಿ ಸಾರಿಗೆ ನಿಗಮಗಳ ನೌಕರರು ಬಸ್ ಸಂಚಾರ ಸ್ಥಗಿತಗೊಳಿಸಿದ್ದು ಸರಿಯಲ್ಲ. ಸರ್ಕಾರ ನೌಕರರ ಪರವಾಗಿದ್ದು ದುವರ್ತನೆ ತೋರಿದ 1 ಲಕ್ಷಕ್ಕೂ ಅಧಿಕ ನೌಕರರ ಕುಟುಂಬ ಬೀದಿಗೆ ಬೀಳುವ ಸಾಧ್ಯತೆ ಇತ್ತು ಎಂದು ಎಚ್ಚರಿಕೆ ನೀಡಿದರು.

    ನೇಮಕಾತಿ ಸಂದರ್ಭದಲ್ಲೇ ಸರ್ಕಾರಿ ನೌಕರರಲ್ಲ ಎಂದು ಒಪ್ಪಿಗೆಗೆ ಸಹಿ ಪಡೆದ ನಂತರವೇ ಕೆಲಸ ನೀಡಲಾಗುತ್ತದೆ. ಎಲ್ಲ ನಿಗಮಗಳ ಸಿಬ್ಬಂದಿಯನ್ನು ಸರ್ಕಾರಿ ನೌಕರರೆಂದು ಪರಿಗಣಿಸಿದರೆ ತೆರಿಗೆ ಹಣ ಸೇರಿ ಎಲ್ಲವನ್ನೂ ನಿಗಮಗಳ ನೌಕರರಿಗೆ ನೀಡಬೇಕಾಗುತ್ತದೆ ಎಂದರು.

    ಸರ್ಕಾರದೊಂದಿಗೆ ಮಾತುಕತೆ ನಡೆಸಿ ನಂತರ ಫ್ರೀಡಂಪಾರ್ಕ್​ಗೆ ತಲುಪಿದ ನಂತರ ಯೂ ಟರ್ನ್ ಹೊಡೆದ ಯೂನಿಯನ್ ಮುಖಂಡರ ವಿರುದ್ಧವೂ ಕಿಡಿಕಾರಿದ ಈಶ್ವರಪ್ಪ, ಯಾರದ್ದೋ ಮಾತು ಕೇಳಿ ಮುಷ್ಕರ ನಡೆಸುತ್ತಿರುವ ಯೂನಿಯನ್​ಗೆ ಸ್ವಂತ ನಿರ್ಧಾರ ತೆಗೆದುಕೊಳ್ಳುವ ಶಕ್ತಿ ಇಲ್ಲವೇ? ಎಂದು ಪ್ರಶ್ನಿಸಿದರು.

    ಕೋಡಿಹಳ್ಳಿ ಅವರನ್ನು ನಂಬಿ ರೈತರು ಮತ್ತು ನೌಕರರು ಇನ್ಮುಂದೆ ಹುಷಾರಾದ ಹೆಜ್ಜೆ ಇಡಬೇಕಿದೆ. ಸರ್ಕಾರ ಕರೊನಾ ನಿಯಂತ್ರಣದಲ್ಲಿ ಮಗ್ನವಾಗಿದ್ದರೆ, ಕೋಡಿಹಳ್ಳಿ ಶಾಂತಿ ಕದಡುವ ಕೆಲಸ ಮಾಡುತ್ತಿದ್ದಾರೆ. ಟ್ರೇಡ್ ಯೂನಿಯನ್ ಸದಸ್ಯರೇ ಕೋಡಿಹಳ್ಳಿ ವಿರುದ್ಧ ತಿರುಗಿ ಬೀಳಲಿದ್ದಾರೆ. ಕೋಡಿಹಳ್ಳಿ ಬೆನ್ನ ಹಿಂದೆ ಕಾಣದ ಕೈಗಳು ಕೆಲಸ ಮಾಡುತ್ತಿವೆ. ಇದು ರಾಜಕೀಯ ಪ್ರೇರಿತ ಎಂದು ದೂರಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts