More

    ಶ್ವಾನಗಳ ನಿಯಂತ್ರಣಕ್ಕೆ ಸಂತಾನಶಕ್ತಿ ಹರಣ

    ಬ್ರಹ್ಮಾವರ: ಬೀದಿನಾಯಿಗಳ ಉಪಟಳ ಕಡಿಮೆ ಮಾಡಲು ಸರ್ಕಾರ ಬೀದಿನಾಯಿಗಳ ಸಂತಾನ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುತ್ತಿದೆ. ಸರ್ವೋಚ್ಚ ನ್ಯಾಯಾಲಯದ ಸೂಚನೆಯಂತೆ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬೀದಿನಾಯಿಗಳನ್ನು ಹಿಡಿದು ಸಂತಾನಶಕ್ತಿ ಹರಣ ಮಾಡಲಾಗುತ್ತಿದ್ದು, ಬ್ರಹ್ಮಾವರ ತಾಲೂಕಾದ್ಯಂತ ಈ ಕಾರ್ಯಕ್ಕೆ ಚಾಲನೆ ಸಿಕ್ಕಿದೆ. ಮಹಾರಾಷ್ಟ್ರ ಭಾಗದಿಂದ ನುರಿತ ವೈದ್ಯರ ತಂಡ ಮತ್ತು ಸಹಾಯಕರು ಇದಕ್ಕಾಗಿ ಶ್ರಮಿಸುತ್ತಿದ್ದಾರೆ. ಬೆಳಗಿನ ನಸುಕಿನಲ್ಲಿ ತಂಡ ಬೀದಿ ಬದಿ ಇರುವ ನಾಯಿಗಳನ್ನು ಸೆರೆ ಹಿಡಿದು ನೀರು, ಆಹಾರ ನೀಡಿ ಒಂದು ದಿನ ಬ್ರಹ್ಮಾವರ ಪಶು ಆರೋಗ್ಯ ಕೇಂದ್ರದಲ್ಲಿ ಬಿಟ್ಟು ಬಳಿಕ ಅದರ ಆರೋಗ್ಯ ಸ್ಥಿತಿ ಕಂಡು ಸಂತಾನಶಕ್ತಿ ನಿಯಂತ್ರಣ ಶಸ್ತ್ರ ಚಿಕಿತ್ಸೆ ಮಾಡಿ ಮತ್ತೆ ಒಂದು ದಿನ ಇರಿಸಿ, ಬಳಿಕ ತಂದ ಜಾಗಕ್ಕೇ ಬಿಡಲಾಗುತ್ತದೆ. ಬಾರಕೂರು ಹನೆಹಳ್ಳಿ ಗ್ರಾಮ ಪಂಚಾಯಿತಿಯಿಂದ 15 ಬೀದಿನಾಯಿಗಳಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ದಿನವೊಂದಕ್ಕೆ 2ರಿಂದ 30ರಷ್ಟು ನಾಯಿಗಳಿಗೆ ಶಸ್ತ್ರಚಿಕಿತ್ಸೆ ಮಾಡಲಾಗುತ್ತಿದೆ. ಡಾ.ವಿಜಯ್ ಕಾಂಬ್ಳೆ, ಡಾ.ಬಿಜು ಪ್ರಸಾದ್ ನೇತೃತ್ವದ ವೈದ್ಯರ ತಂಡಕ್ಕೆ ಪಂಚಾಯಿತಿ ಕಾರ್ಯದರ್ಶಿ ಉಮೇಶ್ ಕಲ್ಯಾಣಪುರ, ಅಧ್ಯಕ್ಷೆ ಚಂದ್ರಾವತಿ ಆಚಾರ್ಯ ಮತ್ತು ಸಿಬ್ಬಂದಿ ಸಹಕಾರ ನೀಡಿದ್ದಾರೆ.

    ಬೀದಿನಾಯಿಗಳ ಸಂತಾನ ನಿಯಂತ್ರಣಕ್ಕೆ ಶಸ್ತ್ರಚಿಕಿತ್ಸೆ ಮಾಡುವುದು ಉತ್ತಮ ಕಾರ್ಯಕ್ರಮ. ನಾಯಿಗಳನ್ನು ಕೊಲ್ಲುವ ಬದಲು ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಯಿಂದ ಬೀದಿ ನಾಯಿಗಳಿಂದ ಆಗುವ ಅನೇಕ ತೊಂದರೆ ನಿವಾರಣೆಯಾಗಲಿದೆ.
    ಡಾ.ಮಹೇಶ್ ಶೆಟ್ಟಿ, ಬ್ರಹ್ಮಾವರ ಪಶು ಆಸ್ಪತ್ರೆ ಸಹಾಯಕ ನಿರ್ದೆಶಕ

    ಎ ದರ್ಜೆಯ ಪ್ರತಿ ಗ್ರಾಮ ಪಂಚಾಯಿತಿಗಳಿಗೆ ಬೀದಿನಾಯಿಗಳ ಸಂತಾನ ನಿಯಂತ್ರಣ ಶಸ್ತ್ರ ಚಿಕಿತ್ಸೆ ಮಾಡಿಸಲು 50 ಸಾವಿರ ರೂ. ಮತ್ತು ಬಿ ದರ್ಜೆಯ ಪಂಚಾಯಿತಿಗಳಿಗೆ 25 ಸಾವಿರ ರೂ. ಕಾಯ್ದಿರಿಸಲಾಗುತ್ತದೆ. ಪ್ರತಿ ಪಂಚಾಯಿತಿಗಳು ಈ ಕಾರ್ಯಕ್ರಮ ಅನುಷ್ಠಾನಕ್ಕೆ ತರುವುದು ಉತ್ತಮ.
    ಅರುಂಧತಿ ಏಸುಮನೆ, ಅಭಿವೃದ್ಧಿ ಅಧಿಕಾರಿ ಹನೆಹಳ್ಳಿ ಗ್ರಾಪಂ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts