More

    ಬೀದಿಗಿಳಿದವರಿಗೆ ಲಾಠಿ ಏಟು

    ಖಾನಾಪುರ: ಪಟ್ಟಣ ಸೇರಿ ತಾಲೂಕಿನಾದ್ಯಂತ ಮಂಗಳವಾರವೂ ಲಾಕ್‌ಡೌನ್ ಮಂದುವರಿಯಿತು. ಪಟ್ಟಣದ ಮತ್ತು ತಾಲೂಕಿನ ಬಹುತೇಕ ಗ್ರಾಮಗಳ ಅಂಗಡಿ-ಮುಂಗಟ್ಟುಗಳು, ವಾಣಿಜ್ಯ ಮಳಿಗೆಗಳು ಬಂದ್ ಆಗಿದ್ದವು. ಸಾರಿಗೆ ವ್ಯವಸ್ಥೆ ಸ್ಥಗಿತಗೊಂಡಿದ್ದರಿಂದ ಜನಸಂಚಾರ ವಿರಳವಾಗಿತ್ತು. ಇಡೀ ತಾಲೂಕಿನ ರಸ್ತೆಗಳು ವಾಹನದಟ್ಟಣೆ ಹಾಗೂ ಜನದಟ್ಟಣೆಯಿಲ್ಲದೆ ಬಿಕೋ ಎನ್ನುತ್ತಿದ್ದವು.

    ಸರ್ಕಾರ ಹೊರಡಿಸಿದ ನಿಷೇಧಾಜ್ಞೆ ಕರೆ ನಡುವೆಯೂ ಮನೆಯಿಂದ ಹೊರಬಂದು ಅಗತ್ಯ ವಸ್ತುಗಳ ಖರೀದಿಗಾಗಿ ಪ್ರಯತ್ನಿಸುತ್ತಿದ್ದ ನಾಗರಿಕರ ಮೇಲೆ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಚದುರಿಸಿದ ಘಟನೆ ಮಂಗಳವಾರ ಮಧ್ಯಾಹ್ನ ಪಟ್ಟಣದ ಶಿವಸ್ಮಾರಕ ವೃತ್ತ ಮತ್ತು ಸ್ಟೇಶನ್ ರಸ್ತೆಯಲ್ಲಿ ವರದಿಯಾಯಿತು. ತರಕಾರಿ, ಹಾಲು, ಔಷಧಿ, ಹಣ್ಣು-ಹಂಪಲು, ದಿನಸಿ ಪದಾರ್ಥಗಳ ಅಂಗಡಿಗಳ ಮುಂದೆ ಖರೀದಿಗಾಗಿ ನೆರೆದಿದ್ದ ಜನಸಂದಣಿಯನ್ನು ಚದುರಿಸಿದ ಪೊಲೀಸರು ಗುಂಪಾಗಿ ಸೇರಿ ಸಾರ್ವಜನಿಕರನ್ನು ಎಚ್ಚರಿಸಿದರು. ಪೊಲೀಸರು ಮತ್ತು ನಾಗರಿಕರ ನಡುವೆ ವಾಗ್ವಾದ ನಡೆಯಿತು.

    ಬಸ್, ಅಟೋ, ಟ್ಯಾಕ್ಸಿ ಸೇರಿ ಎಲ್ಲ ವಾಹನಗಳ ಸಂಚಾರ ವಿರಳವಾಗಿತ್ತು. ಬೆಳಗಾವಿ-ಪಣಜಿ ರಾಷ್ಟ್ರೀಯ ಹೆದ್ದಾರಿ, ಬೆಳಗಾವಿ-ತಾಳಗುಪ್ಪ, ಜತ್ತ-ಜಾಂಬೋಟಿ, ಬೀಡಿ-ಬೆಳವಣಕಿ, ರಾಮನಗರ-ಕಟಕೋಳ ಮತ್ತು ಸಿಂಧನೂರು-ಹೆಮ್ಮಡಗಾ ರಾಜ್ಯ ಹೆದ್ದಾರಿಗಳಳಲ್ಲಿ ವಾಹನ ಸಂಚರಿಸಲಿಲ್ಲ. ಮಧ್ಯಾಹ್ನದ ನಂತರ ಪಟ್ಟಣದ ಮಾರುಕಟ್ಟೆಯಲ್ಲಿ ಕಿರಾಣಿ, ಔಷಧಿ, ಹಾಲು, ಹಣ್ಣು ಮತ್ತು ತರಕಾರಿ ಮಳಿಗೆಗಳು ಕಾರ್ಯನಿರ್ವಹಿಸಲು ಪ್ರಾರಂಭಿಸಿದ್ದರಿಂದ ನಾಗರಿಕರು ಅಗತ್ಯ ವಸ್ತು ಖರೀದಿಸಿದರು. ಆದರೆ, ಅಂಗಡಿ-ಮುಂಗಟ್ಟುಗಳನ್ನು ಪೊಲೀಸರು ಮತ್ತು ಪಟ್ಟಣ ಪಂಚಾಯಿತಿ ಸಿಬ್ಬಂದಿ ಬಂದ್ ಮಾಡಿಸಿದರು. ಪಪಂ ವತಿಯಿಂದ ಪಟ್ಟಣದ ಎಲ್ಲ ಬಡಾವಣೆಗಳಲ್ಲಿ ಸ್ವಚ್ಛತಾ ಅಭಿಯಾನ ಮತ್ತು ಫಾಗಿಂಗ್ ಕೈಗೊಳ್ಳಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts