More

    ಬೈಕ್ ಸವಾರರಿಗೆ ಭೀತಿ ತಂದೊಡ್ಡಿದ ಬಿಡಾಡಿ ನಾಯಿ

    ದಾವಣಗೆರೆ: ನಗರದಲ್ಲಿ ಶ್ವಾನಗಳ ಆಶ್ರಯತಾಣ ನಿರ್ಮಿಸುವಂತೆ ಸಚಿವರು ಹಾಗೂ ಜಿಲ್ಲಾಡಳಿತಕ್ಕೆ ಪ್ರಾಣಿ ಸಂರಕ್ಷಣಾ ಸಮಿತಿ ಹಾಗೂ ಕರುಣಾ ಜೀವ ಕಲ್ಯಾಣ ಟ್ರಸ್ಟ್ ಮನವಿ ಮಾಡಿವೆ.

    ನಗರದಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚುತ್ತಿದೆ. ರಾತ್ರಿ ವೇಳೆ ಮಕ್ಕಳು, ವಯೋವೃದ್ಧರು, ಸೈಕಲ್-ಬೈಕ್ ಸವಾರರು ರಸ್ತೆಗಳಲ್ಲಿ ಸಂಚರಿಸುವುದು ಕಷ್ಟವಾಗಿದೆ.

    ಬಿಡಾಡಿ ನಾಯಿಗಳ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಮೂಲಕ ಹಾವಳಿಗೆ ತಡೆಗೆ ಬಹಳಷ್ಟು ಹಣ ಖರ್ಚು ಮಾಡಿದ್ದರೂ ಸಫಲವಾಗಿಲ್ಲ ಎಂದು ತಿಳಿಸಿದ್ದಾರೆ.

    ಹಂದಿಗಳ ಆಶ್ರಯ ತಾಣಕ್ಕಾಗಿ ನಗರದ ಹೊರಭಾಗದಲ್ಲಿ ಜಿಲ್ಲಾಡಳಿತ ಭೂಮಿ ನೀಡುತ್ತಿದೆ ಎನ್ನಲಾಗಿದ್ದು, ಅದರ ಪಕ್ಕದಲ್ಲೇ ನಾಯಿಗಳಿಗೂ ಒಂದು ಎಕರೆ ಜಾಗ ನೀಡಿ ಆಶ್ರಯ ತಾಣ ನಿರ್ಮಿಸಬೇಕು.

    ಹಾಗಾದರೆ ಆಸಕ್ತ ಸ್ವಯಂ ಸೇವಾ ಸಂಸ್ಥೆಗಳು ಇದನ್ನು ನೋಡಿಕೊಳ್ಳಲು ಮುಂದಾಗಬಹುದು ಎಂದಿದ್ದಾರೆ.

    ಶ್ವಾನಗಳನ್ನು ಹಿಡಿದು ಆಪರೇಷನ್ ಮಾಡುವುದು, ರೇಬಿಸ್ ಚುಚ್ಚುಮದ್ದು ಖರ್ಚಿನ ಶೇ.20ರಷ್ಟು ಹಣ ನೀಡಿದರೆ ಆಶ್ರಯ ತಾಣ ನಿಭಾಯಿಸಿ ಬೀದಿ ನಾಯಿಗಳ ಹಾವಳಿ ಸಂಪೂರ್ಣ ನಿವಾರಿಸಬಹುದು ಎಂದು ಸಂಘಟನೆ ಪದಾಧಿಕಾರಿಗಳಾದ ಬಸವಕುಮಾರ್, ಡಾ.ಎಸ್.ಬಿ. ರವಿಕುಮಾರ್, ಡಾ.ಶಶಿಧರ್ ತವಣೆ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts