More

    ಹೊಳೆ ದಡಕ್ಕೆ ಹೋಗದಂತೆ ಸೂಚನೆ

    ಅಥಣಿ ಗ್ರಾಮೀಣ: ಅಥಣಿ ತಾಲೂಕಿನ ಕೃಷ್ಣಾ ನದಿ ಹರಿವು ಹೆಚ್ಚಿದ್ದರಿಂದ ದಡಕ್ಕೆ ಗ್ರಾಮಸ್ಥರು ಜಾನುವಾರು ತೆಗೆದುಕೊಂಡು ಹೋಗಬಾರದು ಎಂದು ಬೆಳಗಾವಿ ಜಿಪಂ ಯೋಜನಾ ನಿರ್ದೇಶಕ ರವೀಂದ್ರ ಬಂಗಾರೆಪ್ಪನವರ ತಿಳಿಸಿದರು.

    ಅಥಣಿ ತಾಲೂಕಿನ ಕಷ್ಣಾನದಿ ಪ್ರವಾಹ ಮುನ್ನೆಚ್ಚರಿಕೆ ಕ್ರಮವಾಗಿ ಸತ್ತಿ, ದರೂರ ಗ್ರಾಮದ ಕೃಷ್ಣಾ ನದಿಗೆ ಭಾನುವಾರ ಭೇಟಿ ನೀಡಿ ಬಳಿಕ ಹಿಪ್ಪರಗಿ ಅಣೆಕಟ್ಟೆಗೆ ತೆರಳಿ ನೀರು ಹರಿವಿನ ಪ್ರಮಾಣದ ಮಾಹಿತಿ ಪಡೆದು ಮಾತನಾಡಿದರು. ಹಿಪ್ಪರಗಿ ಅಣೆಕಟ್ಟೆಗೆ 92 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದ್ದು. ಇಷ್ಟೇ ಪ್ರಮಾಣದ ನೀರನ್ನು ಹೊರ ಬಿಡಲಾಗುತ್ತಿದೆ. ಆದರೂ, ಮಹಾರಾಷ್ಟ್ರದ ಕೊಂಕಣ ಪ್ರದೇಶದಲ್ಲಿ ಮಳೆ ಹೆಚ್ಚಾಗಿ ಸುರಿಯುತ್ತಿರುವುದರಿಂದ ಪ್ರತಿದಿನ ಕಷ್ಣಾ ನದಿಗೆ ನೀರು ಹೆಚ್ಚಿಗೆ ಬರುವ ಸಂಭವವಿದ್ದು, ಜನರು ನದಿ ದಡಕ್ಕೆ ಹೋಗಬಾರದು. ತಾಲೂಕಾಡಳಿತ ಮತ್ತು ಸಂಬಂಧಪಟ್ಟ ಗ್ರಾಪಂ ಅಕಾರಿಗಳಿಗೆ ಸಹಕಾರ ನೀಡಿ ಪ್ರವಾಹದಲ್ಲಿ ಆಗುವ ಸಮಸ್ಯೆ ದೂರಮಾಡಬೇಕು ಎಂದರು. ಪಿಡಿಒಗಳಾದ ಕಷ್ಣಾ ಸತ್ತಿಗೇರಿ, ನಾಗರಾಜ ಕಾಂಬಳೆ, ವೀರೇಶ ಮಠದ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts