More

    ಮಗುವಿಗೆ ಕಚ್ಚಿ ಗಾಯಗೊಳಿಸಿದ ಬೀದಿನಾಯಿ ಹಿಂಡು

    ರಟ್ಟಿಹಳ್ಳಿ: ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದ ಬಾಲಕನಿಗೆ ಬೀದಿ ನಾಯಿಯೊಂದು ಕಚ್ಚಿ ಗಂಭೀರವಾಗಿ ಗಾಯಗೊಳಿಸಿರುವ ಘಟನೆ ಪಟ್ಟಣದ ಕೋಟೆ ಓಣಿಯ ಟಿಪ್ಪು ನಗರದಲ್ಲಿ ಸೋಮವಾರ ಜರುಗಿದೆ.

    3 ವರ್ಷದ ರಿಯಾನ್ ಆರೀಫ್ ಸವಣೂರ ಬೀದಿನಾಯಿಯಿಂದ ಗಾಯಗೊಂಡ ಮಗು. ಟಿಪ್ಪು ನಗರದ ಉರ್ದು ಶಾಲೆಯ ಬಳಿ ನಾಲ್ಕೈದು ಬೀದಿನಾಯಿಗಳು ಕಚ್ಚಾಡುತ್ತ ಮನೆಯ ಹೊರಗಡೆ ಇದ್ದ ಬಾಲಕನ ಮೇಲೆ ಏಕಾಏಕಿ ದಾಳಿ ಮಾಡಿ ಕಚ್ಚಿ ಗಾಯಗೊಳಿಸಿವೆ. ಕೂಡಲೇ ಸ್ಥಳೀಯರು ಬೀದಿನಾಯಿಗಳನ್ನು ಓಡಿಸಿ ಮಗು ರಕ್ಷಿಸಿದ್ದಾರೆ. ಗಾಯಗೊಂಡಿದ್ದ ಮಗುವನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

    ಶಾಸಕ ಯು.ಬಿ. ಬಣಕಾರ ಭೇಟಿ: ಮಾಹಿತಿ ತಿಳಿದು ಸಾರ್ವಜನಿಕ ಆಸ್ಪತ್ರೆಗೆ ಶಾಸಕ ಯು.ಬಿ. ಬಣಕಾರ ಭೇಟಿ ನೀಡಿದರು. ಮಗುವಿಗೆ ಸೂಕ್ತ ಚಿಕಿತ್ಸೆ ನೀಡಿ. ಒಂದು ವೇಳೆ ಹೆಚ್ಚುವರಿ ಚಿಕಿತ್ಸೆಗೆ ಅವಶ್ಯವಿದ್ದರೆ ಬೇರೆಡೆ ಚಿಕಿತ್ಸೆಗೆ ಕಳುಹಿಸಿ ಎಂದು ಸೂಚಿಸಿದರು. ಆಗ ವೈದ್ಯರು, ಇಲ್ಲಿಯೇ ಸೂಕ್ತ ಚಿಕಿತ್ಸೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.

    ಶಾಸಕ ಯು.ಬಿ. ಬಣಕಾರ ಅವರು ಪಪಂ ಮುಖ್ಯಾಧಿಕಾರಿ ಸಂತೋಷ ಚಂದ್ರಖೇರ ಅವರೊಂದಿಗೆ ಮಾತನಾಡಿ, ಪಟ್ಟಣದಲ್ಲಿನ ಬೀದಿನಾಯಿ ಹಾವಳಿಗೆ 2-3 ದಿನಗಳಲ್ಲಿ ಕಡಿವಾಣ ಹಾಕಲು ಸೂಚಿಸಿದ್ದಾರೆ.

    ರಟ್ಟಿಹಳ್ಳಿ ಪಟ್ಟಣದಲ್ಲಿ ಕಳೆದ 8-10 ದಿವಸಗಳ ಹಿಂದೆ ಒಂದು ತಂಡದಿಂದ ಬೀದಿನಾಯಿಗಳನ್ನು ಸುರಕ್ಷಿತವಾಗಿ ಸೆರೆ ಹಿಡಿಸಿ, ದೂರದ ಅರಣ್ಯ ಪ್ರದೇಶಗಳಿಗೆ ಬಿಡಲಾಗಿದೆ. 2-3 ದಿನದಲ್ಲಿ ತಂಡ ಕರೆಯಿಸಿ, ಉಳಿದ ಬೀದಿನಾಯಿಗಳನ್ನು ಸೆರೆ ಹಿಡಿಸಲಾಗುವುದು.
    I ಸಂತೋಷ ಚಂದ್ರಖೇರ, ಪಪಂ ಮುಖ್ಯಾಧಿಕಾರಿ ರಟ್ಟಿಹಳ್ಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts