More

    ಬೀದಿದೀಪ ಖರೀದಿಗೆ ಒಪ್ಪಿಗೆ ನೀಡದ ಜಿಲ್ಲಾಡಳಿತ: ಕಂಬಗಳಿಗೆ ಲಾಟೀನ್ ಕಟ್ಟಿ ಆಕ್ರೋಶ

    ಕುರುಗೋಡು: ಬೀದಿದೀಪ ಖರೀದಿಸಲು ಜಿಲ್ಲಾಡಳಿತ ಅನುಮೋದನೆ ನೀಡದ ಹಿನ್ನೆಲೆಯಲ್ಲಿ ಕುಡತಿನಿ ಪಪಂ ಅಧ್ಯಕ್ಷ ವಿ.ರಾಜಶೇಖರ ನೇತೃತ್ವದಲ್ಲಿ ಸದಸ್ಯರು, ಸ್ಥಳೀಯ ಮುಖಂಡರು ಶುಕ್ರವಾರ ವಿದ್ಯುತ್ ಕಂಬಗಳಿಗೆ ಲಾಟೀನ್ ದೀಪ ಕಟ್ಟುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಿದರು.

    ಪಪಂ ಅಧ್ಯಕ್ಷ ವಿ.ರಾಜಶೇಖರ್ ಮಾತನಾಡಿ, ಪಪಂ ಬಜೆಟ್‌ನಲ್ಲಿ ಬೀದಿದೀಪ ಅಳವಡಿಕೆಗೆ ಹಣ ಮೀಸಲು ಇಡಲಾಗಿದೆ. ಆದರೆ, ದೀಪಗಳನ್ನು ಖರೀದಿಸಲು ಜಿಲ್ಲಾಡಳಿತ ಅನುಮೋದನೆ ನೀಡುತ್ತಿಲ್ಲ. ಕುಡತಿನಿಯಲ್ಲಿ 1660 ಕಂಬಗಳಿದ್ದು, ಇದರಲ್ಲಿ 1075 ಕಂಬಗಳಿಗೆ ಮಾತ್ರ ಬೀದಿ ದೀಪಗಳಿವೆ. ಅದರಲ್ಲಿ 100 ದೀಪಗಳು ಮಳೆ ಸಂದರ್ಭದಲ್ಲಿ ಹಾಳಾಗಿವೆ. ಜಿಲ್ಲಾಡಳಿತದ ನಡೆ ಖಂಡಿಸಿ ನೂರಾರು ಕಂಬಗಳಿಗೆ ಲಾಟೀನ್ ದೀಪಗಳನ್ನು ಹಚ್ಚಲು ಮುಂದಾಗಿದ್ದೇವೆ. ಇನ್ನೂ 500 ಲಾಟೀನ್‌ಗಳನ್ನು ಅನ್‌ಲೈನ್‌ನಲ್ಲಿ ಬುಕ್ ಮಾಡಲಾಗಿದೆ ಎಂದು ತಿಳಿಸಿದರು. ಮುಖಂಡರಾದ ದೊಡ್ಡಬಸಪ್ಪ, ಪ್ರತಾಪ್, ಅಗಸರ ರಾಜ, ಐ.ಲೋಕೇಶ್, ಸಂಪತ್ ಕುಮಾರ್, ಗಂಗಾಧರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts